ಕೊಪ್ಪಳ 29: ಲೋಕಸಭಾ ಚುನಾವಣೆ ನಡೆಯುತ್ತಿದ್ದು ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಮಾಡುವ ವೇಳೆ ಅಗತ್ಯವಿರುವ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದು ಇದಕ್ಕೆ ಅನ್ವಯಿಸುವ ನೈಜ ಖರ್ಚು -ವೆಚ್ಚಗಳ ವಿವರವನ್ನು ಸಲ್ಲಿಸಬೇಕೆಂದು ವೆಚ್ಚ ವೀಕ್ಷಕರಾದ ಎಂ. ಜಯರಾಮ್ರವರು ತಿಳಿಸಿದರು.
ಅವರು (ಮಾ.29) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ತಿಳಿಸಿದರು.
ಅಭ್ಯಥರ್ಿ, ಪಕ್ಷಗಳಿಂದ ಚುನಾವಣಾ ಪ್ರಚಾರ ಮಾಡಲು ಬಳಸುವ ವಾಹನಗಳು, ಪ್ರಚಾರ ಸಾಮಾಗ್ರಿ ಮತ್ತು ಸಭೆ, ಸಮಾರಂಭ, ರ್ಯಾಲಿಗಳನ್ನು ನಡೆಸುವಾಗ ಕಡ್ಡಾಯವಾಗಿ ಇದಕ್ಕೆ ಬೇಕಾದ ಅನುಮತಿಯನ್ನು ಪಡೆದಿರುವುದಲ್ಲದೆ, ಈಗಾಗಲೇ ಎಲ್ಲಾ ಖಚರ್ು-ವೆಚ್ಚಗಳಿಗೆ ಸಂಬಂಧಿಸಿದಂತೆ ದರವನ್ನು ಸಹ ನಿಗದಿಮಾಡಿದ್ದು ಅದರಂತೆ ಪ್ರತಿದಿನ ಲೆಕ್ಕವನ್ನು ನೀಡಬೇಕಾಗುತ್ತದೆ ಎಂದರು.
ಮಾದರಿ ನೀತಿ ಸಂಹಿತೆಯು ಎಲ್ಲಾ ಪಕ್ಷಗಳು, ಅಭ್ಯಥರ್ಿಗಳಿಗೂ ಅನ್ವಯವಾಗಲಿದ್ದು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಯಮಗಳನ್ನು ಪಾಲನೆ ಮಾಡುವುದರಿಂದ ಮುಕ್ತ, ನ್ಯಾಯಸಮ್ಮತ, ಪಾರದರ್ಶಕವಾಗಿ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಸಹ ಸಹಕಾರ ನೀಡಬೇಕೆಂದರು. ಯಾವುದೇ ವೆಚ್ಚಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಿಗೆ ಅಗತ್ಯ ಮಾಹಿತಿ ಬೇಕಾದಲ್ಲಿ ಚುನಾವಣಾಧಿಕಾರಿಗಳ ಕಚೇರಿಯನ್ನು ಸಂಪಕರ್ಿಸಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ಮಾತನಾಡಿ, ಮಾದರಿ ನೀತಿ ಸಂಹಿತೆಯು ಎಲ್ಲರಿಗೂ ಅನ್ವಯಿಸಲಿದ್ದು, ಅಭ್ಯಥರ್ಿಗಳ ಖಚರ್ು-ವೆಚ್ಚಗಳಿಗೆ ಸಂಬಂಧಿಸಿದಂತೆ ಎಲ್ಲಾ ದರಗಳ ವಿವರವನ್ನು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿಯೇ ಅಂತಿಮಗೊಳಿಸಲಾಗಿದೆ. ಈ ದರಗಳಂತೆಯೇ ಖಚರ್ು-ವೆಚ್ಚಗಳ ವಿವರವನ್ನು ನೀಡಬೇಕಾಗುತ್ತದೆ. ಈಗಾಗಲೇ ಅಧಿಸೂಚಿತ ದರಗಳನ್ನು ಹೊರತುಪಡಿಸಿ ಕಡಿಮೆ ದರವನ್ನು ನಮೂದು ಮಾಡಿದ್ದಲ್ಲಿ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಎಲ್ಲಾ ಪಕ್ಷಗಳ ಮುಖಂಡರಿಗೆ ತಿಳಿಸಿ ಎಲ್ಲಾ ಹಂತದಲ್ಲೂ ಸಹ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ಮಾಹಿತಿಯನ್ನು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ತಿಳಿಸಿದರು.
ಡಿಎಫ್ಒ ಯಕ್ಷಪಾಲ ಕ್ಷೀರಸಾಗರ, ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ ಹಾಗೂ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.