ಲಕ್ಕುಂಡಿ : ತಂಬಾಕು ಮುಕ್ತ ಯುವಜನರಲ್ಲಿ ಜಾಗೃತಿ ಮೂಡಿಸಲು ಕರೆ
Lakkundi: Call to create awareness among tobacco-free youth
ಗದಗ 12 : ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಹಾಗೂ ಶ್ವಾಸ ಸಂಬಂಧಿ ಇತ್ಯಾದಿ ಅನೇಕ ಕಾಯಿಲೆಗಳು ಬರುತ್ತವೆ. ಶಾಲಾ /ಕಾಲೆಜುಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಯನ್ನಾಗಿ ಘೋಷಿಸುವ ಗುರಿ ಹೊಂದಲಾಗಿದೆ ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿಯ ಎಲ್ಲ ಉಪಕೇಂದ್ರದಲ್ಲಿ ತಂಬಾಕು ಸೇವೆನೆ ತಡೆಗಟ್ಟು-ಗ್ರಾಮದ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿ ಜಾಗೃತಿಯನ್ನು ಮೂಡಿಸಲುವಲ್ಲಿ ಮತ್ತು ರೋಗಗಳ ಬಗ್ಗೆ ಕಾಳಜಿಯನ್ನು ವಹಿಸಿಕೊಳ್ಳುವಂತೆ ಆರೋಗ್ಯ ಜಾಗೃತಿಯನ್ನು ಮೂಡಿಸಬೇಕೆಂದು ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಸಿದ್ದಪ್ಪ ಎನ್ ಲಿಂಗದಾಳ ಹೇಳಿದರು
ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿಯಲ್ಲಿ ಏರಿ್ಡಸಲಾಗಿದ್ದ ತಂಬಾಕು ಮುಕ್ತ ಯುವ ಅಭಿಯಾನ 3.0 ಮತ್ತು ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಇಂದು ಯುವ ಜನರು ತಂಬಾಕು ಬಿಡಿ ಸಿಗರಾ ಮತ್ತು ಗುಟ್ಕಾ ಮುಂತಾದ ವ್ಯಸನಕ್ಕೆ ದಾಸರಾಗುತ್ತಿದ್ದು ವಿಶ್ವದಾದ್ಯಂತ ಕ್ಯಾನ್ಸರ್ , ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆಗಳಿಗೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ. ಪ್ರತಿ ವರ್ಷ ವಿಶ್ವದಾದ್ಯಂತ 6 ಸೆಕೆಂಡುಗಳಿಗೊಬ್ಬರಂತೆ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸೇವನೆ ಮಾಡುವವರು ತಂಬಾಕು ಸೇವನೆ ಮಾಡದವರಿಗಿಂತ 10 ವರ್ಷ ಹೆಚ್ಚು ವಯಸ್ಸಾದವರಂತೆ ಕಾಣುತ್ತಾರೆ. ಆದ್ದರಿಂದ ನಾವು ಶಾಲಾ ಕಾಲೇಜ ಮತ್ತು ಇನ್ನೀತರ ಸ್ಥಳಗಳಲ್ಲಿ ಕಾರ್ಯಕ್ರಮಗಳ ಮೂಲಕ ತಂಬಾಕು ವ್ಯಸನಕ್ಕೆ ಒಳಗಾಗಿರುವ ಯುವಜನರನ್ನು ವ್ಯಸನದಿಂದ ಹೊರಬರಲು ಪ್ರೋತ್ಸಾಹಿಸುವುದು ಈ ಅಭಿಯಾನದ ಮುಖ್ಯ ಉದ್ದೇಶಗಳಾಗಿವೆ ಈ ಮಹತ್ವದ ಕಾರ್ಯಕ್ರಮಕ್ಕೆ ಸಾರ್ವಜನಿಕರ ಶಿಕ್ಷಕರ ಸಹಕಾರ ಅವಸ್ಯವಾಗಿ ನೀಡಬೇಕಾಗಿದೆ ಎಂದು ಹೇಳಿದರು
ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ವಾಯ್ ಎನ್ ಕಡೇಮನಿ ಮಾತನಾಡಿ ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ತಂಬಾಕುಮುಕ್ತ ಯುವ ಅಭಿಯಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪೊಲೀಸ ಇಲಾಖೆ ಸಹಕಾರದೊಂದಿಗೆ ಕೋಟ್ಪಾ ದಾಳಿ ಹಾಗೂ ಸಮುದಾಯ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಈ ಬಗ್ಗೆ ಪ್ರತಿಯೊಂದು ಗ್ರಾಮದಲ್ಲಿ ಸಮಗ್ರಹವಾದ ಮಾಹಿತಿಯನ್ನು ಸಾರ್ವಜನಿಕರಿಗೆ ಯುವಜನಾಂಗಕ್ಕೆ ತಿಳಿಸುವಲ್ಲಿ ಆರೋಗ್ಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರುಗಳು ಪ್ರಮುಖಪಾತ್ರವನ್ನು ವಹಿಸಿ ತಂಬಾಕು ಮುಕ್ತ ಗ್ರಾಮ ವನ್ನಾಗಿಸುವಲ್ಲಿ ಶ್ರಮಿಸಬೇಕೆಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈದ್ಯಾಧಿಕಾರಿಗಳಾದ ಡಾ.ಶರ್ಮಿಳಾ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಮ್ಸ್ ವೈದ್ಯರುಗಳಾದ ಡಾ.ವಿನಯರಾಯ್ ಹೆಚ್.ಆರ್ . ಡಾ.ವಿಶಾಲಾಕ್ಷಿ . ಡಾ.ವಿಷ್ಣು ವಿ.ಆರ್. ಶುಶ್ರೂಷಣಾಧಿಕಾರಿ ಸುವರ್ಣ ಸಿಮ್ಮೀಕೇರಿ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಎಸ್.ಬಿ.ಗಡಾದ ಮುತ್ತಪ್ಪ ಹಟ್ಟಿಮನಿ ಪ್ರಯೋಗಶಾಲಾತಂತ್ರಜ್ಞರಾದ ಶ್ರೀಮತಿ ವಂದನಾ ಠಾಕೂರ ನೇತ್ರಾಧಿಕಾರಿ ಶಿವಲಿಂಗಪ್ಪ ಕೋಡೆಕಲ್ಲ. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಹುಲಿಗೇಮ್ಮ ಮಾದರ ಗಂಗಮ್ಮ ಕುಂಬಾರ ಶೋಭಾ ಮನೆನ್ನವರ ಇಂದಿರಾ ಮೋಕಾಶಿ ವಿಲಾಸ ಮೂರಶಿಳ್ಳಿನ ಮುಂತಾದವರು ಹಾಜರಿದ್ದರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 