ಕೊಪ್ಪಳ ಜಿಲ್ಲಾಧಿಕಾರಿ ವಗರ್ಾವಣೆಗೆ ಹುನ್ನಾರ ವಿರೋಧಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಕೊಪ್ಪಳ 16: ಕೊಪ್ಪಳ ಜಿಲ್ಲಾಧಿಕಾರಿ ಸುನೀಲಕುಮಾರವರ ವಗರ್ಾವಣೆಯ ಹುನ್ನಾರವನ್ನು ಖಂಡಿಸಿ ಮತ್ತು ವಗರ್ಾವಣೆ ಮಾಡದಿರಲು ಆಗ್ರಹಿಸಿ ನಗರದ ಗಂಜ್ ಸರ್ಕಲ್ದ ಬಸವೇಶ್ವರ  ಪುತ್ಥಳಿ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ನಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿಯ ಅಧಿವೇಶನದಲ್ಲಿ ಶಾಸಕರಾದ ಗೋವಿಂದ ಕಾರಜೋಳರವರು  ತಮಗೆ ಸಂಬಂಧಿಸಿ ಕ್ಷೇತ್ರವಲ್ಲದಿದ್ದರೂ ಕೊಪ್ಪಳ ಜಿಲ್ಲಾಧಿಕಾರಿ ಸುನೀಲಕುಮಾರ ಬ್ರಿಟೀಷರ ಪಳಯುಳಿಕೆಯಂತಿದ್ದಾರೆ, ಅಂಥ ಅಹಂಕಾರಿಯನ್ನು ವಗರ್ಾಯಿಸಿರೆಂದು ಆಕ್ರೋಶ ವ್ಯಕ್ತಪಡಿಸಿದ್ದು ಮಾಧ್ಯಮದಲ್ಲಿ ಪ್ರಚಾರವಾಗಿದೆ ಮತ್ತು ಅವರ ವಗರ್ಾವಣೆಗೆ ಸ್ಥಳೀಯ ಮರಳು ಮಾಫಿಯಾ ಪರವಾಗಿರುವ ಜನಪ್ರತಿನಿಧಿಗಳು ಎತ್ತಂಗಡಿಗೆ ಹುನ್ನಾರ ನಡೆಸಿದ್ದಾರೆ ಎನ್ನುವ ಸುದ್ದಿಯೂ ಕೇಳಿಬಂದಿದೆ ಈ ಹಿಂದೆ ಈ ರೀತಿ ಮರಳು ಮಫಿಯಾದ ವಿರುದ್ಧ ಕಾನೂನು ಕ್ರಮ ಜರುಗಿಸಿ ದಿಟ್ಟ ಮತ್ತು ಪ್ರಮಾಣಿಕ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅನೂಫ್ಶೆಟ್ಟಿಯವರನ್ನು ದುಷ್ಟಕೂಟ ಎತ್ತಂಗಡಿ ಮಾಡಿಸುವುದರಲ್ಲಿ ಯಶಸ್ವೀಯಾಗಿದೆ.

ಕಳೆದ ಆಗಸ್ಟ್ನಲ್ಲಿ ಕೊಪ್ಪಳಕ್ಕೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಸುನೀಲಕುಮಾರವರು ಉತ್ಸಾಹಿ ಯುವಕರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಾಗಿ ಜಿಲ್ಲೆಯಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ, ಇಂಥ ಜಿಲ್ಲಾಧಿಕಾರಿ ಮೂರು ವರ್ಷ ಇಲ್ಲಿ ಸೇವೆ ಸಲ್ಲಿಸಿದರೆ ಇಡೀ ಜಿಲ್ಲೆಯ ಚಿತ್ರಣವೇ ಬೇರೆಯಾಗಿ ಅಭಿವೃದ್ಧಿಗೊಳ್ಳುತ್ತದೆ ತಮ್ಮ ಭ್ರಷ್ಠತೆಗೆ ಮರಳು ಮಾಫಿಯಾಕ್ಕೆ ಅನುಕೂಲವಾಗಲಿಲ್ಲ ಎನ್ನುವ ಕಾರಣಕ್ಕಾಗಿ ರಾಜಕಾರಣಿಗಳು ಎತ್ತಂಗಡಿಗೆ ಪ್ರಯತ್ನಿಸಿದರೆ ಅಂಥವರ ವಿರುದ್ಧ ಮತ್ತು ಅದಕ್ಕೆ ಮಾನ್ಯತೆ ಮಾಡಿದರೆ ಸಕರ್ಾರದ ವಿರುದ್ಧ ಜಿಲ್ಲೆಯ ಜನತೆ ಉಗ್ರವಾದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಆದ್ದರಿಂದ ಅಂಥ ಪ್ರಯತ್ನ ಕೈ ಬಿಟ್ಟು ಅವರಿಗೆ ಪೂಣರ್ಾವಧಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆ ನೇತೃತ್ವವನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಬಸವರಾಜ್ ಶೀಲವಂತರ್, ವಿಠ್ಠಪ್ಪ ಗೋರಂಟ್ಲಿ, ಡಿ.ಎಚ್.ಪೂಜಾರ್, ಮಹಾಂತೇಶ ಕೊತಬಾಳ, ಜೆ.ಭಾರದ್ವಾಜ್,ಕಾಸಿಂ ಸರದಾರ,ಎಸ್.ಎ.ಗಫಾರ, ಹನುಮೇಶ ಮ್ಯಾಗಳಮನಿ, ಭೀಮಣ್ಣ ದೇವರಮನಿ, ನಿಂಗಪ್ಪ ದೇವರಮನಿ,ಗಾಳೇಶ ಕಾತರಕಿ, ಗುಡ್ಡದಪ್ಪ ಭಂಗಿ,ಸಣ್ಣ ಹನುಮಂತಪ್ಪ, ರಮೇಶ ಚಿಕ್ಕೇನಕೊಪ್ಪ, ಗಾಳೆಪ್ಪ ಮುಂಗೋಲಿ ಸೇರಿದಂತೆ ಮತ್ತೀತರರು ವಹಿಸಿದ್ದರು.