ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕ ಅಸ್ತಿತ್ವಕ್ಕೆ

ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕ ಅಸ್ತಿತ್ವಕ್ಕೆ Koppal district unit of All Karnataka Aided Schools and Colleges Employees Association comes into e

ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕ ಅಸ್ತಿತ್ವಕ್ಕೆ 

ಕೊಪ್ಪಳ 05:  ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ನಡೆದ ಸಭೆಯಲ್ಲಿ ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜಗಳ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲೆಯ ಅನುದಾನಿತ ವಿವಿಧ ಶಾಲಾ-ಕಾಲೇಜುಗಳ ನೌಕಕರು ಹಾಜರಿದ್ದು ಜಿಲ್ಲಾ ಘಟಕಕ್ಕೆ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಿದರು. ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ಹನುಮಂತಪ್ಪ ಚಲವಾದಿ, ಸಹಶಿಕ್ಷಕರು, ನೃಪತುಂಗ ಪ್ರೌಢಶಾಲೆ ಬಿಸರಹಳ್ಳಿ ಇವರನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ರಾಜೇಶ ಪೂಜಾರ, ಮುಖ್ಯಗುರುಗಳು, ತುಂಗಭದ್ರ ಪ್ರೌಢಶಾಲೆ, ಹುಲಗಿ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಾಕ್ಷರಾಗಿ ಆರ್‌.ಬಿ. ಅಬ್ಬಿಗೇರಿ ಸಹಶಿಕ್ಷಕರು, ಶರಣಬಸವೇಶ್ವರ ಪ್ರೌಢಶಾಲೆ, ಸೋಂಪುರ, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಿವಾಸ ನಾಯ್ಡು, ಸಹಶಿಕ್ಷಕರು, ವಿನಾಯಕ ಪ್ರಾಥಮಿಕ ಶಾಲೆ, ಗಂಗಾವತಿ ಇವರನ್ನು ಆಯ್ಕೆ ಮಾಡಲಾಯಿತು. ಸಹಕಾರ್ಯದರ್ಶಿಗಳಾಗಿ ಸತೀಶ ಕುಲಕರ್ಣಿ, ಚಿತ್ರಕಲಾ ಶಿಕ್ಷಕರು, ಕಾಳಿದಾಸ ಪ್ರೌಢಶಾಲೆ, ಕೊಪ್ಪಳ ಖಜಾಂಚಿಗಳಾಗಿ ಶಿವಾನಂದ ಹೀರೆಮಠ, ಸಹಶಿಕ್ಷಕರು, ಗವಿಸಿದ್ದೇಶ್ವರ ಪ್ರೌಢಶಾಲೆ, ಹಿರೇಮನ್ನಾಪುರ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಮೋಹನ ಸಿ. ಸಹಶಿಕ್ಷಕರು, ವಿದ್ಯಾವಿಕಾಸ ಪ್ರಾಥಮಿಕ ಶಾಲೆ, ಭಾಗ್ಯನಗರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತೆಂದು ರಾಜ್ಯಧ್ಯಕ್ಷರಾದ ಜಿ.ಹನುಮಂತಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.