ಪಂಚಮಸಾಲಿ ಸಮಾಜದವರ ಮೇಲಿನ ಲಾಠಿಚಾರ್ಜ್‌ ಖಂಡನೀಯ

Lathicharge on Panchamasali Samaj is condemnable

ಪಂಚಮಸಾಲಿ ಸಮಾಜದವರ ಮೇಲಿನ ಲಾಠಿಚಾರ್ಜ್‌ ಖಂಡನೀಯ

ಯಲಬುರ್ಗಾ 14: ಪಂಚಮಸಾಲಿ ಸಮಾಜದವರು ಮೊದಲಿನಿಂದಲೂ ಅತ್ಯಂತ ಶಾಂತಿಯುತವಾಗಿ ಹೋರಾಟ ನಡೆಸಿಕೊಂಡು ಬಂದಿರುವದು ಎಲ್ಲರಿಗೂ ಗೊತ್ತಿರುವ ವಿಷಯ ಅಂತವರ ಮೇಲೆ ಲಾಠಿಚಾರ್ಜ ಮಾಡಿರುವದು ಅತ್ಯಂತ ಖಂಡನೀಯ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಹೇಳಿದರು. ಜೆಡಿಎಸ್ ಪಕ್ಷದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಕ್ಷೇತ್ರದ ಶಾಸಕರು ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪಂಚಮಸಾಲಿ ಸಮಾಜದವರಿಂದ ಆಯ್ಕೆಯಾಗಿದ್ದು ಅವರು ಸಹಿತ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಆಗಿದ್ದು ಅವರು ಸದನದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಒತ್ತಾಯಿಸಬೇಕು ಹಾಗೂ ಸಮಾಜದ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಬೇಕು ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಅದೇ ಸಮಾಜದಿಂದ ಅವರ ರಾಜಕೀಯ ಜೀವನ ಅಂತ್ಯವಾಗುವದು ಎಂದರು.  ಜೆಡಿಎಸ್ ತಾಲೂಕ ಅಧ್ಯಕ್ಷ ಬಸವರಾಜ ಗುಳಗುಳಿ ಮಾತನಾಡಿ ನಮ್ಮ ಸಮಾಜದ ಭಾಂದವರು ತಮ್ಮ ಹಕ್ಕಿಗಾಗಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದು ಅದನ್ನು ಹತ್ತಿಕ್ಕುವ ಹುನ್ನಾರ ಮಾಡುತ್ತಿದೆ ನ್ಯಾಯ ಒದಗಿಸಬೇಕಾದ ಸರಕಾರ ಪ್ರಚೋದನೆ ಮಾಡುತ್ತಿದೆ ಇದರಿಂದ ಮುಂದೆ ರಾಜ್ಯದಲ್ಲಿ ಅನೇಕ ಸಮಸ್ಯೆಗಳು ಉದ್ಭವವಾಗುವ ಎಲ್ಲಾ ಲಕ್ಷಣಗಳಿವೆ ಅದನ್ನು ತಪ್ಪಿಸಬೇಕಾದರೆ ತಕ್ಷಣ ಮೀಸಲಾತಿಯನ್ನು ಘೋಷಣೆ ಮಾಡಬೇಕು. ಸಿದ್ದರಾಮಯ್ಯ ಸರಕಾರ ಹಿಟ್ಲರ್ ಆಡಳಿತ ನಡೆಸುತ್ತಿದೆ ಶಾಂತ ರೀತಿಯಲ್ಲಿಮಾಡುತ್ತಿರುವ ಹೋರಾಟಕ್ಕೆ ಬೆಲೆ ಕೊಡದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕರ ಮೇಲೆ ಮೊಕದ್ದಮೆ ದಾಖಲಿಸಿದ್ದು ತಕ್ಷಣ ಅದನ್ನ ಹಿಂಪಡೆಯಬೇಕು ಹಾಗೂ ಗಾಯಾಳುಗಳ ಖರ್ಚುಗಳನ್ನ ಸರಕಾರವೇ ನೋಡಿಕೊಳ್ಳಬೇಕು ಮತ್ತು ಸಿದ್ದರಾಮಯ್ಯ ತಕ್ಷಣ ಪಂಚಮಸಾಲಿ ಸಮಾಜದವರ ಕ್ಷಮೆ ಕೋರಬೇಕು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಶರಣಪ್ಪ ರಾಂಪೂರ ಇದ್ದರು.