ಇಂದು ಅಡವೀಂದ್ರಸ್ವಾಮಿ ಮಠದಲ್ಲಿ ಕುಮಾರವ್ಯಾಸ ಜಯಂತಿ ಆಚರಣೆ
Kumaravyasa Jayanti celebration at Advindraswamy Math today
ಗದಗ 05: ನಗರದ ಮುಳಗುಂದನಾಕಾ ಬಳಿಯ ಶ್ರೀಅಡವೀಂದ್ರಸ್ವಾಮಿ ಮಠದಲ್ಲಿ ಜ.6 ರಂದು ಸಂಜೆ 6.30 ಗಂಟೆಗೆ 343ನೇ ಮಾಸಿಕ ಶಿವಾನುಭವ ಹಾಗೂ ಕುಮಾರವ್ಯಾಸ ಜಯಂತಿ ಆಚರಣೆ ಗದಗ ಜಿಲ್ಲೆಯ ಸಂಸ್ಕಾರಭಾರತಿ ಸಹಯೋಗದಲ್ಲಿ ಜರುಗಲಿದೆ. ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು. ಶಿವಾನುಭವ ಸಮಿತಿ ಅಧ್ಯಕ್ಷರಾದ ಡಾ.ರಾಜೇಂದ್ರ ಗಡಾದ ಅಧ್ಯಕ್ಷತೆ ವಹಿಸುವರು.
ಗಮಕ ಕಲಾರತ್ನ ಗುರುವಿನಹಳ್ಳಿಯ ವಿಶ್ವನಾಥ ಕುಲಕರ್ಣಿ ಅರು ಗದುಗಿನ ಭಾರತ ವಾಚನ-ವ್ಯಾಖ್ಯಾನ ಕುರಿತು ಉಪನ್ಯಾಸ ನೀಡುವರು. ಸಂಗೀತ ಶಿಕ್ಷಕ ಶ್ರೀಕಾಂತ ಹೂಲಿ ಅವರು ಸಂವಾದಿನಿ ಸಾಥ್ ನೀಡುವರು. ಗದಗ ಜಿಲ್ಲಾ ಸಂಸ್ಕಾರಭಾರತಿ ಅಧ್ಯಕ್ಷರಾದ ಪಿ.ಎ. ಕುಲಕರ್ಣಿ ಗೌರವ ಉಪಸ್ಥಿತರಿರುವರು.
ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷರಾದ ಸದಾಶಿವಯ್ಯ ಎಸ್. ಮದರಿಮಠ, ಶ್ರೀಮತಿ ಸುವರ್ಣ ಎಸ್. ಮದರಿಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಬಿ.ಡಿ. ಕಿಲಬನವರ, ಜಿಲ್ಲಾ ಬ್ಯಾಡ್ಮಿಂಟನ್ ಟ್ರೋಫಿ ವಿಜೇತರಾದ ಕುಮಾರ ವೇದಾಂತ, ರಾಜು, ಸಿಕ್ಕಲಗಾರ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಲಿಂ.ಶ್ರೀಮತಿ ಶೋಭಾ ಶಿದ್ರಾಮಯ್ಯ ಸಂಶಿಮಠ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗುವುದು.
ಆರೋಗ್ಯ ಇಲಾಖೆಯ ಮಂಜುನಾಥ ಕಿಲಬನವರ ಹಾಗೂ ರಾಜೇಶ್ವರಿ ಕಲಾಕುಟೀರದ ಸಂಸ್ಥಾಪಕರಾದ ಗಜಾನನ ಶೇಷಗಿರಿ ವೆರ್ಣೇಕರ, ಶಿವಾನುಭವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಭುಗೌಡ ಪಾಟೀಲ, ಸಾಂಸ್ಕೃತಿಕ ಕಾರ್ಯದರ್ಶಿ ಗುರ್ಪ ನಿಡಗುಂದಿ, ಕೋಶಾಧ್ಯಕ್ಷರಾದ ಸಿದ್ಧಣ್ಣ ಜವಳಿ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ಕೋರಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 