ಕಾರವಾರದ ಮಹಿಳೆ ಕಿಶೋರಿ ಪೆಡ್ನೇಕರ್ ಮುಂಬಯಿ ಮಹಾನಗರ ಪಾಲಿಕೆಯ ಮೇಯರ್

ಕಾರವಾರದ ಮಹಿಳೆ ಕಿಶೋರಿ ಪೆಡ್ನೇಕರ್  ಮುಂಬಯಿ ಮಹಾನಗರ ಪಾಲಿಕೆಯ ಮೇಯರ್  


ಕಾರವಾರ 20: ಮಂಬಯಿ ನಗರದ ವಲರ್ಿ ಕ್ಷೇತ್ರದಿಂದ ಸತತವಾಗಿ  ಹಲವು  ಸಲ ಆಯ್ಕೆಯಾಗಿರುವ ಕಾರವಾರ ಮೂಲದ ಶಿವಸೇನೆಯ ಕಿಶೋರಿ ಪೆಡ್ನೇಕರ್ ಮುಂಬಯಿ ಮಹಾನಗರ ಪಾಲಿಕೆಯ  ಮೇಯರ್ ಹುದ್ದೆಗೆ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅವರು ಕಾರವಾರ ತಾಲೂಕಿನ ಅಂಬೇಜೂಗ್ನ ಪಂಡರಿರಾಯ ಪೆಡ್ನೇಕರ ಅವರ ಮೊಮ್ಮಗನ ಪತ್ನಿಯಾಗಿದ್ದು, ಕಾರವಾರದ ಸೊಸೆಯಾಗಿರುವುದು ವಿಶೇಷವಾಗಿದೆ.

ಮುಂಬೈ ಮಹಾನಗರ ಪಾಲಿಕೆಯ 88 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೇಯರ್ ಅಭ್ಯಥರ್ಿಯ ಅವಿರೋಧ ಆಯ್ಕೆ ನಡೆದಿದ್ದು, ಶುಕ್ರವಾರ ಮುಂಬೈ ಮಹಾನಗರ ಪಾಲಿಕೆಯ 77 ನೇ ಮೇಯರ್ ಆಗಿ ಕಿಶೋರಿ ಪೆಡ್ನೇಕರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಬಿಜೆಪಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಸಂಖ್ಯಾ ಬಲದ ಕೊರತೆ  ಕಾರಣದಿಂದ ಮೇಯರ್ ಚುನಾವಣೆಗೆ ತಮ್ಮ ಅಭ್ಯಥರ್ಿಗಳನ್ನು ಕಣಕ್ಕೆ ಇಳಿಸದೇ ಹಿಂದೆ ಸರಿದಿದ್ದವು. ಇದರಿಂದ ಶಿವಸೇನೆಯ ಕಿಶೋರಿ ಪೆಡ್ನೇಕರ್ ಅವರ ಮೇಯರ್ ಹುದ್ದೆಯ ಹಾದಿ ಸುಗಮವಾಗಿತ್ತು. ಕಿಶೋರಿಯವರು ಶಿವಸೇನೆಯಲ್ಲಿ ವರ್ಚಸ್ವಿ ನಾಯಕಿಯಾಗಿ ಗುರುತಿಸಿಕೊಂಡಿದ್ದು, ಶಿವಸೇನೆಯ ಪ್ರಮುಖ ಪ್ರಚಾರಕಿಯಾಗಿ ಮುಂಚೂಣಿಯಲ್ಲಿದ್ದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಉಂಟಾದ ಬಿಕ್ಕಟ್ಟಿನ ಮಧ್ಯೆ ರಾಜಕೀಯ ವಲಯದಲ್ಲಿ ಮೇಯರ್ ಹುದ್ದೆಯ ಆಯ್ಕೆ ತೀವ್ರ ಕುತೂಹಲ ತಂದಿತ್ತು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ, ಬಿಜೆಪಿ ಮತ್ತು ಶಿವಸೇನಾ ಪಕ್ಷಗಳು ಅಕ್ಟೋಬರ್ 24 ರಂದು ಫಲಿತಾಂಶ ಪ್ರಕಟವಾದ ನಂತರ ತಮ್ಮ ಮೈತ್ರಿಯನ್ನು ಮುರಿದುಕೊಂಡವು. ಈ ನಡುವೆ ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಸಕರ್ಾರ ರಚಿಸಲು ಶಿವಸೇನಾ ಪ್ರಯತ್ನ ಮುಂದುವರಿದಿದೆ. ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆಯು ಜಾರಿಯಲ್ಲಿದೆ. ಇದರ ಹೊರತಾಗಿಯೂ ಶಿವಸೇನಾ,ಎನ್ಸಿಪಿ,ಕಾಂಗ್ರೆಸ್ ಪಕ್ಷಗಳು ಸಕರ್ಾರ ರಚನೆ ಸಂಬಂಧ ಕಸರತ್ತು ನಡೆಸುತ್ತಿವೆ. ಈ ವಿದ್ಯಮಾನಗಳ ಹೊರತಾಗಿಯೂ ಮೇಯರ್ ಹುದ್ದೆ ಆಯ್ಕೆಯ ಬಗ್ಗೆಯೂ ತೀವ್ರ ಚಚರ್ೆ ಎದ್ದಿದ್ದವು. 

