ಕಾನೂನು ಕಾಯರ್ಾಗಾರ
ಹಾವೇರಿ29: ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸವರ್ೇಕ್ಷಣಾಧಿಕಾರಿಗಳ ಘಟಕ ತಂಬಾಕು ನಿಯಂತ್ರಣ ಕೋಶದಿಂದ ಶಿಕ್ಷಣ ಇಲಾಖೆ, ಪುರಸಭೆ, ನಗರಸಭೆ, ಬಿಆರ್ಸಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕರು ಆಹಾರ ಸುರಕ್ಷಿತ ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ, ಜಿಲ್ಲೆಯ ಆಯ್ದ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ 2003 ಅಔಖಿಕಂ ಕಾನೂನು ಕುರಿತು ಕಾಯರ್ಾಗಾರ ಜ.29 ರಂದು ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಜರುಗಿತು.
ಕಾಯರ್ಾಗಾರ ಉದ್ಘಾಟಿಸಿದ ಜಿಲ್ಲೆಯ ನೋಡೆಲ್ ಅಧಿಕಾರಿ ಡಾ ಪ್ರಶಾಂತ ಅವರು 2003 ಅಔಖಿಕಂ ಕಾನೂನು ಕುರಿತು ಮಾಹಿತಿ ನೀಡಿದರು. ಕಾಯರ್ಾಗಾರದ ಸದುಪಯೋಗಪಡೆದುಕೊಂಡು ಸಮುದಾಯದಲ್ಲಿ ಅರಿವು ಮೂಡಿಸುವ ಮೂಲಕ ತಂಬಾಕಿನಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಬೇಕೆಂದು ಹೇಳಿದರು.
ಕಾಯರ್ಾಗಾರದಲ್ಲಿ ಜಿಲ್ಲೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ. ಎಂ. ಜಯಾನಂದ, ಡಾ. ಜಗದೀಶ ಪಾಟೀಲ, ಮನರೋಗ ತಜ್ಞ ಡಾ.ಬಳಿಗಾರ, ತಾಲೂಕಾ ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಡಾ. ಸಂತೋಷ ದಡ್ಡಿ ಹಾಗೂ ವಿಭಾಗೀಯ ಸಮಾಲೋಚಕ ಮಹಾಂತೇಶ ಉಳ್ಳಾಗಡ್ಡಿ ಮುಂತಾದವರು ಹಾಜರಿದ್ದರು.
ಆರೋಗ್ಯ ಮೇಲ್ವಿಚಾರಕ ಶಂಕರ ಸುತಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಪ್ತ ಸಮಾಲೋಚಕ ದಾದಾಪೀರ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 