ಕೊಪ್ಪಳ: ಗಂಗಾವತಿ ದುರ್ಗಮ್ಮನ ಹಳ್ಳ ಸ್ವಚ್ಛತಾ ಕಾರ್ಯ ತ್ವರೀತವಾಗಿಸಿ: ಸುನೀಲಕುಮಾರ್

ಕೊಪ್ಪಳ 18: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿರುವ ದುರ್ಗಮ್ಮನ ಹಳ್ಳದ ಸ್ವಚ್ಛತಾ ಕಾರ್ಯವನ್ನು ತ್ವರೀತವಾಗಿ ಕೈಗೊಳ್ಳುವಂತೆ ನಗರಸಭೆಯು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಂಗಾವತಿ ನಗರದ ದುರ್ಗಮ್ಮನ ಹಳ್ಳದ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಗಂಗಾವತಿ ನಗರದ ದುರ್ಗಮ್ಮನ ಹಳ್ಳದ ಸ್ವಚ್ಛತಾ ಕಾರ್ಯವು ಸಾರ್ವಜನಿಕರಿಂದ ಈಗಾಗಲೇ ಪ್ರಾರಂಭವಾಗಿದ್ದು, ಇದಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗುವುದು.  ಈ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯಕ್ಕೆ ಗಂಗಾವತಿ ನಗರಸಭೆಯವರು ಕೆಲಸಗಾರರನ್ನು ಕಳುಹಿಸಿಕೊಡಬೇಕು.  ಕೆಲಸದ ಸಮಕ್ಕಿಂತ ಹೆಚ್ಚಿಗೆ ಕೆಲಸ ಮಾಡಿದರೆ ಅಂತಹ ಕೆಲಸಗಾರರಿಗೆ ಒಟಿ ಸೌಲಬ್ಯವನ್ನು ನೀಡಿ.  ಕೊಪ್ಪಳ ತಾಲೂಕಿನ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ಮತ್ತು ಕುಷ್ಟಗಿ ತಾಲೂಕಿನ ನಿಡಶೇಶಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಜಿಲ್ಲಾಡಳಿತವು ಯಾವ ರೀತಿಯಲ್ಲಿ ಸಹಕಾರ ನೀಡಿದೆ.  ಅದೇ ರೀತಿಯಾಗಿ ದುರ್ಗಮ್ಮನ ಹಳ್ಳ ಸ್ವಚ್ಛತಾ ಕಾರ್ಯಕ್ಕೆ ಸಹಕಾರ ನೀಡಲಿದೆ.  ಈ ಕಾರ್ಯಕ್ಕೆ ಗಂಗಾವತಿ ನಗರಸಭೆಯು ಐದು ಲಕ್ಷ ರೂ.ಗಳನ್ನು ನೀಡಬೇಕು.  ಮತ್ತು ಶಾಸಕರ ಹಾಗೂ ಇತರೆ ಸಕಾರದ ಅನುದಾನದ ಲಭ್ಯವಿದೆಯೇ ಎಂಬುವುದರ ಬಗ್ಗೆ ಪರಿಶೀಲಿಸಿ ಐದು ಲಕ್ಷ ಸೇರಿ ಒಟ್ಟು 10 ಲಕ್ಷ ಅನುದಾನವನ್ನು ದುರ್ಗಮ್ಮನ ಹಳ್ಳ ಸ್ವಚ್ಛತೆಗೆ ನೀಡಲು ಪ್ರಯತ್ನಿಸಲಾಗುವುದು.  ಕುಷ್ಟಗಿ ತಾಲೂಕಿನ ನಿಡಶೇಶಿ ಕೆರೆ ಹೂಳೆತ್ತುತ್ತಿರುವ ರೈತರು, ಸಾರ್ವಜನಿಕರು ಇಷ್ಟು ಪ್ರಮಾಣದಲ್ಲಿ ಹೂಳನ್ನು ಎತ್ತಲಾಗಿದೆ ಇದರಿಂದ ಮುಂದಿನ ದಿನಮಾನಗಳಲ್ಲಿ ನಮಗೆ ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆಯಲಿದೆ ಎಂದು ಹೇಳುತ್ತಿದ್ದಾರೆ.  ಈ ದಿಶೆಯಲ್ಲಿ ನಗರಸಭೆಯವರು ದುರ್ಗಮ್ಮನ ಹಳ್ಳದ ಸ್ವಚ್ಛತೆಯು ಎಷ್ಟು ಪ್ರಮಾಣದಲ್ಲಾಗಿದೆ ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕು.  ಗುಣಮಟ್ಟದ ಸೇತುವೆ ನಿಮರ್ಾಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ, ಉಪವಿಭಾಗಾಧೀಕಾರಿ ಸಿ.ಡಿ. ಗೀತಾ ಸೇರಿದಂತೆ ಗಂಗಾವತಿ ನಗರಸಭೆ, ಮತ್ತು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ತಹಶೀಲ್ ಕಚೇರಿ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.