ಕಲಬುರಗಿ, ಮೇ 6ಮಾಜಿ ಪ್ರಧಾನಿ ರಾಜೀವ್ ಗಾಂಧಿ ದೇಶದ ನಂ 1 ಭ್ರಷ್ಟರಾಗಿಯೇ ಜೀವಬಿಟ್ಟರು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾಜರ್ುನ ಖಗರ್ೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗಮಾಡಿದ್ದ ವ್ಯಕ್ತಿಯ ವಿರುದ್ಧ ಇಂತಹ ಅಪಮಾನಕಾರಿ ಹೇಳಿಕೆ ನೀಡಿರುವ ಮೋದಿ ಅವರನ್ನು ದೇಶದ ಜನತೆ ಕ್ಷಮಿಸುವುದಿಲ್ಲ. ಮೇಲಾಗಿ ದೇಶದ ಪ್ರಧಾನ ಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಇಂತಹ ಹೇಳಿಕೆ ಬಂದಿರುವುದು ಅತ್ಯಂತ ಖಂಡನೀಯ ಎಂದರು.
ಸುದ್ಧಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ಬೋಫೋರ್ಸ್ ಪ್ರಕರಣವನ್ನು 30 ವರ್ಷಗಳ ಹಿಂದೆಯೇ ಹೈಕೋರ್ಟ್ ವಜಾಗೊಳಿಸಿದೆ. ಚುನಾವಣಾ ಪ್ರಚಾರದ ವೇಳೆ ಮತದಾರರ ಸೆಳೆಯಲು ಸುಳ್ಳು ಹೇಳುವ ಮೂಲಕ ವಿಷಯವನ್ನು ದೊಡ್ಡದು ಮಾಡಲು ಯತ್ನಿಸುತ್ತಿದ್ದಾರೆ.
ರಾಜೀವ್ ಗಾಂಧಿ ದೇಶದ ಯುವ ಜನರಿಗೆ ಸ್ಪೋರ್ತಿ ನೀಡಿದ ನಾಯಕ, ಅಂತಹ ವ್ಯಕ್ತಿಯ ವಿರುದ್ದ ಅಪಮಾನಕಾರಿ ಹೇಳಿಕೆಯನ್ನು ನಾವು ಸಹಿಸಲು ಸಾಧ್ಯವಿಲ್ಲ. ನರೇಂದ್ರ ಮೋದಿಗೆ ಮಾನವೀಯತೆಯೇ ಇಲ್ಲ, ಅವರಿಗೆ ದೇಶಾಭಿಮಾನವೂ ಇಲ್ಲ, ಇಂತಹ ವ್ಯಕ್ತಿಗಳು ದೇಶದ ಪ್ರಧಾನಿಯಾಗಿರುವುದು ದುರದೃಷ್ಟಕರ ಎಂದು ಖಗರ್ೆ ವಿಷಾಧಿಸಿದ್ದಾರೆ.
ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿ ದ್ದಾರೆ. ಅಂತಹ ವ್ಯಕ್ತಿಯ ವಿರುದ್ಧ ಇಂತಹ ಹೇಳಿಕೆ ನೀಡುವವರಿಗೆ ನಾಚಿಗೆ ಆಗಬೇಕು. ಮೋದಿಯಂತಹ ವ್ಯಕ್ತಿಗೆ ಈ ಚುನಾವಣೆಯಲ್ಲಿ ದೇಶದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭ್ರಷ್ಟಚಾರಿಯಾಗಿದ್ದರು ಎಂದು ಮೋದಿ ಮೊನ್ನೆ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು