ಕಿತ್ತೂರು ಉತ್ಸವ: ವಿಚಾರ ಸಂಕಿರಣ ಭವಿಷ್ಯಕ್ಕೆ ದಿಕ್ಸೂಚಿಯಾಗಿರಲಿ

ಕಿತ್ತೂರು ಉತ್ಸವ: ವಿಚಾರ ಸಂಕಿರಣ ಭವಿಷ್ಯಕ್ಕೆ ದಿಕ್ಸೂಚಿಯಾಗಿರಲಿ Kittur Festival: Let the symposium be a compass for the future

ಕಿತ್ತೂರು ಉತ್ಸವ: ವಿಚಾರ ಸಂಕಿರಣ ಭವಿಷ್ಯಕ್ಕೆ ದಿಕ್ಸೂಚಿಯಾಗಿರಲಿ 

ಬೆಳಗಾವಿ 24: 201ನೇಯ ಕಿತ್ತೂರು ವಿಜಯೋತ್ಸವ ಸಡಗರ ಸಂಭ್ರಮಗಳ ನಡುವೆ ಉತ್ಸಾಹದಿಂದ ನಡೆಯುತ್ತಿರುವುದು ಶ್ಲಾಘನೀಯ. ಇದಕ್ಕಾಗಿ ಶಾಸಕರು ಹಾಗೂ  ಜಿಲ್ಲಾಡಳಿತಕ್ಕೆ ಅಭಿನಂದನೆಗಳು.  ಆದರೆ, ಕಿತ್ತೂರು ಉತ್ಸವದ ಮುಖ್ಯ ಉದ್ದೇಶವೆಂದರೆ ಸಂಸ್ಥಾನದ ಶೌರ್ಯ, ಸಾಹಸ, ಸಂಸ್ಕೃತಿ, ಪರಂಪರೆಯನ್ನು ಪ್ರಸಕ್ತ ಪೀಳಿಗೆಗೆ ತಿಳಿಸುವುದೇ ಆಗಿದೆ. ಇದಕ್ಕಾಗಿ ಸೂಕ್ತ ಮಾರ್ಗವೆಂದರೆ ವಿಚಾರ ಸಂಕಿರಣ. ನಾನು ಸುಮಾರು 25 ವರ್ಷಗಳಿಂದ ವಿಚಾರ ಸಂಕಿರಣದ ನಿರ್ವಹಣೆ ಮಾಡಿದ್ದು, ಕಳೆದ ವರ್ಷದ ವಿಚಾರ ಸಂಕಿರಣದ ವೇದಿಕೆಯ ಮೇಲೆ ಬಹಿರಂಗವಾಗಿ ಹೊಸ ಧ್ವನಿ, ಹೊಸ ವಿಚಾರಗಳು ಬರಲಿ ಎನ್ನುವ ಉದ್ದೇಶದಿಂದ ಮುಂದಿನ ವರ್ಷ ‘ಬೇರೆಯವರಿಗೆ ಅವಕಾಶ ಕೊಡಿ, ನನ್ನ ಕೈ ಬಿಡಿ’  ಎಂದು ವಿನಂತಿಸಿದ್ದರ ಹಿನ್ನಲೆಯಲ್ಲಿ ಈ ಸಲ ನಾನು ಭಾಗವಹಿಸಿಲ್ಲ, ಇದಕ್ಕಾಗಿ ಜಿಲ್ಲಾಡಳಿತಕ್ಕೆ ಧನ್ಯವಾದಗಳು, ಆದರೆ ಈ ಸಲದ ವಿಚಾರ ಸಂಕಿರಣ ನೋಡಲಾಗಿ, ಸಾಕಷ್ಟು ಹಳೆಯ ವಿಷಯಗಳು ಇದ್ದು ಕೆಲವರು  ಈಗಾಗಲೇ ಉಪನ್ಯಾಸ ನೀಡಿದ ಉಪನ್ಯಾಸಕರೆ ಇರುವುದು