ಕಾಯಕ,ದಾಸೋಹ: ಬಸವಪ್ರಜ್ಞೆಯ ತಳಹದಿ
Kayaka, Dasoha: The basis of Basavaprachnya
ಕಾಯಕ,ದಾಸೋಹ: ಬಸವಪ್ರಜ್ಞೆಯ ತಳಹದಿ
ಹೂವಿನ ಹಡಗಲಿ 17: ಸತ್ಯ ಶುದ್ಧ ಕಾಯಕ ಮಾಡುವುದು ಕಾಯಕದಿಂದ ಗಳಿಸಿದ ಸಂಪತ್ತನ್ನು ದಾಸೋಹದ ಮೂಲಕ ಸಮಾಜಕ್ಕೆ ವಿನಿಯೋಗಿಸುವುದು ಬಸವ ಪ್ರಜ್ಞೆಯ ತಳಹದಿಯಾಗಿದೆ ಎಂದು ಶಿಕ್ಷಕ,ಸಾಹಿತಿ ರಾಮಪ್ಪ ಕೋಟಿಹಾಳ್ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹೊಳಗುಂದಿಯ ಗ್ಲೋಬಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ಕಾಲೇಜಿನಲ್ಲಿ ಆಯೋಜಿಸಿದ್ದ ಗುಡೆಕೋಟೆ ಕರಿಬಸಪ್ಪ, ಚಂದ್ರಮ್ಮ ಸ್ಮರಣಾರ್ಥ ದತ್ತಿ ಐಗೋಳ ಬಸವರಾಜಪ್ಪ ಸ್ಮರಣಾರ್ಥ ದತ್ತಿ, ತುರುಕಾಣಿ ಶಿವಪುತ್ರ್ಪ ಸ್ಮಾರಕದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಕಾಯಕ ಮತ್ತು ದಾಸೋಹ’, ಹಾಗೂ’ಅವಿಭಕ್ತ ಕುಟುಂಬಗಳು’ ಕುರಿತು ಮಾತನಾಡಿದರು. ದತ್ತಿದಾನಿಗಳಾದ ಗುಡೆಕೋಟೆ ಬಸವರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಲ್ಲಿ ಸಂಸ್ಕಾರ ಬೆಳಸುವಲ್ಲಿ, ಒಂಟಿತನ, ಅಭದ್ರತೆ ನೀಗಿಸುವಲ್ಲಿ ಅವಿಭಕ್ತ ಕುಟುಂಬಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಆಡಳಿತಾಧಿಕಾರಿ ಡಿ.ಕರೀಂಸಾಬ್, ಕಾಲೇಜಿನ ಪ್ರಾಚಾರ್ಯ ಜಿ.ಸೋಮನಗೌಡ,ಪಬ್ಲಿಕ್ ಸ್ಕೂಲ್ ಪ್ರಾಚಾರ್ಯರಾದ ಹೆಚ್.ಕಿನ್ನರೇಶ್ವರಿ, ದತ್ತಿದಾನಿಗಳಾದ ಐಗೋಳ ಸುಭಾಷ್ ಇದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕ ಬಸವರಾಜಪ್ಪ ಸ್ವಾಗತಿಸಿದರು. ಶಿಕ್ಷಕ ಅಜಯ್ ಕವನ ವಾಚಿಸಿದರು. ವಿ.ಭೀಮಾನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿರು.ಕಸಾಪ ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ.ವಿನಯ್ ರಾಜ್ ಅಧ್ಯಕ್ಷತೆ ವಹಿಸಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 