 ಹಾಲಿ ಮೇಯರ್ ವಿಶ್ವನಾಥ್ ಮಹಾದೇಶ್ವರ ಅವರ ಅವಧಿ ನಾಳೆ  ಗುರುವಾರ ಮುಕ್ತಾಯವಾಗಲಿದೆ.  ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ಚುನಾವಣೆ ಶುಕ್ರವಾರ ನಡೆಯಬೇಕಿತ್ತು. ಸೋಮವಾರ ನಾಮಪತ್ರ ಸಲ್ಲಿಸಬೇಕಿತ್ತು. ಶಿವಸೇನೆ ವಲರ್ಿ ಕಾಪರ್ೊರೇಟರ್ ಕಿಶೋರಿ ಪೆಡ್ನೇಕರ್ ಅವರನ್ನು ಮೇಯರ್ ಮತ್ತು ಮಲಾಡ್ ಕಾಪರ್ೊರೇಟರ್ ಸುಹಾಸ್ ವಾಡ್ಕರ್ ಅವರನ್ನು ಉಪಮೇಯರ್ ಹುದ್ದೆಗೆ ನಾಮನಿದರ್ೇಶನ ಮಾಡಿತ್ತು.

ಬಿಜೆಪಿಯ  ಮುಖಂಡ ಆಶಿಶ್ ಶೆಲಾರ್ ಸೋಮವಾರ ಟ್ವೀಟ್ ನಲ್ಲಿ ತಮ್ಮ ಪಕ್ಷವು ಮೇಯರ್ ಹುದ್ದೆ ಹಿಡಿಯುವಷ್ಟು ಸಂಖ್ಯೆ ಹೊಂದಿರದ ಕಾರಣ ಯಾರನ್ನೂ ಕಣಕ್ಕಿಳಿಸುವುದಿಲ್ಲ ಎಂದಿದ್ದರು. ಆದರೆ 2022 ರಲ್ಲಿ ಈ ಹುದ್ದೆಯನ್ನು ವಶಪಡಿಸಿಕೊಳ್ಳುವ ಗುರಿ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.  ನಮ್ಮಲ್ಲಿ ಸಂಖ್ಯಾ ಬಲವಿಲ್ಲ .ಆದ್ದರಿಂದ ನಾವು ಯಾವುದೇ ಅಭ್ಯಥರ್ಿಯನ್ನು ಬಿಎಂಸಿಯಲ್ಲಿ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ನಿಲ್ಲಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರವಿ ರಾಜಾ ಹೇಳಿಕೆ ನೀಡಿದ್ದರು.  ಇದರರ್ಥ ನಾವು ಯಾವುದೇ ಪಕ್ಷವನ್ನು ಬೆಂಬಲಿಸಿದ್ದೇವೆ ಎಂದಲ್ಲ, ಆದರೆ ನಮ್ಮಲ್ಲಿ  ಸಂಖ್ಯಾ ಬಲವಿಲ್ಲದ  ಕಾರಣ ನಾವು ಅಭ್ಯಥರ್ಿಗಳನ್ನು ಹಾಕಲಿಲ್ಲ ಎಂದಿದ್ದರು.  ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಕಾಪರ್ೊರೇಟರ್ ರಾಖಿ ಜಾಧವ್ ಕೂಡ ಇದೇ ನಿಲುವನ್ನು ಪ್ರಕಟಿಸಿದ್ದಾರೆ.  ಇದರಿಂದ ಶಿವಸೇನೆಯ ಮಹಿಳಾ ಅಭ್ಯಥರ್ಿ ಕಾರವಾರದ ಹೆಮ್ಮೆಯ ಸೊಸೆ ಕಿಶೋರಿ ಪೆಡ್ನೇಕರ ಅವರಿಗೆ ಮುಂಬಯಿ  ಮೇಯರ್ ಪದವಿಗೆ ಅನಾಯಾಸವಾಗಿ ದಕ್ಕಿದಂತಾಗಿದೆ.