ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮಕ್ಕೆ ಕವಲೂರು ಒತ್ತಾಯ

ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮಕ್ಕೆ ಕವಲೂರು ಒತ್ತಾಯ Kavalur demands legal action against those who attacked

ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮಕ್ಕೆ ಕವಲೂರು ಒತ್ತಾಯ

ಕೊಪ್ಪಳ 01 : ಸುಮಾರು ವರ್ಷಗಳಿಂದ ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಂಚಾಲಕನಾಗಿದ್ದು, ಕೊಪ್ಪಳ ನಗರ ಹಾಗೂ ಜಿಲ್ಲೆಯಲ್ಲಿ ಹಲವಾರು ಜನ-ಪರ ಹೋರಾಟ ಕೈಗೊಳ್ಳುತ್ತಾ ಸಮಾಜ ಸೇವೆ ಮಾಡುತ್ತಾ ಸಾರ್ವಜನಿಕರ ಜೀವನದಲ್ಲಿ ಹೆಜ್ಜೆ ಹಾಕುತ್ತಾ ಇದ್ದೆನೆ ನಾಡು, ನುಡಿ, ನೆಲ-ಜಲ, ಬಾಷೆ, ಹಾಗೂ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳಲು ತನ್ನದೇ ವ್ಯಾಪ್ತಿಯಲ್ಲಿ ಹೋರಾಟ ನಡೆಸುತ್ತಾ ಬಂದಿರುತ್ತೇನೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯ ಸಂಚಾಲಕ ಕೊಪ್ಪಳದ ಹೋರಾಟಗಾರ ವಿಜಯಕುಮಾರ್ ಕವಲೂರು ಸ್ಪಷ್ಟಪಡಿಸಿದ್ದಾರೆ, ಈ ಕುರಿತು ಗೋಸ್ಟಿ ಮೂಲಕ ಹೇಳಿಕೆ ನೀಡಿದ ಅವರು2025 ರ28ರಂದು ನಾನು ಮತ್ತು ನನ್ನ ತಾಯಿ ಕೊಪ್ಪಳದ ಗವಿಮಠದ ಹಿಂದಿರುವ ರುದ್ರಭೂಮಿಯಲ್ಲಿ ಸಂಬಂಧಿಕರ ಅಂತ್ಯ ಸಂಸ್ಕಾರಕ್ಕೆ ತೆರಳಿದ್ದಾಗ ಶಿವಕುಮಾರ ಮತ್ತು ಸಹಚರರು ಸಮಾನ ಉದ್ದೇಶದಿಂದ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದವರೆ ಏಕಾಏಕಿ ನಮ್ಮ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನಸಿದ್ದರಿಂದ  ಈ ಬಗ್ಗೆ ನಮಗೆ ಸೂಕ್ತ ರಕ್ಷಣೆ ನೀಡಿ  ನ್ಯಾಯ ಒದಗಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಮಾಡುವಂತೆ ಕೊಪ್ಪಳ ನಗರ ಠಾಣೆ ಗುನ್ನೆ ಸಂಖ್ಯೆ 71/2025  2025 ರ ಜೂನ್ 30ರಂದು ನನ್ನ ತಾಯಿ ಫಿರ್ಯಾದಿ ನೀಡಿರುತ್ತಾರೆ.ಇಲ್ಲಿಯವರೆಗೆ ನಾನು ನೀಡಿದ ದೂರಿನಲ್ಲಿ 01 ತಿಂಗಳು ಆದರೂ ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇರುವುದಿಲ್ಲ ಮೊನ್ನೆ ಬುಧುವಾರ ಜುಲೈ 23 ರ ದಿನದಂದು ಮದ್ಯಾಹ್ನದ ಸಮಯದಲ್ಲಿ ಈ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ ಗೆ ಸಿಪಿಐ ರವರು ಠಾಣೆಗೆ ಕರೆಸಿಕೊಂಡು ಬಂಧಿಸದೆ ಸುಮಾರು 4-5 ತಾಸು ಠಾಣೆಯಲ್ಲಿ ಕೂರಿಸಿಕೊಂಡು ಯಾರೋ ಮೂರನೇ ವ್ಯಕ್ತಿಯ ಮಾತು ಕೇಳಿ ಅವರ ಪ್ರಭಾವಕ್ಕೆ ಒಳಗಾಗಿ ಯಾವುದೋ ಆಮಿಷಕ್ಕೆ ಬಲಿಯಾಗಿ ಆರೋಪಿಗೆ ಯಾವುದೇ ವಿಚಾರಣೆ ಮಾಡದೇ ಕ್ರಮಕೈಗೊಳ್ಳದೆ  ರಾಜಾ ರೋಷವಾಗಿ ಬಿಟ್ಟು ಕಳುಹಿಸಿರುವುದು ನನಗೆ ಬಲ್ಲ ಮೂಲಗಳಿಂದ ತಿಳಿದು ಬಂದಿರುತ್ತದೆ. ಎಂದು ಅವರು ಆರೋಪ ಮಾಡಿದ್ದಾರೆ, ಈಗ ನಾನು ಮತ್ತು ನನ್ನ ಕುಟುಂಬ ಅಸಹಾಯಕರಾಗಿ ಸೂಕ್ತ ರಕ್ಷಣೆ ಇಲ್ಲದೇ ಜೀವದ ಭಯದಲ್ಲಿ ಇರುವಂತಾಗಿದೆ. ಶಿವಕುಮಾರ  ನನ್ನ ಮೇಲೆ ಪ್ರತಿ ದೂರನ್ನು ದಾಖಲಿಸಿದನ್ನು ಪ್ರಶ್ನಿಸಿ ಹೈಕೊರ್ಟ ಧಾರವಾಡ ಪೀಠದಲ್ಲಿ  ಮೇಲ್ಮನವಿಯನ್ನು ಸಲ್ಲಿಸಿದಾಗ ಅಲ್ಲಿ ನಮಗೆ ಈ ಪ್ರತಿ ದೂರಿಗೆ ತಡೆಯಾಜ್ಞೆ ಸಿಕ್ಕಿರುತ್ತದೆ. ಪ್ರಕರಣದ ಬಗ್ಗೆ  ಹೈಕೊಟ್ ಧಾರವಾಡ ಪೀಠವು ಶಿವಕುಮಾರ ಸುಳ್ಳು ದೂರುಗಳನ್ನು ನೀಡುವ ವಾಚಾಳಿ ಸ್ವಭಾವದವನಾಗಿರರೂವೆ ಎಂದು ಆದೇಶ ಮಾಡಿದರು. ಹಾಗೂ 2017ರಲ್ಲಿ ಕೂಡಾ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದು ಆ ದೂರಿನ್ವಯ  ಹೈಕೊರ್ಟನಲ್ಲಿ ಪ್ರಕರಣ ರದ್ಧಾಗಿರುತ್ತದೆ.  ಈ ಮೊದಲು ಶಿವಕುಮಾರ ಕುಕನೂರು ಇತರರ ಮೇಲೆ ಕೊಪ್ಪಳ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ ಗುನ್ನೆ ನಂ:178/2012, ಗುನ್ನೆ ನಂ:15/2020, ಗುನ್ನೆ ನಂ:147/2024, ಗುನ್ನೆ ನಂ:71/2025 ಈ ಎಲ್ಲಾ ಪ್ರಕರಣಗಳನ್ನು ಸಿಪಿಐ ರವರು ಪರೀಶೀಲಸದೆ ಶಿವಕುಮಾರ ಹಾಗೂ ಇತರರು ನನಗೆ ಕೊಲೆ ಮಾಡಲು ಯತ್ನಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಆರೋಪಿಯು ನ್ಯಾಯಾಲಯದಿಂದ ಜಾಮೀನು ಪಡೆಯಲು ಸಹಕರಿಸುತ್ತಿದ್ದು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿಸಿರುತ್ತಾರೆ.ಶಿವಕುಮಾರ  ಸುಳ್ಳು ಕೇಸಗಳನ್ನು ದಾಖಲೆ ಮಾಡಿ ಅದನ್ನೆ ನೆಪವಾಗಿಟ್ಟುಗೊಂಡು ಪತ್ರಿಕೆಯಲ್ಲಿ ಬಂದಂತಹ ಹೇಳಿಕೆಗಳನ್ನು ಪ್ರತಿ ವರ್ಷವು ಸಾಮಾಜಿಕ ಜಾಲತಾಣದಲ್ಲಿ ಹಾಕಿ ನನ್ನ ತೇಜೋವದೆ ಮಾಡಿ ನನ್ನ ಗೌರವಕ್ಕೆ ಅಪಮಾನ ಮಾಡುವ ಸ್ವಭಾವದ ಬಗ್ಗೆ ತಮಗೆ ದಾಖಲೆ ಸಮೇತ ನೀಡುತೇನೆ. ನಾನು ನನ್ನ ತೇಜೊವದೆಗೆ ಸಂಬಂಧಿಸಿದಂತೆ ಸೈಬರ್ ಪೋಲಿಸ್ ಠಾಣೆಗೆ ದೂರು ನೀಡುತ್ತೇನೆ ಹಾಗೂ ಮಾನನಷ್ಟ ಮೊಕ್ಕದಮೆಯನ್ನು ದಾಖಲು ಮಾಡುತ್ತೇನೆ ಮತ್ತು ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಕ್ಕಾಗಿ ಅದಕೊಂದನ್ನು ದೂರು ನೀಡುತ್ತೇನೆ.  ಪೋಲಿಸ್ ವರಿಷ್ಠಾಧಿಕಾರಿಗಳು ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ನಿರ್ದೇಶನ ನೀಡಿ ಅನ್ಯಾಯಕ್ಕೆ ಒಳಗಾಗಿರುವ ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುತ್ತೀರಿ ಹಾಗೂ ನನಗೆ ಮತ್ತು ನನ್ನ ಕುಟುಂಬಕ್ಕೆ ತೋಂದರೆಯಾದರೆ ಶಿವಕುಮಾರ ಇವರ ಕುಟುಂಬ ಹಾಗೂ  ಸಹಚರರು ಹೊಣೆಗಾರರು ಆಗಿರುತ್ತಾರೆ ಎಂದು ವಿಜಯಕುಮಾರ್ ಕವಲೂರುಆಗ್ರಹ ಪಡಿಸಿದ್ದಾರೆ,ಈ ಸಂದರ್ಭದಲ್ಲಿ ಅವರೊಂದಿಗೆ ಅನೇಕರು ಪಾಲ್ಗೊಂಡಿದ್ದರು,