ಕೊಪ್ಪಳ 27: ವಿಜಯನಗರ ಸಾಮ್ರಾಜ್ಯದ ಹಂಪಿಯ ವೈಭವದಂತೆ ಇಂದು ಬೃಹತ್ ಬೆಂಗಳೂರು ನಿರ್ಮಾಣಕೆ ಕೆಂಪೇಗೌಡರು ಮುಂದಾದರು ಎಂದು ಕೊಪ್ಪಳ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ವತಿಯಿಂದ ನಾಡಪ್ರಭು ಕೆಂಪೇಗೌಡ ಜಂಯಂತಿ ಆಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕ್ರಿ.ಶ ಸುಮಾರು 1510 ರಲ್ಲಿ ಕೆಂಪೆನಂಜೇಗೌಡ ಹಾಗೂ ಲಿಂಗಮಾಂಬೆ ಎಂಬ ದಂಪತಿಗಳಿಗೆ ಕೆಂಪೇಗೌಡ ಜನಿಸಿದರು. ನಾಡು ಅಂದರೆ ಪ್ರಾಂತ್ಯ, ಪ್ರಭು ಅಂತರೆ ರಾಜ. ಪ್ರಾಂತ್ಯದ ರಾಜರಾಗಿದ್ದರಿಂದ ಕೆಂಪೇಗೌಡರಿಗೆ ನಾಡಪ್ರಭು ಎಂದು ಕರೆಯಲಾಗುತ್ತದೆ ದಕ್ಷಿಣ ಭಾರತದ ಸುಪ್ರಸಿದ್ದ ವಿಜಯನಗರ ಸಾಮಾಜ್ಯದ ಮಹಾನವಮಿ ಹಬ್ಬದಲ್ಲಿ ತಂದೆಯೊಂದಿಗೆ ಭಾಗವಹಿಸಿ, ನಾಡಪ್ರಭು ಕೆಂಪೇಗೌಡ ರವರು ಅಂದಿನ ವಿಜಯನಗರ ಸಾಮ್ರಾಜ್ಯದ ರಾಜರ ಮಾರ್ಗದರ್ಶನದಂತೆ ಇಂದು ಬೃಹತ್ ಬೆಂಗಳೂರು ಮಹಾನಗರ ವಾಗಲು ಸಾಧ್ಯವಾಯಿತು. ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ಬೆಂಗಳೂರನ್ನು ಅಭಿವೃದ್ಧಿ ಮಾಡುವ ದೂರದೃಷ್ಠಿಯನ್ನು ಇಟ್ಟುಕೊಂಡು ಬೆಂಗಳೂರಿನಲ್ಲಿ ಕೋಟೆ ನಿಮರ್ಿಸಿದರು ಪೂರ್ವಕ್ಕೆ ಹಲಸೂರು ಬಾಗಿಲು, ಪಶ್ಚಿಮಕ್ಕೆ ಅರಳೇ ಪೇಟೆ, ಉತ್ತರಕ್ಕೆ ಯಲಹಂಕ ಮತ್ತು ದಕ್ಷಿಣಕ್ಕೆ ಆನೆಕಲ್ ಮಹಾದ್ವಾರಕಗಳ ನಿಮರ್ಾಣ ಮಾಡಿದ್ದರು. ಕೆಂಪೇಗೌಡರು ಒಬ್ಬ ಜಾತ್ಯಾತೀತ ಅರಸರಾಗಿದ್ದು, ಅಂದಿನ ಸಮಾಜದ ಎಲ್ಲ ಸಮೂದಾಯಗಳ ಜನರಿಗೆ ಆಥರ್ಿಕ ನ್ಯಾಯವನ್ನು ಒದಗಿಸಿ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ. ರಾಜ್ಯದ ಜನತೆಗೆ ಉದ್ಯೋಗಗಕ್ಕೆ ಅನುಕೂಲವಾಗುವಂತೆ ಹಲವಾರು ಕೈಗಾರಿಕಾ ಉದ್ಯಮಗಳನ್ನು ನಿರ್ಮಿಸಲು ಮುಂದಾಗುತ್ತಾರೆ. ಅಂದು ನಿಮರ್ಾಣ ಮಾಡಿದ ಬೆಂಗಳೂರು ಕನರ್ಾಟಕದ ಹೃದಯಭಾಗವಾಗಿ ದೇಶದಲ್ಲಿ ಕರ್ನಾಟಕದ ಹೆಸರು ಚಿರಪರಿಚಿತವಾಯಿತು ಎಂದು ಕೊಪ್ಪಳ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಯಿಸಿದ ಕೊಪ್ಪಳ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ ರವರು ಮಾತನಾಡಿ ಕೆಂಪೇಗೌಡ ನಿರ್ಮಾಣ ಮಾಡಿದ ಬೆಂಗಳೂರು ಎನ್ನುವುದು ಬೆಂಗಳೂರಿನಲ್ಲಿ ಇಂದು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ತನ್ನದೆ ಅಭಿವೃದ್ದಿ ಹೊಂದುತ್ತಾ ಹಲವಾರು ಜಿಲ್ಲೆಗಳಿಗೆ ಮಾರ್ಗದರ್ಶನ ನೀಡುತ್ತಾ ಬೃಹತ್ ಬೆಂಗಳೂರು ಮಹಾನಗರವಾಗಿರುವುದಕ್ಕೆ ನಾಡಪ್ರಭು ಕೆಂಪೇಗೌಡರ ಕಾರ್ಯ ಅಪಾರ ಎಂದು ಹೇಳಿದರು.
ಸಮಾರಂಭದ ಉದ್ಘಾಟನೆಯನ್ನು ವೇದಿಕೆ ಮೇಲಿರುವ ಎಲ್ಲಾ ಗಣ್ಯರು ನೆರವೇರಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಷೃತರಾದ ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲ್, ಸಾಹಿತಿ ಮಹಾಂತೇಶ್ ಮಲ್ಲನಗೌಡರ, ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಸಹಾಯಕ ನಿದರ್ೇಶಕ ಆರ್.ಜಿ. ನಾಡಿಗೇರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಮಾದೇವಿ ಸೊನ್ನದ್, ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ದೇಶ್ವರ ಯಂಕಣ್ಣನವರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ ಸೇರಿದಂತೆ ಅನೇಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.