ಧಾರವಾಡ, 02: ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನದ ಸಂದರ್ಭದಲ್ಲಿ ಬಾಪೂಜಿ ಬದುಕನ್ನೇ ಕೇಂದ್ರೀಕರಿಸಿದ 150 ಕಲಾಕೃತಿಗಳ ವಿಶೇಷ ಚಿತ್ರಕಲಾ ಪ್ರದರ್ಶನ ಇಲ್ಲಿಯ ಆರ್ಟ ಗ್ಯಾಲರಿಯಲ್ಲಿ ಬುಧವಾರ ಆರಂಭಗೊಂಡಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹಾಗೂ ಆಯುಕ್ತರ ಕಛೇರಿಯ ನಿದರ್ೆಶಕ ಡಾ. ಬಿ.ಕೆ.ಎಸ್. ವರ್ಧನ್ ಜಂಟಿಯಾಗಿ ಪ್ರದರ್ಶನವನ್ನು ಉದ್ಘಾಟಿಸಿದರು. ಆಯುಕ್ತರ ಕಛೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಉಮೇಶ ಬಮ್ಮಕ್ಕನವರ, ಕಿರಿಯ ಸಂಶೋಧನಾ ಅಧಿಕಾರಿ ಮಹಾದೇವಿ ಮಾಡಲಗೇರಿ, ಇ-ಆಡಳಿತ ಕಾರ್ಯಕ್ರಮ ಅಧಿಕಾರಿ ಶಾಂತಾ ಮೀಸಿ, ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ಸಹಾಯಕ ನಿದರ್ೆಶಕ ವ್ಹಿ.ಜಿ.ಬದಾಮಿ, ಚಿತ್ರಕಲಾ ಶಿಕ್ಷಕರಾದ ಗೋಪಾಲ ಚಲವಾದಿ, ಬಿ.ಆರ್. ಜಕಾತಿ, ರವಿ ಘೋಡಕೆ ಹಾಗೂ ಕಚೇರಿ ಸಿಬ್ಬಂದಿ ಇದ್ದರು.
ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯು 'ಗಾಂಧೀಜಿ-150 : ಕುಂಚ ನಮನ' ಎಂಬ ಶೀಷರ್ಿಕೆಯ ಅಡಿಯಲ್ಲಿ 5 ದಿನಗಳ ಕಾಲ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರ ಪೇಂಟಿಂಗ್ ಕಾಯರ್ಾಗಾರದಲ್ಲಿ ಬಾಪೂಜಿಯವರ ಬದುಕಿನ ವಿವಿಧ ನೆಲೆಗಳನ್ನು ಆಧರಿಸಿ ಮೂಡಿ ಬಂದಿರುವ 150 ವಿಶಿಷ್ಟ ಚಿತ್ರಕಲಾ ಕೃತಿಗಳನ್ನು ಇಲ್ಲಿ ಪ್ರದಶರ್ಿಸಲಾಗಿದೆ. ಈ ಚಿತ್ರಕಲಾ ಪ್ರದರ್ಶನವು ಅಕ್ಟೋಬರ್ 6 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.
ವೀಕ್ಷಣೆಗೆ ಸೂಚನೆ : ಹುಬ್ಬಳ್ಳಿ-ಧಾರವಾಡ ಮಹಾನಗರದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರು ತಮ್ಮ ವಿದ್ಯಾಥರ್ಿಗಳೊಂದಿಗೆ ನಗರದ ಆರ್ಟ ಗ್ಯಾಲರಿಗೆ ಆಗಮಿಸಿ ಕಲೆಯಲ್ಲಿ ಅನಾವರಣಗೊಂಡಿರುವ ಗಾಂಧೀಜಿಯವರ ಬಹುಮುಖವಾದ ಬದುಕನ್ನು ವೀಕ್ಷಿಸಬೇಕೆಂದು ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೂಚಿಸಿದ್ದಾರೆ.