ಶಾಸಕರ ಹಿಂಬಾಲಕರಿಂದ ಕೆರೆ ಮಣ್ಣು ಸಾಗಾಟ : ಗ್ರಾಮಸ್ಥರ ಆರೋಪ
ಕೊಪ್ಪಳ 06: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹಿಂಬಾಲಕರಿಂದ ಕೆರೆಗಳ ಮಣ್ಣು ಅಕ್ರಮ ಸಾಗಾಟ ಮಾಡುತ್ತಿದ್ದಾರೆ ಎಂದು ಕುಣಿಕೇರಿ ಗ್ರಾಮಸ್ಥರು ಆರೋಪಿಸಿದರು.ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಶುಕ್ರವಾರದಿಂದ ಕೆರೆ ಮಣ್ಣು ಸಾಗಾಟ ಮಾಡದಂತೆ ಕೆರೆ ಬಳಿ ಧರಣಿ ನಡೆಸಲಾಗುವುದು, ಕುಣಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಚಿಕ್ಕ ಕೆರೆಯ ಉಳು (ಮಣ್ಣು) ಅಕ್ರಮಸಾಗಾಟ ತಡೆಯುವ ಬಗ್ಗೆಈ ಹಿಂದೆ ನಡೆದ ಅಕ್ರಮ ಮಣ್ಣು ಸಾಗಾಟದ ಬಗ್ಗೆ ಗ್ರಾಮದಲ್ಲಿ ಸಾರ್ವಜನಿಕರು ಮತ್ತು ರೈತರು, ಪಿಡಿಓ ಇವರ ಸಮ್ಮುಖದಲ್ಲಿ ಅಕ್ರಮ ಮಣ್ಣು ಮಾರಾಟದ ವಿರುದ್ಧ ಠರಾವು ಬರೆದಿರುತ್ತಾರೆ ಆ ಆದೇಶವನ್ನು ಧಿಕ್ಕರಿಸಿ ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಮತ್ತೆ ಇಟ್ಟಿಗೆ ಬಟ್ಟಿಗೆ ಮಣ್ಣನ್ನು ಮಾರಾಟ ಮಾಡುತ್ತಿದ್ದಾರೆ.
ಶಾಸಕರ ಹಿಂಬಾಲಕರಾದ ಬಸವರಾಜ್ ಹೊಸಳ್ಳಿ ಹುಲಿಗಿ ಸೇರಿದಂತೆ ಇತರರು ಕೆರೆ ಮಣ್ಣು ಅಕ್ರಮ ಸಾಗಾಟ ಮಾಡುತ್ತಿದ್ದು ಇದರಿಂದ ರೈತರಿಗೆ ಜೀವನ ನಡೆಸಲು ತುಂಬ ತೊಂದರೆಯಾಗಿರುತ್ತದೆ ಚಿಕ್ಕ ಕೆರೆಯ ಒಟ್ಟು ಎ18-02ಗು ಎಕ್ಕರೆ ಇದ್ದು ಅನೇಕ ರೈತರು ಸುಮಾರು ಎಕರೆ ಕೆರೆಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಕೆರೆಯನ್ನು ಅಭಿವೃದ್ಧಿಪಡೆಸುವುದಾದರೆ ಮೊದಲು ಸಂಪೂರ್ಣಕೆರೆಯನ್ನು ಸರ್ವೆ ಮುಖಾಂತರ ಹದ್ದುಬಸ್ತು ಮಾಡಿ ಕೆರೆ ಸುತ್ತ ಮುತ್ತಲು ಬಂಡು (ವಡ್ಡು) ನಿರ್ಮಾಣ ಮಾಡಿ ಕೊಡಬೇಕೆಂದು ಅನೇಕ ಬಾರಿ ಕೇಳಿಕೊಳ್ಳಲಾಗಿದೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಅಕ್ರಮ ಮಣ್ಣು ಮಾರಾಟ ಮಾಡುವುವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು, ಸಂಪೂರ್ಣ ಸರ್ವೆ ಕಾರ್ಯಾ ಮತ್ತು ಹದ್ದುಬಸ್ತು ಮಾಡಿಸಿ ನಂತರ ಕಾಮಗಾರಿಯನ್ನು ಪ್ರಾರಂಬಿಸಬೇಕೆಂದು ಒತ್ತಾಯಿಸಿದರು,
ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕೆರೆ ಉಳಿವಿಗಾಗಿ ಮನವಿ ಸಲ್ಲಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕುಣಿಕೇರಿ ಗ್ರಾಮಸ್ಥರಾದ ಸಿದ್ದನಗೌಡ ಮಾಲಿಪಾಟೀಲ್, ಮಂಜುನಾಥ್, ಸಂಜೀವ್ ಗೌಡ ಪೊಲೀಸ್ ಪಾಟೀಲ್, ರಮೇಶ್ ಡಂಬರಹಳ್ಳಿ, ಶಂಕರಗೌಡ ಮಾಲಿಪಾಟೀಲ್, ನಿಂಗಪ್ಪ ಸೇರಿದಂತೆ ಮತ್ತು ಉಪಸ್ಥಿತರಿದ್ದರು