ಖನ್ನೂರ ವಿದ್ಯಾನಿಕೇತನ : ವಾಣಿಜ್ಯ ಪಿ. ಯು. ಸಿ. ವಿದ್ಯಾರ್ಥಿಗಳ ಸಾಧನೆ
Khannoor Vidyaniketan : Commercial P. U. C. Student achievement
ಖನ್ನೂರ ವಿದ್ಯಾನಿಕೇತನ : ವಾಣಿಜ್ಯ ಪಿ. ಯು. ಸಿ. ವಿದ್ಯಾರ್ಥಿಗಳ ಸಾಧನೆ
ರಾಣೇಬೆನ್ನೂರು 7: ದಾವಣಗೆರೆ ಬಾಪೂಜಿ ಕಾಮರ್ಸ್ ಕಾಲೇಜಿನಲ್ಲಿ, ವಾಣಿಜ್ಯ ವಿದ್ಯಾರ್ಥಿಗಳಿಗಾಗಿ," ವಾಣಿಜ್ಯೋತ್ಸವ-2024 ಮತ್ತು "ಬಿಸಿನೆಸ್ ಇಂಡಿಯಾ " ಸ್ಪರ್ಧೆಯು ಇತ್ತೀಚೆಗೆ ನಡೆಯಿತು. ಸದರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ, ರಾಣೇಬೆನ್ನೂರು ಖನ್ನೂರು ವಿದ್ಯಾನಿಕೇತನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡು, ಎಂದಿನಂತೆ ಸ್ಪರ್ಧಾತ್ಮಕವಾಗಿ ತಮ್ಮ ಸಾಧನೆ ಮೆರೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸ್ಪರ್ಧೆಯಲ್ಲಿ ಆಕಾಶ ಕೋಪರ್ಡೆ, ಮಹಮ್ಮದ್ ರಾಹಿಲ್, ಮಹಮ್ಮದ್ ಸಲೀಂ ಅವರು ಭಾಗವಹಿಸಿ, ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ, ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ, ಸಂಸ್ಥೆಯ ಚೇರ್ಮನ್ ಡಾ, ಪ್ರವೀಣಕುಮಾರ ಎಂ. ಖನ್ನೂ ರ, ಸಿಇಓ, ಡಾ, ಶೈಲಾ ಶ್ರೀ ಪಿ. ಖನ್ನೂ ರ, ಆಡಳಿತಾಧಿಕಾರಿ ನಾಗೇಶ ಮುರಡಣ್ಣನವರ, ಪ್ರಾಚಾರ್ಯ, ಕೆ. ಸುಬ್ಬಾರಾವ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ,ಶಿಕ್ಷಕರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 