ಕೊಪ್ಪಳ : ದೇಶದ ಸುರಕ್ಷತೆಗೆ ಮೊದಲ ಅದ್ಯತೆ: ಬಿಜೆಪಿಯ ಲೋಕಸಭಾ ಅಭ್ಯರ್ಥಿ ಸಂಗಣ್ಣ

ಲೋಕದರ್ಶನ ವರದಿ 

ಕೊಪ್ಪಳ 08: ಆರು ಕೋಟಿ ಜನರ ಅಭಿಪ್ರಾಯ ಪಡೆದು 45 ಪುಟದ 75 ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ಬಿಜೆಪಿಯು ಬಿಡುಗಡೆ ಮಾಡಿದೆ ಅದರಲ್ಲಿ  ದೇಶದ ಸುರಕ್ಷತೆಗೆ ಮೊದಲ ಅದ್ಯತೆ ನೀಡಿದೆ ಎಂದು ಹಾಲಿ ಸಂಸದ ಹಾಗೂ ಬಿಜೆಪಿಯ ಲೋಕಸಭಾ ಅಭ್ಯರ್ಥಿ  ಕರಡಿ ಸಂಗಣ್ಣ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು 2030ರ ವೇಳೆಗೆ ಭಾರತದ ಬಡತನ ನೀಮರ್ೂಲನೆ, ಕ್ರೆಡಿಟ್ ಕಾಡರ್್ ಮೂಲಕ 5ವರ್ಷದಲ್ಲಿ 1 ಲಕ್ಷದ ವರೆಗೆ ಸಾಲ, 60 ವರ್ಷ ದಾಟಿದ ಸಣ್ಣ ಹಿಡುವಳಿ ರೈತರಿಗೆ ಮಾಸಿಕ ಪಿಂಚಣಿ ಯೋಜನೆ. ರೈತರಿಗೆ ಕಿಸಾನ್ ಸಮ್ಮಾನ ವಿಸ್ತರಣೆ  ರೈತರಿಗೆ ಪ್ರತಿ ವರ್ಷ 6000 ನೀಡಲು ಕ್ರಮ, ಸೌಹಾರ್ದಯುತವಾಗಿ ಅಯೋಧ್ಯಯಲ್ಲಿ ರಾಮ ಮಂದಿರ ನಿಮರ್ಾಣ ಖಚಿತ, ವ್ಯಾಪಾರಿಗಳ ಹಿತ ಕಾಪಾಡಲು ರಾಷ್ಟ್ರೀಯ ವ್ಯಾಪಾರ ಆಯೋಗ ರಚನೆಗೆ ಕ್ರಮ, ಗ್ರಾಮೀಣ ವಿಕಾಸಕ್ಕೆ 25 ಲಕ್ಷ ಕೋಟಿ ಮೀಸಲು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ 1 ಲಕ್ಷದವರೆಗೆ ಸಾಲ, ಏಕರೂಪ ನಾಗರಿಕ ಸಂಹಿತ ಜಾರಿಗೆ ಕ್ರಮ. ಸಂವಿಧಾನ ವಿದಿ 370 ರದ್ದು, ಸಂವಿಧಾನ ವಿದಿ 35ಂ ರದ್ದು. ದೇಶದಲ್ಲಿ ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆ 5 ವರ್ಷಗಳಲ್ಲಿ ಪೂರ್ಣ, ದೇಶಾದ್ಯಂತ್ಯ ಗೋದಾಮು ಜಾಲದ ವಿಸ್ತರಣೆ, ಪ್ರತಿಯೊಂದು ಮನೆಗೂ ವಿದ್ಯತ್ ಸಂಪರ್ಕ, ಪ್ರತಿಯೊಂದು ಕುಟುಂಬಗಳಿಗೂ ಮನೆ ನಿಮರ್ಿಸಿನಿಡಲಾಗುವುದು, ಪ್ರತಿ ಮನೆಗೂ ನೀರಿನ ಸೌಲಭ್ಯ ಒದಗಿಸಲಾಗುವುದು, ಪ್ರತಿ ಬಡವರ  ಮನೆಗೂ ಎಲ್ ಪಿಜಿ ಗ್ಯಾಸ್ ಸಿಲಿಂಡರ್, ಪ್ರತಿ ಮನೆಗೂ ಶೌಚಾಲಯ, ಭಯೋತ್ಪಾದನೆಯ ವಿರುದ್ಧ ರಾಜೀ ಇಲ್ಲದ ನಿಲವು ಪ್ರತಿಸಂಪೂರ್ಣ ಅಸಹಿಷ್ಣುತೆ, ಭಯೋತ್ಪಾದನೆಯ ಹೋರಾಟದಲ್ಲಿ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ, ಸೈನ್ಯಗಳ ಸಶಕ್ತೀಕರಣ ಎಲ್ಲಾ ಬಗೆಯ ಆಧುನಿಕ ಶಸ್ತ್ರಾತ್ರ್ಯಗಳು, ಸಲಕರಣೆಗಳುತ್ತು ಯಂತ್ರೋಪಕರಣಗಳನ್ನು ಒದಗಿಸಲಾಗುವುದು.  ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ನಿಮರ್ೂಲನೆ ಮಾಡಲಾಗುವುದು. ನಕ್ಸಲ್ವಾದ ಪೀಡಿತ ರಾಜ್ಯಗಳ ವನವಾಸಿಗಳ ಆಥರ್ಿಕ ಮತ್ತು ಸಾಮಾಜಿಕ ಸುಧಾರಣೆ ಮತ್ತು ಸಶಕ್ತೀಕರಣ. ಜಮ್ಮು ಕಾಶ್ಮೀರದಲ್ಲಿ ಶಾಂತಿ ನೇಲೆಸುವುದಕ್ಕಾಗಿ 5ವರ್ಷಗಳ ಸದೃಢ ಹೆಜ್ಜೆಗಳನ್ನು ಭಾರತ ಇಟ್ಟಾಗಿದೆ. ಆನಸಂಘದ ಕಾಲದಿಂದಲೂ ಸಂವಿಧಾನ 370 ವಿಧಿಯ ನಿಷೇದದ ಪ್ರತಿ ಕಟಿಬದ್ಧರಾಗಿದ್ದೇವೆ. ಸಂವಿಧಾನ 35ಚಿವಿಧಿಯನ್ನು ಅಸಿಂದುಗೊಳಿಸಿ ಜಮ್ಮು ಕಾಶ್ಮೀರದ ಮಹಿಳಾ ನಾಗರೀಕ ಆಸ್ತಿ ಹಕ್ಕಿನ ಪುನರನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ. ಮೋದಿಯವರು ದೇಶದ ಸುರಕ್ಷತೆಗೆ  ಮೊದಲು ಆದ್ಯತೆ ಕೊಡುತ್ತಿದ್ದಾರೆ ಎಂದು ಹೇಳಿದರು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ, ಬಿಜೆಪಿ ಮುಖಂಡರಾದ ಗಿರೇಗೌಡರು, ಹಾಲೇಶ ಕಂದಾರಿ, ವಿರೂಪಾಕ್ಷಪ್ಪ ಬಾರಕೇರಾ ಇನ್ನು ಮುಂತಾದವರು ಉಪಸ್ಥಿತರಿದ್ದರು.