ಕಿತ್ತೂರು ಕರ್ನಾಟಕ ಸೇನೆ ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ
Kittur Karnataka Army Youth Unit office bearers take oath
ಬೆಳಗಾವಿ 17: ಕಿತ್ತೂರು ಕರ್ನಾಟಕ ಸೇನೆ ಯುವ ಘಟಕದ ಬೆಳಗಾವಿ ಜಿಲ್ಲಾ ತಾಲೂಕು ನಗರ ಗ್ರಾಮ ಎಲ್ಲವೂ ಸೇರಿ 22 ನೂತನ ಯುವ ಪದಾಧಿಕಾರಿಗಳನ್ನು ನವಂಬರ್ 15ರಂದು ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಮತ್ತು ಯುವ ಘಟಕ ರಾಜ್ಯಾಧ್ಯಕ್ಷ ಮಹೇಶ್ ಎಸ್ ಶೀಗಿಹಳ್ಳಿ ರವರ ನೇತೃತ್ವದಲ್ಲಿ ಪದಗ್ರಹಣ ಮಾಡಲಾಯಿತು.
ಸಂಘಟನೆ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ್ ಶೀಗಿಹಳ್ಳಿ ಮಾತನಾಡಿ ಕಿತ್ತೂರು ಕರ್ನಾಟಕ ಸೇನೆಯ ತತ್ವ ಸಿದ್ಧಾಂತದ ಅಡಿಯಲ್ಲಿ ಸಂಘಟನೆ ಹಾಗೂ ಪದಾಧಿಕಾರಿಗಳ ಸೂಚನೆಯಂತೆ ನಡೆಯಬೇಕು. ಕಿತ್ತೂರು ಕರ್ನಾಟಕ ಸೇನೆ ರಚನೆಯಾಗಿರುವುದಕ್ಕೆ ದೊಡ್ಡ ಬಲವಾದ ಕಾರಣವಿದ್ದು, ನಿಜವಾದ ಕನ್ನಡ ಹೋರಾಟಗಾರ ಯುವಕರನ್ನು ಗುರುತಿಸುವುದು ಎಂದರು.
ಸತ್ಯಕ್ಕಾಗಿ ನ್ಯಾಯಕ್ಕಾಗಿ ಕನ್ನಡಿಗರ ಸ್ವಾಭಿಮಾನಕ್ಕೆ ಕನ್ನಡ ನಾಡಿಗೆ ರಕ್ಷಣೆ ನೀಡಲು ಸಂಘಟನೆ ಕಟ್ಟಿ ಹೋರಾಟ ಮಾಡಬಲ್ಲ ಯುವಕರನ್ನು ಸೇರಿಸಿ ರಾಜ್ಯಾದ್ಯಂತ ಸಂಘಟನೆ ರಚನೆ ಮಾಡಲು ಸಿದ್ಧರಾಗೋಣ. ಸಂಘಟನೆಯ ಹೋರಾಟ ದೊಡ್ಡ ಪ್ರಮಾಣದಲ್ಲಿ ಯಶಸ್ವಿಮಾಡಬೇಕು ಮತ್ತು ಕಿತ್ತೂರು ಕರ್ನಾಟಕ ಸೇನೆಯಿಂದ ಒಳ್ಳೆಯ ಸಮಾಜಮುಖಿ ಕಾರ್ಯಕ್ರಮಗಳು ಆಗಬೇಕು ಎಂದು ಮಹೇಶ್ ಶೀಗಿಹಳ್ಳಿ ಹೇಳಿದರು.
ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಮಂಗೇಶ ಚನ್ನಿಕುಪ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರ್ಪ ನಾಯಕ, ಬೆಳಗಾವಿ ಜಿಲ್ಲಾ ಸಂಚಾಲಕರಾಗಿ ಅಜ್ಜಪ್ಪ ದಳವಾಯಿ, ಬೆಳಗಾವಿ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಆಕಾಶ್ ನಾಯಕ್, ಬೆಳಗಾವಿ ತಾಲೂಕು ಅಧ್ಯಕ್ಷರಾಗಿ ಮುತ್ತೂರಾಜ್ ಹೊಸಗಟ್ಟಿ, ಬೆಳಗಾವಿ ತಾಲೂಕು ಸಂಘಟನಾ ಕಾರ್ಯದರ್ಶಿ ಗಣೇಶ್ ಎನ್, ಬೆಳಗಾವಿ ತಾಲೂಕು ಸಂಚಾಲಕ ಅನಿಲ ಕುಮಾರ್ ಬಂಗಾರಗುಂಡ ಮತ್ತಿತರರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 