ಲೋಕದರ್ಶನ ವರದಿ
ಕೊಪ್ಪಳ 07: ಉತ್ತರ ಕರ್ನಾಟಕ ಭಾಗದ ಭಾಷೆಯಲ್ಲಿ ಗಜೇಂದ್ರಗಡ, ಹುನಗುಂದ, ಬಾಗಲಕೋಟೆ, ಕುಕನೂರು ಸೇರಿದಂತೆ ಇತರ ಭಾಗದಲ್ಲಿ ಗ್ರಾಮೀಣ ಬದುಕಿನ ನೈಜ ರೂಪ ಹೊಂದಿರುವ ಜೈಕೇಸರಿ ನಂದನ ಎಂಬ ಕನ್ನಡ ಚಿತ್ರ ಇದೇ ಏಪ್ರೀಲ್ 12 ರಂದು ರಾಜ್ಯಾದ್ಯಾಂತ ಬಿಡುಗಡೆಗೊಳ್ಳುವುದು ಎಂದು ಚಿತ್ರ ನಿರ್ದೇಶಕ ಶ್ರೀಧರ ಜಾವೂರ್ ಹೇಳಿದರು.
ಅವರು ರವಿವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಈ ಚಿತ್ರವು ಊರ ಸುಟ್ಟ ಹನುಮಪ್ಪನ ಗುಡಿ ಎಂಬ ನಾಟಕವನ್ನು ಈ ಸಿನಿಮಾ ಕಥೆಯನ್ನಾಗಿ ಬಳಸಿಕೊಳ್ಳಲಾಗಿದೆ, ಸುಮಾರು 1.5ಕೋಟಿ ರೂಪಾಯಿಗಳ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದ್ದು, ಎರಡು ಗ್ರಾಮಗಳ ಮಧ್ಯವಿರುವ ವಿವಾದಗಳಿಂದ ಅಲ್ಲಿ ಜರುಗುವ ಘಟನೆಗಳನ್ನು ಹೊಂದಿದ್ದು ಗ್ರಾಮೀಣ ಭಾಗದಲ್ಲಿ ಮೂಢನಂಬಿಕೆಯನ್ನು ಹೋಗಲಾಡಿಸಿ ಭಾವೈಕ್ಯತೆ ಸಂದೇಶವನ್ನು ಸಾರುವುದು ಚಿತ್ರದ ಉದ್ದೇಶ ಹೊಂದಿದೆ.
ಚಿತ್ರವು ಬಾಗಲಕೋಟೆ, ಗಜೇಂದ್ರಗಡ, ಯಲಬುಗರ್ಾ, ಕೊಪ್ಪಳ ಸೇರಿದಂತೆ ರಾಜ್ಯಾದ್ಯಾಂತ ಬಿಡುಗಡೆ ಹೊಂದುತ್ತಿದ್ದು ಚಿತ್ರ ಪ್ರೇಮಿಗಳು ಜೈಕೇಸರಿ ನಂದನ ಚಿತ್ರವನ್ನು ಹೆಚ್ಚು ಹೆಚ್ಚು ಬಾರಿ ವೀಕ್ಷಿಸಿ ಉತ್ತರ ಕರ್ನಾಟಕದ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಚಿತ್ರ ನಿರ್ದೇಶಕ ಶ್ರೀಧರ ಜಾವೂರ್ ಚಿತ್ರ ಪ್ರೇಕ್ಷರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಾಯಕ ಅನಿಲ್ ಜಾವೂರ್, ನಾಯಕಿ ಅಮೃತಾ ಗಡ್ಡದ್, ನಟರಾದ ಆನಂದ, ಕಲ್ಲೇಶ ವರ್ಧನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.