ಕುಸುಮ ವಿಠ್ಠಲರಾವ್ ದೇಶಪಾಂಡೆ ಸ್ಮರಣಾರ್ಥ ದತ್ತಿ: ‘ಶ್ರೇಷ್ಠ ತಾಯಿ ಸನ್ಮಾನ’

ಕುಸುಮ ವಿಠ್ಠಲರಾವ್ ದೇಶಪಾಂಡೆ ಸ್ಮರಣಾರ್ಥ ದತ್ತಿ: ‘ಶ್ರೇಷ್ಠ ತಾಯಿ ಸನ್ಮಾನ’ Kusuma Vitthalrao Deshpande Memorial Endowment

ಲೋಕದರ್ಶನ ವರದಿ 

ಧಾರವಾಡ 17: ಕರ್ನಾಟಕ ವಿದ್ಯಾವರ್ಧಕ ಸಂಘವು, ಕುಸುಮ ವಿಠ್ಠಲರಾವ್ ದೇಶಪಾಂಡೆ ಸ್ಮರಣಾರ್ಥ ದತ್ತಿ ಅಂಗವಾಗಿ ದಿನಾಂಕ: 18-2-2026 ರಂದು ಬುಧವಾರ ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಆಧುನಿಕ ಜಗತ್ತಿನಲ್ಲಿ ತಾಯಿಯ ಪಾತ್ರ’ ವಿಷಯ ಕುರಿತು ಉಪನ್ಯಾಸ ಹಾಗೂ ‘ಶ್ರೇಷ್ಠ ತಾಯಿ ಸನ್ಮಾನ’ ಕಾರ್ಯಕ್ರಮ ಏರಿ​‍್ಡಸಿದೆ. 

ಧಾರವಾಡಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತಗುರ​‍್ಪ ಬೆಲ್ಲದ ಅಧ್ಯಕ್ಷತೆ ವಹಿಸುವರು. 

ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ-ಧಾರವಾಡ ಅಧ್ಯಕ್ಷರಾದ ರೂಪಾ ಜೋಶಿ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. 

ಶ್ರೇಷ್ಠ ತಾಯಿಗೌರವ ಸನ್ಮಾನವನ್ನು ಕಲ್ಪನಾ ಪ್ರಕಾಶ ನಾಯಕ, ಧಾರವಾಡ ಅವರು ಸ್ವೀಕರಿಸುವರು. 

ಚಿಕ್ಕಮಕ್ಕಳ ತಜ್ಞರು, ದತ್ತಿದಾನಿಗಳೂ ಆದ ಡಾ. ರಾಜನ್ ದೇಶಪಾಂಡೆ ಗೌರವ ಉಪಸ್ಥಿತರಿರುವರು.  

ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ. 

ಕುಸುಮಾತಾಯಿ ವಿಠ್ಠಲರಾವ್ ದೇಶಪಾಂಡೆ 

ಯಲ್ಲಾಪುರದ ಸುಸಂಸ್ಕೃತ ಕುಟುಂಬದಲ್ಲಿ 9 ನೇ ಜನೆವರಿ 1931 ರಂದು ಜನಿಸಿದ ಕುಸುಮ ತಾಯಿ ಅವರು ಲೋಕೋಪಯೋಗಿ ಇಲಾಖೆ ಚೀಫ್‌ಇಂಜೀನೀಯರ ಹಾಗೂ ನಂತರ ‘ಕಾಡಾ’ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ  ವಿ. ವಿ. ದೇಶಪಾಂಡೆಯವರನ್ನು 1951 ರಲ್ಲಿ ವಿವಾಹವಾಗಿ ಧಾರವಾಡಕ್ಕೆ ಆಗಮಿಸಿದರು. ದೈವ ಭಕ್ತಿಯಲ್ಲಿ ಅಪಾರ ನಂಬಿಗೆಯಿಂದ ಬದುಕು ಕಟ್ಟಿಕೊಳ್ಳುತ್ತಾ ಎಲ್ಲರನ್ನೂ ಮಾನವೀಯ ಗುಣಗಳೊಂದಿಗೆ ಕಂಡವರು. 

ಕುಸುಮತಾಯಿ ಬರೀ ಶ್ರೇಷ್ಠ ಗೃಹಿಣಿಯಾಗಿರಲಿಲ್ಲ, ಒಬ್ಬ ಮಹಿಳಾ ಸಂಘಟಕರಾಗಿದ್ದರು, ಕಲಾವಿದರಾಗಿದ್ದರು, ಕರಕುಶಲದಲ್ಲಿತುಂಬಾ ಪ್ರಾವೀಣ್ಯತೆ ಹೊಂದಿದ್ದರು. ಬಿದಿರಿನ ತೊಗಟೆಗಳಿಂದ, ಕೂದಲಿನಿಂದ, ತಂತಿಗಳಿಂದ ಕೂಡಿದ ಹಾಗೂ ಚರ್ಮದ ಮೇಲೆ ಕಸೂತಿ ಹಾಕುವ ಮುಂತಾದ ಕಲೆಗಳಲ್ಲಿ ಎಲ್ಲರ ಮೆಚ್ಚುಗೆ ಪಡೆದಿದ್ದರು. ಅಡುಗೆ ಸಿದ್ಧಗೊಳಿಸುವಲ್ಲಿಯೂ ಎತ್ತಿದ ಕೈ.ಇವರ ಕಲಾಕೃತಿಗಳು ಕ.ವಿ.ವಿ. ಘಟಿಕೋತ್ಸವ ಸಂದರ್ಭದಲ್ಲಿ ಪ್ರದರ್ಶನಗೊಂಡು ಸಾರ್ವಜನಿಕರ ಮೆಚ್ಚುಗೆ ಪಡೆದಿವೆ. ಹಾಲಭಾವಿ ಆರ್ಟ್‌ಗ್ಯಾಲರಿಯಲ್ಲಿ ​‍್ರ​‍್ರಥಮ ಬಾರಿ ಏಕವ್ಯಕ್ತಿ ಕಲಾ ಪ್ರದರ್ಶನಗೊಂಡಿದ್ದು ಅವರ ಬಹುಮುಖ ಪ್ರತಿಭೆಗೆ ಕನ್ನಡಿಯಾಗಿತ್ತು. ಉತ್ತಮವಾಗಿ ಸಿತಾರವನ್ನು ನುಡಿಸುತ್ತಿದ್ದರು. ನಾಲ್ಕು ಮಕ್ಕಳ ತಾಯಿಯಾಗಿ ಆ ನಾಲ್ಕೂ ಮಕ್ಕಳು ಸಮಾಜದಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದ ಹಿರಿಮೆ ಈ ತಾಯಿಯದು. ಇಂಥ ತಾಯಿಯ ಕುರಿತು ಡಾ. ರಾಜನ್ ದೇಶಪಾಂಡೆ ಅವರು ದತ್ತಿ ಇಟ್ಟು ಸಮಾಜದಲ್ಲಿ ಶ್ರೇಷ್ಠ ತಾಯಂದಿರನ್ನು ಸ್ಮರಿಸಿಕೊಳ್ಳುವಂತೆ ಮಾಡಿದ್ದಾರೆ. ಬನ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.