ಕಾರವಾರ ವಾಣಿಜ್ಯ ಬಂದರು: ದಾಖಲೆಯ ವಹಿವಾಟು: ಕಸ್ಟಮ್ಸ್ ಇಲಾಖೆಯು 283.60 ಕೋಟಿ ಆದಾಯ

ಕಾರವಾರ 08: ಕಾರವಾರದ ಸರ್ವರುತು ವಾಣಿಜ್ಯ ಬಂದರು ಎಪ್ರಿಲ್  2018 ರಿಂದ  ಮಾರ್ಚ 2019 ರವರೆಗೆ ದಾಖಲೆಯ ವಹಿವಾಟು ನಡೆಸಿದ್ದು, ಒಟ್ಟು 16.69 ಕೋಟಿ ಆದಾಯ ಗಳಿಸಿದೆ ಎಂದು ಬಂದರು ಅಧಿಕಾರಿ ಕ್ಯಾಪ್ಟನ್ ಸಿ.ಸ್ವಾಮಿ ಹೇಳಿದರು.

56 ನೇ ಮೆರಿಟೈಮ್ ಡೇ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಇಲ್ಲಿನ ವಾಣಿಜ್ಯ ಬಂದರು 2017-18 ನೇ ಆಥರ್ಿಕ ವರ್ಷಕ್ಕಿಂತ ಶೇ 43.89ರಷ್ಟು ಪ್ರಗತಿ ಕಂಡಿದೆ. ಬಂದರಿನ ಹಡಗು ಚಲಿಸುವ ಮಾರ್ಗದಲ್ಲಿದ್ದ  ಹೂಳನ್ನು ತೆಗೆದ ಪರಿಣಾಮ  ಹೆಚ್ಚಿನ ಸಂಖ್ಯೆಯಲ್ಲಿ ಹಡಗುಗಳು ಬರಲು ಸಾಧ್ಯವಾಯಿತು. ಇದರಿಂದಾಗಿ ಆದಾಯದಲ್ಲಿ ಏರಿಕೆ ಕಂಡಿದೆ ಎಂದು ಕ್ಯಾಪ್ಟನ್ ಸ್ವಾಮಿ ಹೇಳಿದರು.  ಎಪ್ರಿಲ್  2018 ರಿಂದ  ಮಾರ್ಚ 2019 ರವರೆಗೆ ಸರಕು ಸಾಗಣೆಯ 157 ಹಡಗುಗಳು ಕಳೆದ  ಕಾರವಾರ ಬಂದರಿಗೆ ಬಂದಿವೆ. ಕಳೆದ ಬಾರಿ 133 ಬಂದಿದ್ದವು. ಈ ಬಾರಿ ಶೇ 15.2ರಷ್ಟು ಏರಿಕೆಯಾಗಿದೆ. ಇದರಿಂದಾಗಿ ಕಸ್ಟಮ್ಸ್ ಇಲಾಖೆಯು 283.60 ಕೋಟಿ ಆದಾಯ ಗಳಿಸಿದೆ. ಇಲಾಖೆಯು ಬರೋಬ್ಬರಿ 152 ಕೋಟಿ ಆದಾಯವನ್ನು ಕೇವಲ ಡಾಂಬರು ಆಮದು ಚಟುವಟಿಕೆಗಳಿಂದಲೇ ಪಡೆದಿದೆ ಎನ್ನುವುದು ಗಮನಾರ್ಹ. 2.99 ಕೋಟಿ ಸೇವಾ ತೆರಿಗೆಯೂ ಪಾವತಿಯಾಗಿದೆ ಎಂದರು. 

ಕಾರವಾರ ವಾಣಿಜ್ಯ ಬಂದರನ್ನು ಕೇಂದ್ರ ಸಕರ್ಾರವು ಹಡಗು ಸಂಚಾರ ನಿರ್ವಹಣಾ ವ್ಯವಸ್ಥೆ ಅಳವಡಿಸಲು ಆಯ್ಕೆ ಮಾಡಿದೆ. ಇದಕ್ಕೆ ತಾಂತ್ರಿಕ ಮತ್ತು ಹಣಕಾಸು ಸೌಲಭ್ಯಕ್ಕಾಗಿ  11.08 ಕೋಟಿ ನಿಗದಿ ಮಾಡಿದೆ. ಇದರಿಂದ ಬಂದರಿನಲ್ಲಿ ಭದ್ರತೆ ಹೆಚ್ಚಲಿದೆ. ಈ ಆಥರ್ಿಕ ವರ್ಷದಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಕೇಂದ್ರ ಸಕರ್ಾರವು ನಮ್ಮ ಬಂದರಿಗೆ ತೈಲ ಮಾಲಿನ್ಯ ನಿಯಂತ್ರಣದ ಪರಿಕರಗಳನ್ನೂ ನೀಡಲಿದೆ. ಇದಕ್ಕಾಗಿ  1.25 ಕೋಟಿ ನೀಡಿದೆ. ಇದರೊಂದಿಗೆ ರಾಜ್ಯ ಸಕರ್ಾರವೂ  2.5 ಕೋಟಿ ಮೊತ್ತದ ಪರಿಕರಗಳನ್ನು ನೀಡಿದೆ. ಅಲ್ಲದೇ ರಾಜ್ಯ ಸಕರ್ಾರವು ಬಂದರಿಗೆ ಖಾಸಗಿ ಸಶಸ್ತ್ರ ಭದ್ರತಾ ಸಿಬ್ಬಂದಿ ನಿಯೋಜನೆ ಅನುಮತಿ ನೀಡಿದೆ. ಅವರ ವೇತನಕ್ಕಾಗಿ  ವರ್ಷಕ್ಕೆ  60 ಲಕ್ಷ ನಿಗದಿ ಮಾಡಿದೆ ಎಂದರು.

