ತೆರಿಗೆ ಸಂಗ್ರಹದಲ್ಲಿ ಕಾರವಾರ ನಗರಸಭೆ ಮುಂದು: 3.25 ಕೋಟಿ ರೂ. ತೆರಿಗೆ ಸಂಗ್ರಹ

ನಾಗರಾಜ ಹರಪನಹಳ್ಳಿ

ಕಾರವಾರ: ಇಲ್ಲಿನ ನಗರಸಭೆಯ ಇದೀಗ ತೆರಿಗೆ ಸಂಗ್ರಹದಲ್ಲಿ ದಾಖಲೆ ಬರೆದಿದೆ. 2018ರಲ್ಲಿ 4.60 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇಟ್ಟುಕೊಂಡಿದ್ದು, 2018 ನವ್ಹೆಂಬರ್ ಅಂತ್ಯದ ವೇಳೆಗೆ 3.25 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ನೀರಿನ ಕರ ಸಂಗ್ರಹವನ್ನು ಆನ್ಲೈನ್ ಮಾಡಲಾಗಿದ್ದು ನವ್ಹೆಂಬರ್ ಅಂತ್ಯಕ್ಕೆ 34 ಲಕ್ಷ ರೂ. ತೆರಿಗೆ ಸಂಗ್ರಹವಾಗಿದೆ. ಅಲ್ಲದೇ 1000 ಜನ ಹೊಸದಾಗಿ ಕುಡಿಯುವ ನೀರಿನ ಸಂಪರ್ಕ ಪಡೆದಿದ್ದಾರೆ.  ಜನರು ಸ್ವಯಂ ಪ್ರೇರಿತವಾಗಿ ನೀರಿನ ಕರ ಕಟ್ಟುವಂತೆ ಮಾಡಿದ ಹೆಗ್ಗಳಿಕೆ ಪೌರಾಯುಕ್ತ ಎಸ್.ಯೋಗೇಶ್ವರ ಅವರಿಗೆ ಸಲ್ಲುತ್ತದೆ ಎಂದು ನಗರಸಭೆಯ ಅಧಿಕಾರಿ ವಲಯ ಹೇಳುತ್ತಿದೆ. 

ನಗರದಲ್ಲಿ ಬಹುತೇಕರು ಡ್ರೈನೇಜ್ (ಒಳಚರಂಡಿಗೆ) ನೇರವಾಗಿ ಸಂಪರ್ಕ ಪಡೆದು ಕೊಳಚೆ ಬಿಡುತ್ತಿದ್ದರು. ಅದನ್ನು ಪೌರಾಯುಕ್ತರು ಕಠಿಣ ಕ್ರಮದ ಮೂಲಕ ದೊಡ್ಡ ದೊಡ್ಡ ಕುಳಗಳಿಗೆ ದಂಡ ಹಾಕಿ , ಅಕ್ರಮ ಒಳಚರಂಡಿ ಸಂಪರ್ಕವನ್ನು ಅಧಿಕೃತಗೊಳಿಸಿ, ಸಕ್ರಮಕ್ಕೆ ಮುಂದಾದರು. ಇಂಥ 400ಕ್ಕೂ ಹೆಚ್ಚು ಡ್ರೈನೆಜ್ ಕನೆಕ್ಷನ್ಗಳಿಗೆ ದಂಡ ಹಾಕಿ 34 ಲಕ್ಷ ರೂ. ವಸೂಲಿ ಮಾಡಲಾಗಿದೆ. ಇದರಿಂದ ನಗರಸಭೆಯ ಆದಾಯವೂ ಹೆಚ್ಚಿತಲ್ಲದೇ, ಅಕ್ರಮವನ್ನು ಸಕ್ರಮ ಮಾಡಿ ಒಳಚರಂಡಿ ವ್ಯವಸ್ಥೆಯನ್ನು ಹದಕ್ಕೆ ತರಲಾಗಿದೆ. 

ಪೌರಾಕಾಮರ್ಿಕರಿಗೆ 16 ಮನೆ :

ಪೌರಾಕಾಮರ್ಿಕರಿಗೆ ನಗರಸಭೆಯ 150 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ 16 ಮನೆಗಳನ್ನು ಅಳ್ವೇವಾಡದಲ್ಲಿ ನಿಮರ್ಿಸಿಕೊಡಲಾಗಿದೆ. ಪ್ರತಿ ಮನೆಯ ಮೇಲೆ 8 ಲಕ್ಷ ರೂ.ವ್ಯಯಿಸಲಾಗಿದೆ. ಕೆಇಬಿ ಹತ್ತಿರ ಇರುವ ನಗರಸಭೆಯ ಒಡೆತನದ ಆಸ್ತಿಯಲ್ಲಿ ಮತ್ತೆ 16 ಮನೆಗಳ ನಿಮರ್ಾಣಕ್ಕೆ ಪೌರಾಯುಕ್ತರು ಮುಂದಾಗಿದ್ದರು. ಈ ಕಾರ್ಯಕ್ಕೆ ಆಡಳಿತ ಪಕ್ಷದ ಮಾಜಿಗಳು ಅಡ್ಡಿ ಮಾಡಿದ್ದರಿಂದ ಈ ಕಾರ್ಯ ಸ್ಥಗಿತವಾಯಿತು. 

