ಲೋಕದರ್ಶನ ವರದಿ
ಬೆಳಗಾವಿ 20: ಆಕಸ್ಮಿಕವಾಗಿ ನಗರದ ಚನ್ನಮ್ಮ ನಗರದ ಸರಕಾರಿ ಶಾಲೆಗೆ ಭೇಟಿ ನೀಡಿದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಕ್ಕಳೊಂದಿಗೆ ಬೆರೆತು, ಅವರೊಂದಿಗೆ ಪ್ರೀತಿಯಿಂದ ಊಟ ಮಾಡಿದರು, ಸರಕಾರಿ ಶಾಲೆಗೆ ಬರುವ ಬಡಮಕ್ಕಳ ಭಾವನೆಗಳಿಗೆ ಸ್ಪಂದಿಸುವ ಭಾಗವಾಗಿ, ಶಾಲೆಯ ಬಿಸಿ ಊಟ ಆಹಾರ ಗುಣಮಟ್ಟ ಸ್ವಂತ ತಾವೇ ಊಟ ಮಾಡಿ ಪರೀಕ್ಷಿಸಿದರು, ಶಾಲೆಯ ಆವರಣದ ಸ್ವಚ್ಛತೆ, ಶಾಲೆಯ ಮೂಲಭೂತ ಸೌಕರ್ಯಗಳ ಪೀಠೋಪಕರಣಗಳು, ಕ್ರೀಡಾ ಸಾಮಗ್ರಿಗಳು, ಮಕ್ಕಳ ಸಾಹಿತ್ಯ, ಇತ್ಯಾದಿಗಳ ಕುರಿತು ಮಾಹಿತಿ ಪಡೆದು ಸಂಬಂಧಿಸಿದ ಶಿಕ್ಷಣ ಅಧಿಕಾರಿಗಳಿಗೆ ಖುದ್ದಾಗಿ ಚಚರ್ೆ ನಡೆಸಿದರು.
ಮಕ್ಕಳ ಗುಣಮಟ್ಟ ಶಿಕ್ಷಣ ನೀಡಲು ಶಿಕ್ಷಕರ ಅಭಾವದ ಬಗ್ಗೆ ಶಾಲೆಯ ಮಕ್ಕಳು ತಮ್ಮ ಭಾವನೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕರು, ಈ ಸಮಸ್ಯೆ ನಿವಾರಣೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಶಿಕ್ಷಕರೊಂದಿಗೆ ಮಾತನಾಡಿ, ಮಕ್ಕಳ ಸವರ್ಾಂಗೀಣ ವಿಕಾಸದಲ್ಲಿ ನಿಮ್ಮ ಯೋಗದಾನ ಮಹತ್ವದ್ದು, ಹಾಗಾಗೀ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು. ಶಾಸಕರ ಈ ಆಕಸ್ಮಿಕ ಬೇಸಿಗೆ ಕ್ಷೇತ್ರ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.