ಕಂಡು ಬರುತ್ತದೆ. ವಿಚಾರ ಸಂಕಿರಣಕ್ಕೆ ಅಳವಡಿಸಿಕೊಳ್ಳಬೇಕಾದ ಹೊಸ ವಿಷಯಗಳು ಸಾಕಷ್ಟಿವೆ. ಉದಾ: ಮಲ್ಲಸರ್ಜನನ ಸಮಾಧಿ, ಕಿತ್ತೂರಿನ ನಿರ್ಲಕ್ಷಿತ ಸ್ಮಾರಕಗಳು, ರಾಣಿ ಚೆನ್ನಮ್ಮನವರ ಜನ್ಮಸ್ಥಳ ಮತ್ತು ಜನ್ಮ ದಿನಾಂಕ, ಭಾವಚಿತ್ರ, ವಿಜಾಪುರ ತಾಲೂಕಿನ ಜಂಬಗಿ ಬಗ್ಗೆ,  ರಾಣಿ ಚೆನ್ನಮ್ಮ ಹಾಗೂ ರಾಣಿ ರುದ್ರಮ್ಮನವರ ನಿಧನ, ಕಿತ್ತೂರಿನ ಮೊದಲನೆಯ ರಾಜಧಾನಿ ಎಂ.ಕೆ. ಹುಬ್ಬಳ್ಳಿ, ತವರೂರು ಕಾಕತಿಯ ಸ್ಥಿತಿಗತಿ, ಗಡಾದ ಮರಡಿ, ಕೆಂಪ ಮರಡಿ, ಈವರೆಗೆ ಪ್ರಕಟವಾದ ಸಾಹಿತ್ಯ ಹಿ ಒಟ್ಟಿನಲ್ಲಿ ಒಂದು ನಿಖರವಾದ ಇತಿಹಾಸವನ್ನು ಕಟ್ಟಿಕೊಳ್ಳುವಲ್ಲಿ ನಾವಿಂದು ಚಿಂತನ ಮಂಥನ ಮಾಡಬೇಕಾಗಿದೆ.  ಆದರೆ ಇಂತಹ ವಿಷಯಗಳು ಪ್ರಸಕ್ತ ವಿಚಾರ ಸಂಕಿರಣದಲ್ಲಿ  ಕಂಡು ಬರುತ್ತಿಲ್ಲ.  ಮುಖ್ಯವಾಗಿ ವಿಚಾರ ಸಂಕಿರಣಕ್ಕೆ ಜನರನ್ನು ಕೂಡಿಸುವುದು ಸಹ ಮುಖ್ಯವಾದ ಸಂಗತಿಯಾಗಿದೆ. ಅಂದರೆ ಮಾತ್ರ ಸಂಸ್ಥಾನದ ಸಂದೇಶಗಳು ಸಾರ್ವಜನಿಕವಾಗಿ ತಲುಪಲು ಸಾಧ್ಯ. ಈ ಯೋಚನೆಗಳು  ಮುಂಬರುವ ‘ಸಂಗೊಳ್ಳಿ ರಾಯಣ್ಣ’ ಹಾಗೂ ‘ಬೆಳವಡಿ ಉತ್ಸವ’ಗಳಿಗೂ  ಅನ್ವಯವಾಗುತ್ತವೆ. ಸಾಕಷ್ಟು ಮುಂಚಿತವಾಗಿ ಹಿರಿಯ ಸಂಶೋಧಕರನ್ನು ಮತ್ತು ಇತಿಹಾಸಕರರ ಸಲಹೆ ಪಡೆದು ಸೂಕ್ತ ವಿಷಯಗಳನ್ನು ವಿಚಾರ ಸಂಕಿರಣದಲ್ಲಿ ಅಳವಡಿಸಿಕೊಳ್ಳಲೆಂದು ಇತಿಹಾಸಕಾರರು ಚಾರಿತ್ರಿಕ ಕಾದಂಬರಿಕಾರರಾದ ಯ.ರು. ಪಾಟೀಲ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.