ರಾಷ್ಟ್ರೀಯ ಸೇವಾ ಯೋಜನೆಗೆ ಚಾಲನೆ

Launch of National Service Scheme

ರಾಷ್ಟ್ರೀಯ ಸೇವಾ ಯೋಜನೆಗೆ ಚಾಲನೆ 

ಯಮಕನಮರಡಿ 07: ಸ್ಥಳೀಯ ಸಿಇಎಸ್ ಪದವಿಪೂರ್ವ ಮಹಾವಿದ್ಯಾಲಯದ 2024-25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ದಿ.7 ರಂದು ಆನಂದಪೂರ-ಹತ್ತರಗಿ ಮಹಾದೇವ ದೇವಸ್ಥಾನದಲ್ಲಿ ಶೂನ್ಯ ಸಂಪಾದನಾ ಪೀಠ ಹುಣಸಿಕೊಳ್ಳ ಮಠದ ಸಿದ್ದಬಸವ ದೇವರು ದಿವ್ಯ ಸಾನಿದ್ಯವನ್ನು ವಹಿಸಿ ದ್ವಜಾರೋಹನ ನೇರವೇರಿಸಿ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಉಪನ್ಯಾಸಕರು ಸರ್ಕಾರಿ ಪಧವಿಪೂರ್ವ ಕಾಲೇಜು ಬಾಡ ಎ ಡಿ ಮರಾಠೆ ವಹಿಸಿ ಮಾತನಾಡಿದರು.  

ಹತ್ತರಗಿ ಪಂಚಾಯತ ಅಧ್ಯಕ್ಷ ಸಮೀರ್ ಬೇಪಾರಿ ಪ್ರಾಚಾರ್ಯ ವ್ಹಿ.ಬಿ.ನಾಶಿಪುಡಿ ಯೋಜನಾಧಿಕಾರಿ ಎಮ್ ಆಯ್ ಮಠಪತಿ ಹಾಗೂ ಉಪನ್ಯಾಸಕ ಎ ಬಿ ನಾಯಿಕ ಹಾಗೂ ಹೀರಿಯ ಪತ್ರಕರ್ತರಾದ ಗೋಪಾಲ ಚಪಣಿ ಉಪಸ್ಥಿತರಿದ್ದು ವಿದ್ಯಾಥೀಗಳು ಸಸಿಗೆ ನಿರುಣಿಸುವ ಮೂಲಕ 7 ದಿನಗಳ ವರೆಗೆ ನಡೆಯುವ ಸೇವಾ ಶಿಬಿರಕ್ಕೆ ಚಾಲನೆ ನೀಡಿದರು.