ಕಂಪ್ಲಿಯಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನದಿಂದ ಕುವೆಂಪು ವಿಚಾರಧಾರೆ ವಿಶೇಷ ಉಪನ್ಯಾಸ ಕಾರ್ಯಕ್ರಮ
Kuvempu Vicharadhar special lecture program by Sahitya Siri Pratishthan at Kampli
ಕಂಪ್ಲಿ 18: ಸ್ಥಳೀಯ ಸಾಹಿತ್ಯ ಸಿರಿ ಪ್ರತಿಷ್ಠಾನವು ಪಟ್ಟಣದ ಗಂಗಾ ಸಂಕೀರ್ಣದಲ್ಲಿ ಕುವೆಂಪು ಸಂಸ್ಮರಣೋತ್ಸವದ ಅಂಗವಾಗಿ ಏರಿ್ಡಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ವಿಚಾರಧಾರೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಷಾಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಜೀರು ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡಿ ಕುವೆಂಪು ಸಾಹಿತ್ಯದ ತತ್ವ ಆದರ್ಶಗಳು ಸದಾ ಪ್ರಸ್ತುತವಾಗಿರುತ್ತವೆ. ವಿಶ್ವಮಾನವ,ನಿರಂಕುಶಮತಿ, ನಾಡಪ್ರೇಮ, ಕನ್ನಡ ನುಡಿ ಪ್ರೇಮ, ದಾಂಪತ್ಯ,ಪ್ರಕೃತಿ,ಆಧ್ಯಾತ್ಮ,ನಿಸರ್ಗ, ಮೌಡ್ಯವಿರೋಧಿ ಭಾವನೆಗಳನ್ನು ಕುವೆಂಪು ಕವಿತಗಳಲ್ಲಿ ಕಾಣಬಹುದಾಗಿದೆ. ಮನುಜಮತ ವಿಶ್ವಪಥ, ಸರ್ವೋದಯ , ಸಮನ್ವಯತೆ, ಪೂರ್ಣತೆ, ಮೊದಲಾದ ತತ್ವಗಳು,ಆದರ್ಶಗಳು ತ್ರಿಕಾಲವೂ ಪ್ರಸ್ತುತವಾಗಿರುತ್ತದೆ. ಕರ್ನಾಟಕದ ಏಕೀಕರಣದಕ್ಕಾಗಿ ಕನ್ನಡಿಗರ ಸಂಘಟನೆಯಲ್ಲಿ ಕುವೆಂಪು ಸಾಹಿತ್ಯ ಮಹತ್ವದ ಪಾತ್ರ ವಹಿಸಿತ್ತು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಕೆ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕುವೆಂಪು ಕವಿತೆಗಳು ಮನುಜರಲ್ಲಿ ಸಾಮರಸ್ಯ, ಸಹಿಷ್ಣುತೆ, ಸಹೋದರತೆ ಮನೋಭಾವನೆಗಳನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸುತ್ತದೆ ಎಂದರು. ಶಿಕ್ಷಕಿ ವೀರಮ್ಮ ನಾಗರಾಜ, ಉಪನ್ಯಾಸಕ ಜೀರು ಮಲ್ಲಿಕಾರ್ಜುನ ಕುವೆಂಪು ಗೀತೆಗಳನ್ನು ಹಾಡಿದರು. ಈಚೆಗೆ ನಿಧನರಾದ ವೃಕ್ಷಮಾತೆ ಶತಾಯುಷಿ ಸಾಲುಮರದ ತಿಮ್ಮಕ್ಕನವರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಪೋಡಿ ನಾರಾಯಣಪ್ಪ, ಎಲಿಗಾರ ವೆಂಕಟರೆಡ್ಡಿ, ಪ್ರತಿಷ್ಠಾನದ ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಬಂಗಿ ದೊಡ್ಡ ಮಂಜುನಾಥ್, ಎಸ್.ಶ್ಯಾಮಸುಂದರ ರಾವ್, ಅಂಬಿಗರ ಮಂಜುನಾಥ್, ಚಂದ್ರಯ್ಯ ಸೊಪ್ಪಿಮಠ, ವೀರಮ್ಮ ನಾಗರಾಜ, ಎಚ್,ನಾಗರಾಜ, ಮುದುಕಪ್ಪ ನೆಲಚೇರಿ, ಯು.ಎಂ.ವಿದ್ಯಾಶಂಕರ್, ಕೆ.ಯಂಕಾರೆಡ್ಡಿ, ಗಂಡಿ ಗಣೇಶ್, ರಾಮಚಂದ್ರ ಚಿತ್ರಗಾರ, ಪೀರಾಸಾಬ್ ಹಂಚಿನಾಳ್, ಗುರುಬಸಯ್ಯ ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 