ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಅಶ್ಲೀಲ ಪದ ಬಳಸಿರುವುದು ಭುವನೇಶ್ವರಿ ಮಾತೆಗೆ ಹಾಗೂ ಭಾರತ ಮಾತೆಗೆ ಮಾಡಿದ ಅಪಮಾನ

Lakshmi's use of obscene words against Hebbalaka is an insult to Bhubaneswari and Mother India.

ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಅಶ್ಲೀಲ ಪದ ಬಳಸಿರುವುದು ಭುವನೇಶ್ವರಿ ಮಾತೆಗೆ ಹಾಗೂ ಭಾರತ ಮಾತೆಗೆ ಮಾಡಿದ ಅಪಮಾನ  

ವಿಜಯಪುರ 20: ಬೆಳಗಾವಿಯ ಸುವರ್ಣಸೌಧದ ಪರಿಷತ್ ಕಲಾಪದ ಸಂದರ್ಭದಲ್ಲಿ ಬಿಜೆಪಿಯ ಸಿ.ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ವಿರುದ್ಧ ಅಶ್ಲೀಲ ಪದ ಬಳಸಿರುವುದು ಭುವನೇಶ್ವರಿ ಮಾತೆಗೆ ಹಾಗೂ ಭಾರತ ಮಾತೆಗೆ ಮಾಡಿದ ಅಪಮಾನವಾಗಿದೆ ಎಂದು ಜಿಲ್ಲೆಯ ಯುವ ಕಾಂಗ್ರೇಸ್ ನಾಯಕಿ ಕು.ಆರತಿ ಶಹಾಪೂರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಳಗಾವಿಯ ಸುವರ್ಣಸೌಧದ ಪರಿಷತ್ ಕಲಾಪದಲ್ಲಿ ಬಿಜೆಪಿಯ ಸಿ.ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ವಿರುದ್ಧ ಅಶ್ಲೀಲ ಪದ ಬಳಸಿರುವುದನ್ನು ತೀವ್ರವಾಗಿ ಖಂಡಿಸಿರುವ ಯುವ ಕಾಂಗ್ರೇಸ್ ನಾಯಕಿ ಕು.ಆರತಿ ಶಹಾಪೂರ ಅವರು ಭಾರತ ಮಾತಾ ಕೀ ಜೈ ಎಂದು ಹೇಳುವ ಪಕ್ಷಕ್ಕೆ ಇದು ಶೋಭೆ ತರುವಂತಹುದೇ? ನಿಮಗೆ ತಾಯಿ, ಅಕ್ಕ, ತಂಗಿ ಇಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ. 

ರಾಜಕಾರಣದಲ್ಲಿ ರೋಷಾವೇಶವಾಗಿ ಮಾತನಾಡಬಹುದು, ಆದರೆ ಸಿ.ಟಿ ರವಿ ಹೇಳಿದ ಪದ ಹೇಳೋದಕ್ಕೂ ಅಸಹ್ಯವಾಗುತ್ತೆ. ಒಂದು ವೇಳೆ ಸಿ.ಟಿ ರವಿ ಅವರ ಪರವಾಗಿ ನಿಲ್ಲುವ ಎಲ್ಲರೂ ಧೃತರಾಷ್ಟ್ರರಾಗುತ್ತಾರೆ. ತಮ್ಮ ವಿರುದ್ಧದ ಇಂತಹ ಪದಪ್ರಯೋಗದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮನನೊಂದಿದ್ದು, ಇಂತಹ ಪದಬಳಕೆಯೂ ಒಂದು ರೀತಿಯ ಲೈಂಗಿಕ ದೌರ್ಜನ್ಯವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. 

ಯಾವ ಹೆಣ್ಣೂ ಸಹ ನನ್ನನ್ನ ಪ್ರಾಸಿಟ್ಯೂಟ್ ಅಂದ್ರು ಅಂತ ಸುಳ್ಳು ಅಥವಾ ಸುಮ್ಮನೆ ಹೇಳುವುದಿಲ್ಲ. ಸಿ.ಟಿ ರವಿ ಆ ಪದ ಬಳಕೆ ಮಾಡಿದ್ದು ನಿಜ. ನಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಡ್ರಗ್ ಅಡಿಕ್ಟ್‌ ಎಂದು ಮಾತನಾಡಿದ್ರು ಆಗ ನೀವು ಅಪಘಾತದಲ್ಲಿ ಇಬ್ಬರ ಕೊಲೆ ಮಾಡಿದ್ದೀರಿ, ಕೊಲೆಗಡುಕರು ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಕೂಗಿದ್ರು.. ಆಗ ಸಿ.ಟಿ. ರವಿ ಪ್ರಾಸಿಟ್ಯೂಟ್ ಅಂತ ಬಾರೀ ಕೂಗಿದ್ದು ನಿಜವೆಂದು ಆ ಸಂದರ್ಭದಲ್ಲಿ ಉಪಸ್ಥಿತರಿದ್ದ ಅನೇಕರು ಹೇಳುತ್ತಿದ್ದು, ಈ ನಿಟ್ಟಿನಲ್ಲಿ ಕೂಡಲೇ ಸಿ.ಟಿ ರವಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

ಸಿ ಟಿ ರವಿ ಅವರೇ, ಹೆಣ್ಣನ್ನು ಹಾಗೆ ಕರೆಯೋದು (ವೇಶ್ಯೆ ಅಂತಾ) ಬಹಳ ಸುಲಭ, ಆದರೆ ಹೆಣ್ಣನ್ನು (ವೇಶ್ಯೆ) ಹಾಗೆ ಮಾಡುವುದೇ ಗಂಡು ಎನ್ನುವ ಕನಿಷ್ಠ ಪ್ರಜ್ಞೆ ನಿಮಗಿರಲಿ. ನಿಮ್ಮ ಮಾತು, ನಿಮ್ಮ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ನಿಮ್ಮ ಎಲುಬಿಲ್ಲದ ನಾಲಿಗೆಯನ್ನು ಬೇಕಾಬಿಟ್ಟಿ ಹರಿಬಿಡಬೇಡಿ. ಅಭಿವೃದ್ದಿಯ ಕಡೆ ಗಮನವಿಟ್ಟು, ಕೆಲಸ ಮಾಡುವುದನ್ನು ಬಿಟ್ಟು ಟೀಕೆಗಳಲ್ಲೇ ಕಾಲಹರಣ ಮಾಡುವ ನಾಲಾಯಕ ನಾಯಕರಿಗೆ ಛೀಮಾರಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.