ಕೊಪ್ಪಳ : ಕೊಪ್ಪಳಕ್ಕೆ ಜೈಕೇಸರಿ ನಂದನ ಚಿತ್ರತಂಡ

ಲೋಕದರ್ಶನ ವರದಿ

ಕೊಪ್ಪಳ 15: ನಗರದ ಶ್ರೀಕನಕಾಚಲ ಚಿತ್ರಮಂದಿರಕ್ಕೆ ಸೋಮವಾರದಂದು ಜೈಕೇಸರಿ ನಂದನ ಚಿತ್ರತಂಡ ಆಗಮಿಸಿ ಪ್ರೇಕ್ಷಕರೊಂದಿಗೆ ಚಿತ್ರ ವೀಕ್ಷಿಸಿ ಪ್ರೇಕ್ಷಕರು ಹೆಚ್ಚು ಹೆಚ್ಚು ಚಿತ್ರ ವೀಕ್ಷಣೆ ಮಾಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚಿತ್ರ ನಿದರ್ೇಶಕ ಶ್ರೀಧರ ಜಾವೂರ್ ಮಾತನಾಡಿ ಉತ್ತರ ಕನರ್ಾಟಕ ಭಾಗದ ಭಾಷೆಯಲ್ಲಿ ಗಜೇಂದ್ರಗಡ, ಹುನಗುಂದ, ಬಾಗಲಕೋಟೆ, ಕುಕನೂರು ಸೇರಿದಂತೆ ಇತರ ಭಾಗದಲ್ಲಿ ಗ್ರಾಮೀಣ ಬದುಕಿನ ನೈಜ ರೂಪ ಹೊಂದಿರುವ ಜೈಕೇಸರಿ ನಂದನ   ಈ ಚಿತ್ರವು ಊರ ಸುಟ್ಟ ಹನುಮಪ್ಪ ಊರ ಹೊರಗೆ   ಎಂಬ ನಾಟಕವನ್ನು ಈ ಸಿನಿಮಾ ಕಥೆಯನ್ನಾಗಿ ಬಳಸಿಕೊಳ್ಳಲಾಗಿದೆ, ಎರಡು ಗ್ರಾಮಗಳ ಮಧ್ಯವಿರುವ ವಿವಾದಗಳಿಂದ ಅಲ್ಲಿ ಜರುಗುವ ಘಟನೆಗಳನ್ನು ಹೊಂದಿದ್ದು ಗ್ರಾಮೀಣ ಭಾಗದಲ್ಲಿ ಮೂಢನಂಬಿಕೆಯನ್ನು ಹೋಗಲಾಡಿಸಿ ಭಾವೈಕ್ಯತೆ ಸಂದೇಶವನ್ನು ಸಾರುವುದು ಚಿತ್ರದ ಉದ್ದೇಶ ಹೊಂದಿದೆ.

ಚಿತ್ರವು ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಗಜೇಂದ್ರಗಡ,ಯಲಬುಗರ್ಾ, ಕೊಪ್ಪಳ ಸೇರಿದಂತೆ ರಾಜ್ಯಾದ್ಯಾಂತ ಬಿಡುಗಡೆಗೊಂಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.  ಚಿತ್ರದ ನಾಯಕ ಅನಿಲ್ ಜಾವೂರ್, ನಾಯಕಿ ಅಮೃತಾ ಗಡ್ಡದ್, ನಟರಾದ ಆನಂದ, ಕಲ್ಲೇಶ ವರ್ಧನ್ ಮುಧೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.