8 ತಿಂಗಳಲ್ಲಿ 1189 ಶೌಚಾಲಯ ನಿಮರ್ಾಣ:

ನಗರದಲ್ಲಿ ಶೌಚಾಲಯ ಇಲ್ಲದೇ ಇದ್ದ ನಾಗರಿಕರನ್ನು ಗುರುತಿಸಿ, ನಗರಸಭೆಯ ನೆರವಿನಲ್ಲಿ 1189 ಶೌಚಾಲಯಗಳನ್ನು ನಿಮರ್ಿಸಿಕೊಡಲಾಗಿದೆ. 15 ಅತಿಕ್ರಮಣ ಜಾಗಗಳನ್ನು ಖುಲ್ಲಾಪಡಿಸಿ 100 ಕೋಟಿ ರೂ. ಆಸ್ತಿಯನ್ನು ರಕ್ಷಿಸಲಾಗಿದೆ. ನಗರಸಭೆಗೆ ಆಸ್ತಿಗಳನ್ನು ಉಳಿಸಿಕೊಡಲಾಗಿದೆ. ಕೋಟ್ಯಾಂತರ ರೂ. ಬೆಲೆಯ ನಗರಸಭೆಯ ಆಸ್ತಿಯನ್ನು ಅತಿಕ್ರಮಣಕ್ಕೆ ತುತ್ತಾದ ಜಾಗಗಳನ್ನು ಮರಳಿ ಪಡೆಯಲಾಗಿದೆ. 

ಪಾಕರ್ಿಂಗ್ ಉಲ್ಲಂಘನೆಯ ಸ್ಥಳ ರಕ್ಷಣೆ:

ನಗರದಲ್ಲಿ 11 ಕಡೆ ಪಾಕರ್ಿಂಗ್ ಸ್ಥಳಗಳನ್ನು ಕೆಲವರು ಅತಿಕ್ರಮಿಸಿದ್ದರು. ಅಂತ 11 ಜಾಗಗಳನ್ನು ಗುರುತಿಸಿ ಪಾಕರ್ಿಂಗ್ಗೆ ಮರಳಿ ದಕ್ಕುವಂತೆ ಮಾಡಲಾಗಿದೆ. 

ಬಜೆಟ್ ಗಾತ್ರ ಹಿಗ್ಗಿತು:

ಕಾರವಾರ ನಗರಸಭೆಯ ಬಜೆಟ್ ಮೊದಲು 6.4 ಕೋಟಿ ರೂ. ಮೊತ್ತದ್ದಾಗಿತ್ತು. ಪೌರಾಯುಕ್ತರ ಬಿಗಿ ಕ್ರಮ ಮತ್ತು ತೆರಿಗೆ ವಸೂಲಿ ಬಿಗಿ ಗೊಳಿಸಿದ ಪರಿಣಾಮ 2018 ಮಾರ್ಚನಲ್ಲಿ  9.65 ಕೋಟಿ ರೂ.ವೆಚ್ಚದ ಬಜೆಟ್ ಕಳೆದ 2018-19ನೇ ಸಾಲಿನಲ್ಲಿ ಮಂಡನೆಯಾಯಿತು. 

ನಕ್ಸಲ್ ಮಲ್ಲಿಕಾರನ್ನು ಸಾಮಾಜಿಕ ಬದುಕಿಗೆ:

ಪೌರಾಯುಕ್ತ ಯೋಗೇಶ್ವರ ಅವರು ಶೃಂಗೇರಿಯಲ್ಲಿ ತಹಶೀಲ್ದಾರರಾಗಿದ್ದ ಅವಧಿಯಲ್ಲಿ ನಕ್ಸಲ್ರು ಭಾರೀ ಸುದ್ದಿಯಲ್ಲಿದ್ದರು. ಆಗ ಸಕರ್ಾರ ನಕ್ಸಲ್ರು ಶರಣಾದರೆ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಆಗ ಸ್ವಂತ ರಿಸ್ಕ ತೆಗೆದುಕೊಂಡ ಯೋಗೇಶ್ವರ ಅವರು ನಕ್ಸಲ್ ಮಲ್ಲಿಕಾ ಅವರನ್ನು ಭೇಟಿಯಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಶರಣಾಗುವಂತೆ ಮನವೊಲಿಸಿದ್ದರು.  ಅಲ್ಲದೇ ಅವರಿಗೆ ಸಕರ್ಾರದ ಪ್ಯಾಕೇಜ್ ಸಿಗುವಂತೆ ಮಾಡಿದ್ದರು. ನೇರ ನಡೆಯ ಮತ್ತು ಬಿಗಿಕ್ರಮಕ್ಕೆ ಹೆಸರುವಾಸಿಯಾಗಿರುವ ಪೌರಾಯುಕ್ತ ಯೋಗೇಶ್ವರ ಅವರಿಗೆ ಭೂಮಿ ಕಬಳಿಸುವವರು, ಅಕ್ರಮ ಎಸುಗುವವರು ಒಳಗೊಳಗೇ ಬೆದರಿ ಬಳಲಿದಂತಾಗಿದ್ದಾರೆ.