ನವದೆಹಲಿ, ಏ 10 ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಏಕೆ ಹೇಳುತ್ತಿದ್ದಾರೆ ಅವರಿಬ್ಬರ ಒಳ ಒಪ್ಪಂದ ವೇನು ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒತ್ತಾಯ ಮಾಡಿದ್ದಾರೆ.
ಮೋದಿ ಮರಳಿ ಬಂದರೆ ಮಾತ್ರ ಪಾಕ್- ಭಾರತ ಸಂಬಂಧ ಸುಧಾರಣೆಯಾಗಿ ಅನೇಕ ಸಮಸ್ಯೆಗಳು ಬಗೆಹರಿಯಲಿವೆ, ಇಲ್ಲವಾದರೆ ಇಲ್ಲ ಎಂಬ ತೀರ್ಮಾನಕ್ಕೆ ಹೇಗೆ ಬಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆಗಿಂತ ಮುಂಚೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಶ್ಮೀರ ವಿವಾದವನ್ನು ಬಗೆಹರಿಸಲು ಮತ್ತು ಎರಡೂ ದೇಶಗಳ ಉತ್ತಮ ಸಂಬಂಧ ಹೊಂದಲು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ಖಾನ್ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ನೀಡಿದ್ದಾರೆ.
ಮೋದಿ ಗೆಲ್ಲಬೇಕೆಂದು ಪಾಕಿಸ್ತಾನ ಏಕೆ ಬಯಸುತ್ತದೆ? ಪಾಕಿಸ್ತಾನದೊಂದಿಗೆ ಅವರ ಸಂಬಂಧ ಎಷ್ಟು ಆಳವಾಗಿದೆ ಎಂದು ದೇಶದ ಜನರಿಗೆ ತಿಳಿಸಿ ಹೇಳಬೇಕು? ಮೋದಿಯವರು ಗೆಲುವು ಸಾಧಿಸಿದರೆ, ಪಾಕಿಸ್ತಾನದಲ್ಲಿ ಪಟಾಕಿ ಸಿಡಿಯಲಿವೆ ಎಂಬುದು ಎಲ್ಲ ಭಾರತೀಯಗೂ ತಿಳಿದಿದೆ ಎಂದು ಅವರು ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ರಾಜ್ಯಸಭಾ ಸಂಸದ ಮತ್ತು ಹಿರಿಯ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್, ಟ್ವೀಟ್ ನಲ್ಲಿ ಪಾಕಿಸ್ತಾನ ತನ್ನ ಸಹೋದರ ಮೋದಿ ಗೆಲ್ಲಲು ಏಕೆ ಬಯಸುತ್ತಿದೆ? ಮೋದಿ ಅವರ ಗೆಲುವು ಒಳ್ಳೆಯದು ಎಂದು ಇಮ್ರಾನ್ ಖಾನ್ ಭಾವಿಸಿದರೆ, ಮೋದಿ ಮತ್ತು ಬಿಜೆಪಿಯಿಂದ ಪಾಕಿಸ್ತಾನಕ್ಕೆ ಏನೋ ಲಾಭವಾಗಲಿದೆ, ಅನುಕೂಲವಾಗಲಿದೆ ಎಂಬುದು ಸ್ಪಷ್ಟವಾಗಲಿದೆ ಪಾಕಿಸ್ತಾನದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಎಂಬ ಘೋಷಣೆ ಮೊಳಗಿಸಲಾಗಿದೆ ಮೋದಿ ಅವರು ಪಾಕಿಸ್ತಾನದ ರಾಷ್ಟ್ರೀಯ ದಿನದಂದು ಇಮ್ರಾನ್ ಖಾನ್ ಅವರನ್ನು ಅಭಿನಂದಿಸಿದ್ದಾರೆ, ಹೀಗಾಗಿ ಅವರು ಪಾಕಿಸ್ತಾನದೊಂದಿಗೆ ರಹಸ್ಯ ಒಪ್ಪಂದವನ್ನು ಮಾಡಿಕೊಂಡಿರಬೇಕು ಎಂಬುದನ್ನು ಅವರು ಬಿಡಿಸಿ ಹೇಳಬೇಕು? ಇಲ್ಲವಾದರೆ ಮೋದಿ ಪ್ರಧಾನಿಯಾಗಬೇಕು ಎಂದು ಇಮ್ರಾನ್ ಯಾಕೆ ಬಯಸುತ್ತಾರೆ ಎಂದು ಸಿಂಗ್ ಪ್ರಶ್ನಿಸಿದ್ದಾರೆ.