ಕೊಪ್ಪಳ: ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಪಿಡಿಓ ಜಮೀಲ್ ಅಹ್ಮದ್ ಆಯ್ಕೆ
ಲೋಕದರ್ಶನ ವರದಿ
ಕೊಪ್ಪಳ 08: ಪಕ್ಕದ ಗೋವಾ ರಾಜ್ಯದ ಬಿಚ್ಚೋಲಿಯಂ ನಗರದಲ್ಲಿ ಇದೆ ತಿಂಗಳ ಜೂನ್ 16ರ ಭಾನವಾರದಂದು ಕನರ್ಾಟಕ ಜಾಗೃತಿ ವೇತಿಕೆ ಬೆಂಗಳೂರು ಹಾಗೂ ಕರ್ಮಭೂಮಿ ಕನ್ನಡ ಸಂಘ ಬಿಚ್ಚೋಲಿ ಇವುಗಳ ಸಂಯುಕ್ತ ಅಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಜರುಗಲಿರುವ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದಲ್ಲಿ ಜಿಲ್ಲೆಯ ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮ ಪಂಚಾಯತಿಯ ಪಿಡಿಓ ಜಮೀಲ್ ಅಹ್ಮದ್ ಗೆ ಪ್ರತಿಷ್ಠೀತ ಕರುನಾಡ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲು ನಿರ್ಣಯಿಸಲಾಗಿದೆ, ಎಂದು ವೇದಿಕೆಯ ಅಧ್ಯಕ್ಷ ಮಹೇಶ್ ಬಾಬು ಸುವರ್ೆ ತಿಳಿಸಿದ್ದಾರೆ.
ಜೂನ್16ರಂದು ಗೋವಾ ರಾಜ್ಯದ ಬಿಚ್ಚೋಲಿಯಂ ನಗರದ ಹೀರಾಬಾಯಿ ಹಾಲ್ ನಲ್ಲಿ ಜರುಗಲಿರುವ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾದಕರಿಗೆ ನೀಡುವ ಪ್ರಶಸ್ತಿ ಪ್ರಾಧನ ಸಮಾರಂಭದಲ್ಲಿ ಪಿಡಿಓ ಜಮೀಲ್ ಅಹ್ಮದ್ರವರ ಗ್ರಾಮೀಣ ಭಾಗದಲ್ಲಿನ ಉತ್ತಮ ಸೇವೆ ಹಾಗೂ ಸಾಮಾನ್ಯ ಜನರೊಂದಿಗೆ ಅವರ ಉತ್ತಮ ಕಾರ್ಯ ಹಾಗೂ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ಕಾರ್ಯಕ್ರಮದ ಸಂಘಟಕರಾದ ಮಹೇಶ ಬಾಬು ಸುವರ್ೆ ಮತ್ತು ಶಿವ ಬಾಲ ಸ್ವಾಮಿರವರು ಜಂಟಿ ಪ್ರಕಟಣೆ ಮೂಲಕ ತಿಳಿಸಿ ಸಮ್ಮೇಳನದಲ್ಲಿ ಈ ಭಾಗದ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡು ಸರ್ವರನ್ನು ಸ್ವಾಗತಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 