ಕಾಯಕಯೋಗಿ ಬಸವಲಿಂಗೇಶ್ವರ ಶ್ರೀಗಳ 23 ವರ್ಷದ ಪೀಠಾರೋಹಣದ ವಾರ್ಷಿಕೋತ್ಸವ ಕಾರ್ಯಕ್ರಮ

Kayakayogi Basavalingeshwar Sri's 23rd year enthronement anniversary event

ಕಾಯಕಯೋಗಿ ಬಸವಲಿಂಗೇಶ್ವರ ಶ್ರೀಗಳ 23 ವರ್ಷದ ಪೀಠಾರೋಹಣದ ವಾರ್ಷಿಕೋತ್ಸವ  ಕಾರ್ಯಕ್ರಮ

 ಯಲಬುರ್ಗಾ 08: ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಶ್ರೀ ಷ ಬ್ರ ಬಸಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿಯವರ 23ನೇ ವರ್ಷದ ಪಟ್ಟಾಧಿಕಾರ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಈ ಕಾರ್ಯಕ್ರಮ ಎಲ್ಲಾ ಭಕ್ತರು ಕೈಜೋಡಿಸಬೇಕು ಎಂದು ಶ್ರೀ ಗುರುಶಾಂತವೀರ ಸ್ವಾಮೀಜಿಗಳು ಭೂಕೈಲಾಸಮಠ ಮೇಲಗದ್ದುಗೆ ಚಿಕ್ಕಮ್ಯಾಗೇರಿಯ-ಇಟಗಿ ಹೇಳಿದರು. ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಸೋಮವಾರ ದಂದು ಹಮ್ಮಿಕೊಂಡಿದ್ದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಇದೇ ಜನವರಿ 30 ರಿಂದ ಫೆಬ್ರವರಿ 7ರ ವರೆಗೂ ಸುಮಾರು 9ದಿನಗಳ ಕಾಲ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಗಳಿಗೆ ತುಲಾಭಾರ ಸೇವೆ, ವಿವಿಧ ಮಠಾಧೀಶರಿಂದ ಆಶೀರ್ವಚನ, ಸನ್ಮಾನ ಕಾರ್ಯಕ್ರಮ, ಸಾಮೂಹಿಕ ವಿವಾಹ, ಅಡ್ಡಪಲ್ಲಕ್ಕಿ ಮೆರವಣಿಗೆ ಹಾಗೂ ಪ್ರಸಾದ ಸೇವೆ ಸೇರಿದಂತೆ ನಾನಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಇದಕ್ಕೆ ಎಲ್ಲರೂ ಪ್ರೀತಿಯಿಂದ ಕೈಜೋಡಿಸಬೇಕು ಜತೆಗೆ ಸಮಾರಂಭ ಯಶಸ್ವಿಗೆ ಸಹಕರಿಸಬೇಕೆಂದರು. ಈ ವೇಳೆಯಲ್ಲಿ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ, ಪ.ಪಂ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸದಸ್ಯರಾದ ಬಸಲಿಂಗಪ್ಪ ಕೊತ್ತಲ್, ಕಳಕಪ್ಪ ತಳವಾರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಮೂರ್ತಿ ಇಟಗಿ, ಮುಖಂಡ ವೀರಣ್ಣ ಹುಬ್ಬಳ್ಳಿ ಭಕ್ತರಾದ ಈಶಪ್ಪ ಸ್ಟಾಂಪಿನ್, ಅಡವಯ್ಯ ಕಲ್ಯಾಣ ಮಠ, ಹೇಮಣ್ಣ ಖಾನಾವಳಿ, ಶರಣಪ್ಪ ಬನ್ನಿಕೊಪ್ಪ, ಕಳಕಯ್ಯ, ಮಹೇಶ ಹುಬ್ಬಳ್ಳಿ, ಬಸವರಾಜ ಕೊಳ್ಳಿ, ಉಮೇಶ ಕುಂಬಾರ,  ಶರಣಪ್ಪ ದಿವಟರ್ ಸೇರಿ ಮಠದ ಅಪಾರ ಭಕ್ತರು ಇದ್ದರು.