ಶೈಕ್ಷಣಿಕ, ವೃತ್ತಿಪರ ಮತ್ತು ಸಾಮಾಜಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಜ್ಞಾನ ಮತ್ತು ಕೌಶಲ್ಯಗಳು ಅವಶ್ಯಕ

ಶೈಕ್ಷಣಿಕ, ವೃತ್ತಿಪರ ಮತ್ತು ಸಾಮಾಜಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಜ್ಞಾನ ಮತ್ತು ಕೌಶಲ್ಯಗಳು ಅವಶ್ಯಕ Knowledge and skills are necessary to effectively address academic, professional, and social challe

ಶೈಕ್ಷಣಿಕ, ವೃತ್ತಿಪರ ಮತ್ತು ಸಾಮಾಜಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಜ್ಞಾನ ಮತ್ತು ಕೌಶಲ್ಯಗಳು ಅವಶ್ಯಕ

ವಿಜಯಪುರ  27: 21ನೇ ಶತಮಾನದ ಭಾರತವನ್ನು ರೂಪಿಸುವಲ್ಲಿ ಮಹಿಳಾ ಸಬಲೀಕರಣದ ಪಾತ್ರ ಅತ್ಯಂತ ಮುಖ್ಯವಾದದ್ದು, ಶೈಕ್ಷಣಿಕ, ವೃತ್ತಿಪರ ಮತ್ತು ಸಾಮಾಜಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಜ್ಞಾನ ಮತ್ತು ಕೌಶಲ್ಯಗಳು ಅವಶ್ಯಕ ಎಂದು ಮಹಿಳಾ ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ಗ್ರಂಥಪಾಲಕ ಪ್ರೊ. ಗವಿಸಿದ್ದಪ್ಪ ಎ. ಹೇಳಿದರು. 

ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ. ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಪಿಎಂ-ಉಷಾ ಮತ್ತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಪರಿಷತ್ತು (ಕೆ.ಎಸ್‌.ಎಚ್‌.ಇ.ಸಿ), ಬೆಂಗಳೂರು ಅಡಿಯಲ್ಲಿ “21ನೇ ಶತಮಾನದ ನವ ಗ್ರೇಟ್ ಭಾರತ್‌: ಮಹಿಳಾ ಸಬಲೀಕರಣ, ಸ್ಪರ್ಧಾತ್ಮಕ ಕೌಶಲ್ಯ ತರಬೇತಿಯಲ್ಲಿ ಯಶಸ್ಸು” ಕುರಿತ ಎರಡು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ಮಹಿಳೆಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಲು, ವಿವಿಧ ಕೌಶಲ್ಯಗಳನ್ನು ಬೇಳೆಸಿಕೊಳ್ಳಬೇಕು. ಅಗತ್ಯವಾದ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಜ್ಞಾನ ಅವಶ್ಯವಾಗಿ ಬೇಕಾಗುತ್ತದೆ. ಅದಕ್ಕಾಗಿ ಹೆಚ್ಚು ಅಧ್ಯಯನಶೀಲರಾಗಬೇಕು ಎಂದರು. ಅಷ್ಟೆ ಅಲ್ಲದೇ ಈ ಕಾರ್ಯಾಗಾರದ ಮುಖ್ಯ ಉದ್ದೇಶವು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರಲ್ಲಿ ಸ್ಪರ್ಧಾತ್ಮಕ ಮತ್ತು ಉದ್ಯೋಗಾರ್ಹತೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಾದ ಅರಿವು ಮತ್ತು ತಿಳುವಳಿಕೆಯನ್ನು ಮೂಡಿಸುವುದಾಗಿದೆ ಎಂದರು. 

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ತುಳಸೀದಾಸ್ ಮತ್ತು ರಾಜ್ ಇನ್‌ಸ್ಟಿಟ್ಯೂಟ್‌ನ (ಟಿ.ಆರ್‌.ಐ.ಕೆ.ಎಸ್), ನಿರ್ದೇಶಕಿ ತುಳಸಿ ದಾಸ್ ಜಿ. ಮಾತನಾಡಿ, ಯುಪಿಎಸ್ಸಿ ಪರೀಕ್ಷೆಗಳು ಮತ್ತು ಮಹಿಳಾ ಸಬಲೀಕರಣದ ಕುರಿತಂತೆ ತಿಳಿಸಿ. ಯುಪಿಎಸ್ಸಿ ಮತ್ತು ನಾಗರೀಕ ಸೇವಾ ಪರೀಕ್ಷೆಗಳಿಗೆ ಅಗತ್ಯವಾದ ಸಿದ್ಧತೆ, ಕೌಶಲ್ಯಗಳು ಮತ್ತು ಮೀಸಲಾತಿ ನೀತಿಗಳ ಬಗ್ಗೆ ವಿವರಿಸಿದರು.  ಟಿ.ಆರ್‌.ಐ.ಕೆ.ಎಸ್ ವಿಜಯಪುರದ ಶಿಕ್ಷಕ ಸುರೇಶ ನಿಮಂಗಾರಿ ಮತ್ತು ವಿಜಯಕುಮಾರ್ ಮಾಮದಾಪೂರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಹಿಳಾ ಆಕಾಂಕ್ಷಿಗಳಿಗೆ ದೊರೆಯಬಹುದಾದ ಅವಕಾಶಗಳು, ಪ್ರಯೋಜನಗಳು ಮತ್ತು ಪರೀಕ್ಷಾ ವಿಧಾನಗಳ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. 

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ವಿಜಯಪುರದ (ಆರ್‌.ಯು.ಡಿ.ಎಸ್‌.ಇ.ಟಿ), ಹಿರಿಯ ಅಧ್ಯಾಪಕರಾದ ಮಲ್ಲಿಕಾರ್ಜುನ್ ಹಟ್ಟಿ ಮಾತನಾಡಿ, ವಿವಿಧ ಸರ್ಕಾರಿ ಉದ್ಯೋಗ-ಸಂಯೋಜಿತ ಪ್ರೋತ್ಸಾಹಕ ಯೋಜನೆಗಳು, ಅವುಗಳ ಉದ್ದೇಶ, ಅರ್ಹತಾ ಮಾನದಂಡಗಳು ಹಾಗೂ ಅರ್ಜಿ ಪ್ರಕ್ರಿಯೆ ಕುರಿತು ವಿವರಿಸಿ, ವಿದ್ಯಾರ್ಥಿನಿಯರು ಉದ್ಯೋಗಾವಕಾಶ, ಇಂಟರ್ನ್‌ಶಿಪ್ ಮತ್ತು ಉದ್ಯಮಶೀಲತೆಗಾಗಿ ಈ ಯೋಜನೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಸಂಯೋಜಕಿ ಪ್ರೊ. ಅನಿತಾ ಆರ್‌. ನಾಟಿಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ಹಾಗೂ ಅದರ ಮಹತ್ವವನ್ನು ವಿವರಿಸಿದರು. ವಾಣಿಜ್ಯ ವಿಭಾಗದ ಸಂಯೋಜಕ, ಸ್ಪರ್ಧಾತ್ಮಕ ಪರೀಕ್ಷಾ ಅಕಾಡೆಮಿಯ ಸಂಯೋಜಕ ಡಾ. ಎಸ್‌.ಆರ್‌. ಗಣೇಶ, ಹಾಗೂ ವಿವಿಧ ವಿಭಾಗದ ಸಿಬ್ಬಂದಿ, ವಿದ್ಯಾರ್ಥಿನಿಯರು ಮತ್ತು ಉಪಸ್ಥಿತರಿದ್ದರು.