ಕಾಯಕ ಶರಣರ ಚಿಂತನೆಗಳು ಸರ್ವ ಜನಾಂಗಕ್ಕೆ ಮಾದರಿ: ಬಿರಾದಾರ

Kayaka Sarana's thoughts are a model for all races: Biradara

ಕಾಯಕ ಶರಣರ ಚಿಂತನೆಗಳು ಸರ್ವ ಜನಾಂಗಕ್ಕೆ ಮಾದರಿ: ಬಿರಾದಾರ

ದೇವರಹಿಪ್ಪರಗಿ, 10; ಪಂಚಕರ್ಮರು ಎಂದು ಹೆಸರಾದ ಐವರು ಕಾಯಕ ಶರಣರ ಚಿಂತನೆಗಳು,ಜೀವನಶೈಲಿ ಹಾಗೂ ಅವರು ಸಾಗಿಬಂದ ದಾರಿ ಇಂದಿನ ಸರ್ವ ಜನಾಂಗಕ್ಕೆ ಮಾದರಿಯಾಗಿವೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಹೇಳಿದರು.  

    ಪಟ್ಟಣದ ತಹಶಿಲ್ದಾರರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾಯಕ ಶರಣರ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಹನ್ನೆರಡನೆಯ ಶತಮಾನದಲ್ಲಿ ತನ್ನ ನಿಷ್ಕಲ್ಮಶ ಭಕ್ತಿಯಿಂದ ಶಿವನಿಗೆ ಅಂಬಲಿ ಕುಡಿಸುತ್ತಿದ್ದ ಮಾದಾರ ಚನ್ನಯ್ಯ, ಚರ್ಮದ ಕಾಯಕ ಮಾಡುತ್ತಲೇ ಸಂಸ್ಕೃತದಲ್ಲಿ ವಚನಗಳನ್ನು ರಚಿಸಿದ, ಮಾದಾರ ಧೂಳಯ್ಯ, ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದು, ಲಿಂಗದೀಕ್ಷೆ ಪಡೆದು ಕಲ್ಯಾಣ ಕ್ರಾಂತಿಯಲ್ಲಿ ಶರಣರನ್ನು ರಕ್ಷಿಸಿದ. ಡೋಹರ ಕಕ್ಕಯ್ಯ, ತಮ್ಮ ತೊಡೆಗಳಿಂದ ಚಮ್ಮಾವುಗೆಗಳನ್ನು(ಪಾದರಕ್ಷೆ) ಮಾಡಿದ. ಸಮಗಾರ ಹರಳಯ್ಯ, ನಿರಂತರ ಪ್ರಯತ್ನದಿಂದ ಲಿಂಗದೀಕ್ಷೆ ಪಡೆದು ಜನರ ನೀರಿನ ದಾಹವನ್ನು ನೀಗಿಸಿದ ಉರಿಲಿಂಗಪೆದ್ದಿ ಅವರ  ಆದರ್ಶಗಳು ನಿಜಕ್ಕೂ ಪ್ರೇರಣಾದಾಯಕ ಎಲ್ಲಾ ಶರಣರು ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರವಾಗಿವೆ ಎಂದು ಐವರು ಶಿವಶರಣರ ವಚನ ಸಾಹಿತ್ಯ ಹಾಗೂ ಕಾಯಕದ ಬಗ್ಗೆ ಹೇಳಿದರು. 

     ತಹಶಿಲ್ದಾರ ಪ್ರಕಾಶ ಸಿಂದಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರರಾದ ಸುರೇಶ ಮ್ಯಾಗೇರಿ, ಉಪತಹಶೀಲ್ದಾರ ಗಿರಿಜಾದೇವಿ ಸಜ್ಜನ, ಶಿವಶಂಕರ ಜಾಧವ,ಪಟ್ಟಣ ಪಂಚಾಯತಿಯ ನಾಮನಿರ್ದೇಶಿತ ಸದಸ್ಯರಾದ ಸುನೀಲ ಕನಮಡಿ, ಹುಸೇನ ಕೊಕಟನೂರ,ಮುಖಂಡರಾದ ರಾಘವೇಂದ್ರ ಗುಡಿಮನಿ, ಅಹ್ಮದ ಮುಲ್ಲಾ, ಕಚೇರಿಯ ಸಿಬ್ಬಂದಿವರ್ಗದವರಾದ  ಅಮೋಘಸಿದ್ದ ದಳವಾಯಿ, ಕುಮಾರ ಅವರಾದಿ, ಕಿಶೋರ ರಾಠೋಡ, ಆಕಾಶ ಮೇತ್ರಿ, ಚನಬಸು ಹೊಸಮನಿ, ಅಬ್ದುಲ್ ಕಲಾಂ ಮೋಮಿನ, ಸುರೇಶ ಶಿರಶ್ಯಾಡ, ಸಿದ್ದು, ಪ್ರವೀಣ ಹೂಗಾರ, ವಿನೋದ ರೆಡ್ಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು