30ರಿಂದ ಖಾಸ್ಗತೇಶ್ವರ ಜಾತ್ರೆ: ವಿವಿಧ ಕಾರ್ಯಕ್ರಮಗಳು
Khasgateshwar Fair from 30th: Various programs
30ರಿಂದ ಖಾಸ್ಗತೇಶ್ವರ ಜಾತ್ರೆ: ವಿವಿಧ ಕಾರ್ಯಕ್ರಮಗಳು
ತಾಳಿಕೋಟೆ: ಪಟ್ಟಣದ ಆರಾಧ್ಯ ದೈವ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರೆ ಜೂ.30 ರಿಂದ ಜು.10 ವರೆಗೆ ಸಂಭ್ರಮದಿಂದ ಜರುಗಲಿದೆ. ಖಾಸ್ಗತೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಮಹಾ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಪ್ರತಿ ದಿನ ಬೆಳಗ್ಗೆ 6ಘಂಟೆಗೆ ಖಾಸ್ಗತೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿಯನ್ನು ವಿಶ್ವನಾಥ ವಿರಕ್ತಮಠ ನೆರವೇರಿಸುವರು.
ನಿತ್ಯ ಬೆಳಗ್ಗೆ 8.30 ರಿಂದ 9.30, ಸಂಜೆ 6 ರಿಂದ 7ರ ವರೆಗೆ ನಿಜಗುಣ ಶಿವಯೋಗಿಗಳು ಪ್ರವಚನ ನೀಡುವರು. ಕೋರವಾರ ಚೌಕಿಮಠದ ಮುರುಘೇಂದ್ರ ಶ್ರೀಗಳು, ಶಾಂತಮ್ಮ ಕೋಳೂರ, ದಾನಮ್ಮ ಮಠ, ಇಂದುಮತಿ ಬಬಲೇಶ್ವರ, ನಿಜಗುಣ ಶಿವಯೋಗಿಗಳ ಆನಂದಾಶ್ರಮದ ಅಧ್ಯಕ್ಷ ಎಸ್.ಎಂ. ಬೇನಾಳಮಠ ಉಪಸ್ಥಿತರಿರುವರು.
ಜೂ. 30ರಿಂದ ಜು.7ರ ವರೆಗೆ ಸಪ್ತ ಭಜನೆ ಕಾರ್ಯಕ್ರಮ ನಡೆಯಲಿದೆ. ತಾಳಿಕೋಟೆ ಸೇರಿ ವಿವಿಧ ಗ್ರಾಮಗಳ 150 ಕ್ಕೂ ಅಧಿಕ ಭಜನಾ ಮಂಡಳಿಗಳು ಪಾಲ್ಗೊಳ್ಳುವರು. ಜು.6ರಂದು ಸಂಜೆ 5 ಘಂಟೆಗೆ ಖಾಸ್ಥತೇಶ್ವರ, ಲಿಂ.ವಿರಕ್ತ ಸ್ವಾಮೀಜಿ, ಬಸವೇಶ್ವರ ದೇವಸ್ಥಾನ ದಿಂದ ಪ್ರಮುಖ ಬೀದಿಗಳಲ್ಲಿ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಧ್ವಜದ ಮೆರವಣಿಗೆ, ಜು.7ರಂದು ಬೆಳಗಿನ ಜಾವ 4ಘಂಟೆಗೆ ಮೊಸರು ಗಡಿಗೆ ಒಡೆಯುವುದು, ಮಧ್ಯಾಹ್ನ 12ರಿಂದ ಮಹಾಪ್ರಸಾದ ವಿತರಣೆ, ಜು.8 ರಂದು ಬೆಳಗ್ಗೆ 8ಕ್ಕೆ ಲಿಂಗೈಕ್ಯ ಖಾಸ್ಗತೇಶ್ವರ ಹಾಗೂ ವಿರಕ್ತ ಮಹಾಸ್ವಾಮಿಗಳ ಬೆಳ್ಳಿ ಮೂರ್ತಿಗಳ ಆನೆ ಅಂಬಾರಿ ಹಾಗೂ ಸಿದ್ಧಲಿಂಗ ಸ್ವಾಮಿಗಳನ್ನು ರಥದಲ್ಲಿ ಕೂಡಿಸಿ ಮೆರವಣಿಗೆಯು ರಾಜವಾಡೆಯ ಭೀಮನ ಬಾವಿಯಲ್ಲಿ ಗಂಗಸ್ಥಳಕ್ಕೆ ತೆರಳಿಲಿದೆ. ಅಂದೇ ಸಂಜೆ 5ಘಂಟೆಗೆ ಮಹಾ ರಥೋತ್ಸವ, ನಂತರ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡುವರು. ಜು.10ರಂದು ಸಂಜೆ 5ಕ್ಕೆ ರಥದ ಕಲಶ ಇಳಿಸುವುದರೊಂದಿಗೆ ಜಾತ್ರೆಗೆ ತೆರೆ ಬೀಳುವುದು ಎಂದು ಮುರುಘೇಶ ವಿರಕ್ತಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 