ಬಂದರು ಬಳಕೆದಾರರಿಗೆ ರಾತ್ರಿ ಮಾರ್ಗದರ್ಶನ ಮೂಲಭೂತ ಸೌಲಭ್ಯಗಳನ್ನು ಸುಮಾರು 1 ಕೋಟಿ ವೆಚ್ಚದಲ್ಲಿ ತರಲು ಅನುಮತಿ ಸಿಕ್ಕಿದೆ.  ಇದರ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಸುಮಾರು  20 ಕೋಟಿ ವೆಚ್ಚದಲ್ಲಿ ಅಗ್ನಿ ಶಾಮಕ ಪರಿಕರಗಳನ್ನು ನೀಡುವಂತೆ ಸಕರ್ಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಕಾರವಾರ ಮತ್ತು ಬೇಲೇಕೇರಿ ಬಂದರುಗಳಲ್ಲಿ ಹೆಚ್ಚು ದೂರದವರೆಗೆ ದೃಶ್ಯಗಳನ್ನು ಸೆರೆಹಿಡಿಯುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.

ಬಂದರು ಅಭಿವೃದ್ಧಿ ಮತ್ತು ಒಳನಾಡು ಜಲಸಾರಿಗೆ ಅಭಿವೃದ್ಧಿ ಸಲುವಾಗಿ ಕನರ್ಾಟಕ ಮೆರಿಟೈಮ್ ಬೋಡರ್್ ಈಚೆಗೆ ರಚನೆಯಾಗಿದೆ. ಇದರ ಮುಖ್ಯ ಕಾರ್ಯ 

ನಿರ್ವಹಣಾಧಿಕಾರಿಯ ನೇಮಕವಾಗಿದ್ದು, ಕಾರವಾರದಲ್ಲಿ ಕಚೇರಿಯಿರಲಿದೆ. ಇದರಿಂದ ಬಂದರು ಚಟುವಟಿಕೆಗಳಿಗೆ ಸಾಕಷ್ಟು ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರವಾರ ಬಂದರು ಚಟುವಟಿಕೆ : 7,56,434 ಮೆಟ್ರಿಕ್ ಟನ್ ಆಮದು ಮಾಡಿಕೊಂಡ ಸರಕಾಗಿದೆ. ರಫ್ತು ಮಾಡಿದ ಸರಕು 1,83,853 ಮೆಟ್ರಿಕ್ ಟನ್. ಒಟ್ಟು ನಿರ್ವಹಿಸಿದ ಸರಕು 

9,40,287 ಮೆಟ್ರಿಕ್ ಟನ್ಗಳಾಗಿದೆ. 16,69,42,000.00 ರೂ. ವಾಣಿಜ್ಯ ಬಂದರು ಗಳಿಸಿದ ಆದಾಯ ಎಂದರು. 

1919ರಲ್ಲಿ ಮುಂಬೈನಿಂದ ಲಂಡನ್ಗೆ ಸಾಗಿದ ಮೊದಲ ಹಡಗು ಎಸ್.ಎಸ್.ಲಾಯಲ್ಟಿಯ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದು  ಕೋಸ್ಟ್ ಗಾಡ್ರ್ನ ಕಮಾಂಡಿಂಗ್ ಆಫೀಸರ್ ಕಮಾಂಡೆಂಟ್ ಎ.ಜೆ.ನಂದ ಹೇಳಿದರು. ಅಧಿಕಾರಿ ಕಶ್ಯಪ್, ಅಲ್ವಾರೆಸ್ ಮತ್ತು ಥಾಮಸ್ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರಾದ ಹೆಲೆನ್ ಅಲ್ವಾರೆಸ್ ಭಾಗವಹಿಸಿದ್ದರು. ಬಂದರು ಅಧಿಕಾರಿ ಕ್ಯಾ.ಅರುಣ್ ಗಾಂವ್ಕರ್ ಸ್ವಾಗತಿಸಿದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮೀನಾಕ್ಷಿ ಪಾಟೀಲ್ ಪ್ರಾಥರ್ಿಸಿದರು.