ಮುಖ್ಯಮಂತ್ರಿ ಸ್ವಾಗತಕ್ಕೆ ಸಜ್ಜಾದ ಕಾರವಾರ ಸೂಪರ್ ಸ್ಪೆಶಾಲಿಟಿ ಸೌಲಭ್ಯ
Karwar super specialty facility ready to welcome the Chief Minister
ಕಾರವಾರ 21 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024 ಮುಂಗಾರು ಮಳೆಯ ಅಬ್ಬರಕ್ಕೆ ಶಿರೂರು ಗುಡ್ಡ ಕುಸಿದಾಗ ಜಿಲ್ಲೆಗೆ ವೀಕ್ಷಣೆಗೆ ಆಗಮಿಸಿದವರು , ಈಗ ಎರಡನೇ ಸಲ ಅಂಕೋಲಾದ ಮಂಜುಗುಣಿ ಹಾಗೂ ಕಾರವಾರಕ್ಕೆ ಬರುತ್ತಿದ್ದಾರೆ. ಗಂಗಾವಳಿಗೆ ನಿರ್ಮಿಸಿರುವ ನೂತನ ಸೇತುವೆ ಲೋಕಾರೆ್ಣ ಆಗಲಿದೆ.ಕಾರವಾರ ಮೆಡಿಕಲ್ ಕಾಲೇಜಿನ ನೂತನ ಆಸ್ಪತ್ರೆ, 450 ಹಾಸಿಗೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಇರುವ ಸಾಧನ ಗಳನ್ನು ಲೋಕಾರೆ್ಣ ಮಾಡಲಿದ್ದಾರೆ. ಈ ಮೂಲಕ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಬೇಕಾದ ಎಲ್ಲಾ ಸೌಲಭ್ಯ ಹಾಗೂ ಹೆಚ್ಚುವರಿ 230 ಕೋಟಿ ರೂ.ನೆರವನ್ನು ಘೋಷಿಸುವ ಸಾಧ್ಯತೆ ಇದ್ದು, ಈ ಅನುದಾನ ಬರುವ ಮಾರ್ಚ 2026ರ ಬಜೆಟ್ ನಲ್ಲಿ ಸೇರಿಸುವೆ ಎಂದು ಘೋಷಿಸುವ ಸಾಧ್ಯತೆ ಹೆಚ್ಚು.
ಜನರ ಬೇಡಿಕೆ ಹಾಗೂ ಜಿಲ್ಲೆಯ ಅರೋಗ್ಯ ಸೌಲಭ್ಯ ಹೆಚ್ಚಿಸುವ ಭಾಗವಾಗಿ ಶಿರಸಿಗೂ ಸಹ ಬರುವ ದಿನಗಳಲ್ಲಿ ಸುಪರ್ ಸ್ಪೆಶಾಲಿಟಿ ಸಿಗಲಿದೆ ಎಂಬ ಸುಳಿವುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುವ ಸಂಭಾವ್ಯ ಹೆಚ್ಚು. ಬೇಡ್ತಿ ವರದಾ ನದಿ ಜೋಡಣೆಯ ಬಗ್ಗೆ ಮುಖ್ಯಮಂತ್ರಿ ಸ್ವತಃ ಪ್ರಸ್ತಾಪಿಸುವ ಸಾಧ್ಯತೆ ಇದೆ. ಇದು ಕೇಂದ್ರದ ಯೋಜನೆ,ವಾಜಪೇಯಿ ಕನಸು. ಕೇಂದ್ರ ಸರ್ಕಾರ ರಾಜಕೀಯ ಮಾಡಲು ನೋಡುತ್ತಿದ್ದು, ಇದನ್ನು ರಾಜ್ಯ ಸರ್ಕಾರದ ತಲೆಗೆ ಕಟ್ಟುವ ಷಡ್ ಯಂತ್ರವನ್ನು ನೇರ ಪ್ರಸ್ತಾಪಿಸುವ ಸಾಧ್ಯತೆ ಇದೆ. ಶರಾವತಿ ಪಂಪ್ ಸ್ಟೋರೇಜ್ ಯೋಜನೆಯ ಒಳ ಸುಳಿಗಳನ್ನು ತಿಳಿದಿರುವ ಮುಖ್ಯಮಂತ್ರಿಗಳು, ಭವಿಷ್ಯದ ವಿದ್ಯುತ್ ಬೇಡಿಕೆಯನ್ನು ಗಮನಸದಲ್ಲಿರಿಸಿ, ವಿದ್ಯುತ್ ಕ್ಷೇತ್ರದ ಸ್ವಾವಲಂಬನೆ ದೃಷ್ಟಿಯಿಂದ ಈ ಯೋಜನೆಯ ಕಾರ್ಯ ಸಾಧ್ಯತೆಗಳನ್ನು ಪುನರ್ ಪರೀಶೀಲಿಸುವ ಸಾಧ್ಯತೆಗಳನ್ನು ಸರ್ಕಾರ ಪರೀಶೀಲಿಸಿ ಹೆಜ್ಜೆ ಇಡಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸುವ ಲಕ್ಷಣ ಗಳಿವೆ.
ಅಂಕೋಲಾ ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ರಾಜ್ಯ ಸರ್ಕಾರ ಉತ್ಸುಕವಾಗಿದ್ದು, ಕೇಂದ್ರ ಸರ್ಕಾರದ ಸಹಕಾರ ರಾಜ್ಯದ ಯೋಜನೆಗಳಿಗೆ ಸಿಗುತ್ತಿಲ್ಲ ಎಂದು ಜನರ ಎದುರು ಹೇಳಲಿದ್ದಾರೆಂದು ಕಾಂಗ್ರೆಸ್ ಪಕ್ಷದವರು ಮಾತಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆದಿರುವ ಹೆದ್ದಾರಿಗಳ ನಿಧಾನ ಕಾಮಗಾರಿಗಳನ್ನು ಮುಖ್ಯಮಂತ್ರಿ ಪ್ರಸ್ತಾಪಿಸಬಹುದು. ಅಲ್ಲದೆ ಗ್ಯಾರಂಟಿ ಯೋಜನೆಗಳು, ಅವುಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಬಂದ ಅನುದಾನ, ಜನತೆಗೆ ಆದ ಲಾಭ ಸಾಮಾಜಿಕ ನ್ಯಾಯದ ಪ್ರತೀಕ ಎಂದು ಮುಖ್ಯಮಂತ್ರಿ ಹೇಳುವ ಸಾಧ್ಯತೆ ಇದೆ. ಆರೋಗ್ಯ ಕ್ಷೇತ್ರದ ಕೊರತೆಯನ್ನು ಉತ್ತರ ಕನ್ನಡದಲ್ಲಿ ನೀಗಿಸಿ, ಸೌಲಭ್ಯ ಕಲ್ಪಿಸು ಮಲ್ಟಿ ಸ್ಪೆಶಾಲಿಟಿ ಸೌಲಭ್ಯದ ಭರವಸೆ ಸಿಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಮುಖ್ಯಮಂತ್ರಿ ಜೊತೆ ಬರಲಿದ್ದಾರೆ ಎಂದು ಮಾಹಿತಿ ಇದ್ದು, ಕಾಂಗ್ರೆಸ್ ಕಾರವಾರ ಕ್ಷೇತ್ರದಲ್ಲಿ ಇದನ್ನೇ ಶಕ್ತಿ ಪ್ರದರ್ಶನವಾಗಿ ಪ್ರಚುರುಪಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ......
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 