ಶ್ರಮಿಕರಿಗೂ ಧಾಮಿಕ ಸ್ವಾತಂತ್ರ್ಯ ನೀಡಿದ ಕೀರ್ತಿ ಬಸವಣ್ಣವರದು: ಸಿದ್ಧರಾಮ ಶ್ರೀಗಳು
ಲೋಕದರ್ಶನವರದಿ
ಹಾವೇರಿ:- 12 ನೇ ಶತಮಾನದ ಸಮಾಜೋಧಾಮರ್ಿಕ ಚಳುವಳಿಯನ್ನು 20 ನೇ ಶತಮಾನದಲ್ಲಿ ಮುಂದುವರೆಸಿ, ಸಮಾಜದಲ್ಲಿ ಸಂಘಟನೆ ಮೂಲಕ ಶ್ರಮಿಕರಿಗೂ ಧಾಮರ್ಿಕ ಸ್ವಾತಂತ್ರ್ಯವನ್ನು ನೀಡಿದ ಕೀತರ್ಿ ದ್ವಿತೀಯ ಬಸವಣ್ಣ ಎಂದು ಖ್ಯಾತರಾದ ಗದುಗಿನ ತೋಂಟದಾರ್ಯಮಠದ ಲಿಂ. ಡಾ|| ಸಿದ್ಧಲಿಂಗ ಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಗದುಗಿನ ತೋಂಟದಾರ್ಯಮಠ ಜಗದ್ಗುರು ಡಾ|| ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ನಗರದ ಸಿಂದಗಿಮಠದಲ್ಲಿ ನಡೆಯುತ್ತಿರುವ ಲಿಂ. ಶಾಂತವೀರ ಪಟ್ಟಾಧ್ಯಕ್ಷರ 39 ನೇ ಪುಣ್ಯ ಸ್ಮರಣೊತ್ಸವದ 6 ನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವ್ಯಕ್ತಿಯಲ್ಲಿನ ಪ್ರತಿಭೆಯನ್ನು ಗುರುತಿಸುವ ಶಕ್ತಿ ಲಿಂ.ಹಾನಗಲ್ಲ ಕುಮಾರ ಸ್ವಾಮಿಗಳಲ್ಲಿ ಮತ್ತು ಲಿಂ. ಶಾಂತವೀರ ಪಟ್ಟಾಧ್ಯಕ್ಷರಲ್ಲಿ ಇತ್ತು. ಸಮಾಜ ಪ್ರೇಮಿಯಾಗಿದ್ದ ಇರ್ವರು ಧಾಮರ್ಿಕ ಶಿಕ್ಷಣವನ್ನು ಬಡ ಜನರಿಗೂ ಮುಟ್ಟಿಸಿ ಶುಭ್ರ ಆಕಾಶದಲ್ಲಿ ಮಿನುಗುವ ನಕ್ಷತ್ರವಾಗಿದ್ದಾರೆ ಎಂದು ಹೇಳಿದರು.
ಬೆಳಗಾವಿಯ ಮಹಾಂತ ದೇವರು ಶೇಗುಣಸಿ ಮಹಾತ್ಮರ ಬದುಕು ಬೆಳಕು ಕುರಿತು ಮಾತನಾಡಿ, ಲಿಂ. ಶಾಂತವೀರ ಪಟ್ಟಾಧ್ಯಕ್ಷರು ವಿಶ್ವ ಕುಟುಂಬಿಯಾಗಿದ್ದು, ನಂಬಿದ ಭಕ್ತರ ಅಭ್ಯುದಯವನ್ನು ತಮ್ಮ ಜೀವನದ ಮಹೋನ್ನತ ಗುರಿಯಾಗಿಸಿದ್ದರು ಎಂದು ಹೇಳಿದರು.
ಈ ಜಗತ್ತಿನಲ್ಲಿ ಬಾಲ್ಯದಲ್ಲಿ ಹಣ್ಣು ಕೊಡುವವರಿದ್ದಾರೆ. ಯವ್ವನದಲ್ಲಿ ಹೆಣ್ಣು ಕೊಡುವವರಿದ್ದಾರೆ. ಸತ್ತಾಗ ಮಣ್ಣು ಕೊಡುತ್ತಾರೆ. ಆದರೆ ಆಧ್ಯಾತ್ಮಿಕವಾಗಿ ಕಣ್ಣು ಕೊಡುವವರು ಕೆಲವೇ ಜನ. ಅಂತವರಲ್ಲಿ ಸಿಂದಗಿ ಪಟ್ಟಾಧ್ಯಕ್ಷರು ಅಗ್ರಗಣ್ಯರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ಪಡೆದ ಮೂಡೂರಿನ ಉಳಿವೆಪ್ಪ ತಿಪ್ಪಗೊಂಡ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಬೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಹೋತನಹಳ್ಳಿಯ ಶಂಭುಲಿಂಗ ಸಾಮೀಜಿ, ಯಶವಂತನಗರದ ಗಂಗಾಧರ ದೇವರು, ಗುರುನಾಥ ಸುತಾರ, ಹನಮಂತಪ್ಪ ಕಾಮನಹಳ್ಳಿ, ಎಂ.ಎಸ್ ಹಿರೇಮಠ, ಶಿವಯೋಗಿ ಸ್ವಾಮಿ, ಚನ್ನಬಸಯ್ಯ ಹಿರೇಮಠ, ಅಂಕಲಗಿ ಶಾಸ್ತ್ರಿಜಿ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ತಳ್ಳಳ್ಳಿಯ ಆಕಾಶವಾಣಿ ಕಲಾವಿದ ಮೃತ್ಯುಂಜಯ ಹಿರೇಮಠ ಪ್ರಾಥರ್ಿಸಿದರು. ಶಿಕ್ಷಕ ಜಿ.ಎಸ್ ಭಟ್ ಸ್ವಾಗತಿಸಿದರು. ಶ್ರೀಮಠದ ವ್ಯವಸ್ಥಾಪಕ ಶಿವಬಸಯ್ಯ ಆರಾಧ್ಯಮಠ ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 