ನ.29 ಶನಿವಾರದಂದು ಕೋರವಾರೇಶನ ಕಾರ್ತಿಕೋತ್ಸವ

ನ.29 ಶನಿವಾರದಂದು ಕೋರವಾರೇಶನ ಕಾರ್ತಿಕೋತ್ಸವ Koravaresha Kartikotsava on Saturday, November 29

ದೇವರಹಿಪ್ಪರಗಿ 27: ತಾಲೂಕಿನ ಕೋರವಾರ ಗ್ರಾಮದ ಐತಿಹಾಸಿಕ ಹನುಮಾನ( ಕೋರವಾರೇಶನ) ಕಾರ್ತಿಕ್ಕೊತ್ಸವದ ಅವರೋಹಣ ಕಾರ್ಯಕ್ರಮವು ಪ್ರತಿ ವರ್ಷದಂತೆ ಈ ವರ್ಷವೂ ದಿ.29.11.2025 ಶನಿವಾರದಂದು ಅತಿ ವಿಜೃಂಭಣೆಯಿಂದ ಜರುಗುವುದು ಎಂದು ದೇವಸ್ಥಾನದ ಟ್ರಸ್ಟ್‌ ವತಿಯಿಂದ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭೀಮನ ಕಟ್ಟೆ ಭೀಮಸಿತು ಸಂಸ್ಥಾನ ಮಠದ ಉಪಾಸಕರಾದ  ರಾಘವೇಂದ್ರ ತೀರ್ಥ ಶ್ರೀಪಾದರು ದಿ.28.11.2025 ರಂದು ಸಾಯಂಕಾಲ 5 ಗಂಟೆಗೆ  ಕ್ಷೇತ್ರ ಕೋರವಾರಕ್ಕೆ ಆಗಮಿಸುವರು, ಶ್ರೀಪಾದರನ್ನು ಸಕಲ ವಾದ್ಯ ವೈಭವ, ವಿವಿಧ ಬಜನಾ ತಂಡಗಳಿಂದ ಸಾಂಪ್ರದಾಯಿಕ ಕೋಲಾಟ, ಗೋವು, ಧಾರ್ಮಿಕ ಸ್ತಬ್ಧ ಚಿತ್ರಗಳ ಮೆರವಣಿಗೆ ಮೂಲಕ ಅದ್ದೂರಿಯಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಶೋಭಯಾತ್ರೆ ಕೈಗೊಳ್ಳಲಾಗುವುದು. ಶನಿವಾರ ಬೆಳಗ್ಗೆ ಕೋರವಾರೇಶನಿಗೆ ಅಭಿಷೇಕ್ ರಜತ ಕವಚ ಅಲಂಕಾರ ನಂತರ ಶ್ರೀಗಳಿಂದ ಸಂಸ್ಥಾನ ಪೂಜೆ ನೈವೇದ್ಯ ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಾಯಂಕಾಲ ಶ್ರೀಗಳಿಂದ ಆಶೀರ್ವಚನ, ದೀಪ ಬೆಳಗಿಸುವದು ನಂತರ ಸಕಲ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಸೇವೆ ನಂತರ ಮಾರುತಿ ದೇವಸ್ಥಾನ ಟ್ರಸ್ಟ್‌ ಇವರಿಂದ ವರದಿ ವಾಚನ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಭಕ್ತರು ಕಾರ್ತಿಕೋತ್ಸವದಲ್ಲಿ ಭಾಗವಹಿಸಿ  ಕೋರವಾರೇಶನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.