ಪ್ರಥಮ ದರ್ಜೆ ಕಾಲೇಜಿನಲ್ಲಿ ಲೀಕ್ ಓಟ್ ಏಕವ್ಯಕ್ತಿ ನಾಟಕ ಪ್ರದರ್ಶನ

ಪ್ರಥಮ ದರ್ಜೆ ಕಾಲೇಜಿನಲ್ಲಿ ಲೀಕ್ ಓಟ್ ಏಕವ್ಯಕ್ತಿ ನಾಟಕ ಪ್ರದರ್ಶನ  Leak Oat one-man play performance at First Grade College

                   

                      ಕಂಪ್ಲಿ 24:  ತಾವು ನಗುವಾಗ ಪ್ರೇಕ್ಷಕರನ್ನೂ ನಗಿಸಿ, ತಾವು ಅಳುವಾಗ ಎಲ್ಲರನ್ನೂ ತನ್ನೊಟ್ಟಿಗೆ ಅಳಿಸಿ ಬಿಡುವ ಅಪೂರ್ವ ನಟಿ ಅಕ್ಷತಾ ಪಾಂಡವಪುರ ಎನ್ನುವುದನ್ನು ಕಂಪ್ಲಿಯಲ್ಲಿ ಪ್ರದರ್ಶನ ಮಾಡಿದ ಲೀಕ್ ಓಟ್ ಏಕವ್ಯಕ್ತಿ ನಾಟಕದ 120ನೇ ಪ್ರಯೋಗದಲ್ಲಿ ಸಾಬೀತು ಮಾಡಿವುದರ ಜೊತೆಗೆ ನೋಡುಗರ ಕಣ್ಣಲ್ಲಿ ನೀರನ್ನು ತರಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನ್ನಪೂರ್ಣ ಕ್ರಿಯೇಷನ್ಸ್‌ ಸಿರಿಗೇರಿಯವರು ಏರಿ​‍್ಡಸಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಟಿ, ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಏಕಪಾತ್ರ ಅಭಿನಯದ ಲೀಕ್‌ಓಟ್ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳನ್ನು, ಪ್ರೇಕ್ಷಕರನ್ನು ಮನಸೂರೆಗೊಂಡರು.

                      ರಂಗಭೂಮಿ ನಟಿ ಅಕ್ಷತಾ ಪಾಂಡವಪುರ ಅವರು ತಮ್ಮ ಲೀಕ್‌ಓಟ್ ಏಕಪ್ರಾತ್ರಾಭಿನಯದ ನಾಟಕಕ್ಕೆ ತಾವು ಎಲ್ಲಿ ಪ್ರದರ್ಶನ ಮಾಡುತ್ತಾರೆಯೋ ಅಲ್ಲಿನ ಮನಸ್ಸಿಗೆ ನಾಟುವಂತಹ ಸಾಹಿತ್ಯವನ್ನು, ಕಥೆಗಳನ್ನು ಆಯ್ಕೆ ಮಾಡಿಕೊಂಡು ಅಭಿನಯಿಸುವ ಮೂಲಕ ನೋಡಗರ ಗಮನ ಸೆಳೆಯುತ್ತಾರೆ. ಅಂತೆಯೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರದರ್ಶನಗೊಂಡ 120ನೇ ಪ್ರದರ್ಶನದಲ್ಲಿ ಬಳ್ಳಾರಿಯ ಸಾಹಿತಿ ಸುಧೀಂದ್ರ ರಾವ್ ರಚಿಸಿದ ಸಂಡೂರಿನ ಜಾಗಟೆ ಗುಂಡಣ್ಣ ಮತ್ತು ಅವರ ಮಗಳು ಹುಲಿಗೆಮ್ಮನ ಕಥೆಯನ್ನು ಆಧರಿಸಿ ನಾಟಕ ಪ್ರದರ್ಶನ ಮಾಡಿದ್ದು ನೋಡುಗರ ಗಮನ ಸೆಳೆಯಿತು.ನಾಟಕವನ್ನು ಉದ್ಘಾಟಿಸಿದ ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕೆರೆಂ.ಹೇಮಯ್ಯಸ್ವಾಮಿ ಮಾತನಾಡಿ, ಅಕ್ಷತಾ ಪಾಂಡವಪುರ ಅವರ ಲೀಕ್ ಓಟ್ ನಾಟಕ ಉತ್ತಮವಾಗಿ ಮೂಡಿಬರುತ್ತಿದೆ. ನಮ್ಮಲ್ಲಿ ಪ್ರದರ್ಶನ ಮಾಡುವುದಕ್ಕೆ ನಮ್ಮ ಭಾಗದ ಕಥೆಯನ್ನೇ ಆರಿಸಿಕೊಂಡಿರುವುದು ನೋಡುಗರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.  

                        ಪಾತ್ರದಾರಿ ಅಕ್ಷತಾ ಪಾಂಡವಪುರ ಅವರು ಏಕಾಗ್ರತೆಯಿಂದ ಅಭಿನಯಿಸುತ್ತಾರ ವಿದ್ಯಾರ್ಥಿಗಳಲ್ಲಿ ಹಾಗೂ ಪ್ರೇಕ್ಷಕರಲ್ಲಿ ಏಕಾಗ್ರತೆ ಇದ್ದರೆ ನಾಟಕದ ವಸ್ತು ಅರಿಯಲು ಸಾಧ್ಯವೆಂದರು.ಕಾಲೇಜಿನ ಉಪನ್ಯಾಸಕ ಬಾಲಾಜಿ ಎಂ.ಪಿ. ಹಾಗೂ ಉಪಪ್ರಾಚಾರ್ಯ ಡಾ.ಮಹೇಶ್ ಕಾರ್ಯಕ್ರಮದಲ್ಲಿ ಮಾತನಾಡಿದರು ಅಕ್ಕಿಗಿರಣಿ ಮಾಲಿಕರ ಕನ್ನಡ ಹಿತರಕ್ಷಕ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಅನ್ನಪೂರ್ಣ ಗುಡದೂರು, ಕೆ.ಕುಮಾರ್, ಖಲೀಲ, ರಜ್ಮಾ ಟಿ.ಎಂ.ಆರ್, ಗ್ರಂಥಪಾಲಕ ವೀರಭದ್ರ​‍್ಪ, ಗಣ್ಯರಾದ ಬಿ.ಅಂಬಣ್ಣ, ಅಕ್ಕಮಹಾದೇವಿ ಮಹಿಳಾ ಬಳಗದ ಪದಾಧಿಕಾರಿಗಳು ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.