ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ : ವಾರ್ಷಿಕ ಪ್ರಶಸ್ತಿ ಘೋಷಣೆ
Karnataka Working Journalists Association: Annual Awards Announcement
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ : ವಾರ್ಷಿಕ ಪ್ರಶಸ್ತಿ ಘೋಷಣೆ
ಕೊಪ್ಪಳ 08: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಕೊಡ ಮಾಡುವ ವಾರ್ಷಿಕ ಉತ್ತಮ ವರದಿಗಾರ ಕೆ ಯು ಡಬ್ಲ್ಯೂ ಜೆ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿ ನಿಧಿ ಪ್ರಶಸ್ತಿ ಪ್ರಕಟಗೊಂಡಿದೆ,ಕೊಪ್ಪಳ ಇಂದ ಪ್ರಜಾ ಪ್ರಗತಿ ಪತ್ರಿಕೆಯ ವರದಿಗಾರ ಸಿದ್ದು ಹಿರೇಮಠ್, ಪ್ರಜಾವಾಣಿ ಅಳವಂಡಿ ಹೋಬಳಿ ವರದಿಗಾರ ಜುನಾ ಸಾಬ್, ಗಂಗಾವತಿ ಇಂದ ಸಮರ್ಥವಾಣಿ ಪತ್ರಿಕೆ ಉಪಸಂಪಾದಕ ಹರೀಶ್ ಕುಲಕರ್ಣಿ, ಕಾರಟಗಿ ಯಿಂದ ಈ ನಮ್ಮ ಕನ್ನಡ ನಾಡು ಪತ್ರಿಕೆಯ ವರದಿಗಾರ ಟಿ ಉಮೇಶ್, ಕನಕಗಿರಿ ಯಿಂದ ಕನ್ನಡಪ್ರಭ ವರದಿಗಾರ ಪ್ರಹ್ಲಾದ್ ರೆಡ್ಡಿ ಮಾದಿನಾಳ, ಕುಷ್ಟಗಿ ಇಂದ ಜನ ಕೂಗು ಪತ್ರಿಕೆಯ ವರದಿಗಾರ ರವೀಂದ್ರ ಬಾಕಳೆ ,ಯಲಬುರ್ಗಾ ದಿಂದ ಉದಯವಾಣಿ ಪತ್ರಿಕೆಯ ವರದಿಗಾರ ಮಲ್ಲು ಮಾಟರಂಗಿ ಮತ್ತು ಕುಕುನೂರು ಇಂದ ಹೊಸ ದಿಗಂತ ಪತ್ರಿಕೆಯ ವರದಿಗಾರ ರುದ್ರೇಶ್ ಆರ್ ಬೆರಳಿನ್ ಆಯ್ಕೆ ಗೊಂಡಿದ್ದಾರೆ.ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಹೊಸದಾಗಿ ಸ್ಥಾಪಿತಲಾದ ಕೆಯುಡಬ್ಲ್ಯೂ ಜೆ ದತ್ತಿ ನಿಧಿ ಪ್ರಶಸ್ತಿ ಹಿರಿಯ ಪತ್ರಕರ್ತ ಹೆಚ ಎಸ್ ಹರೀಶ್ ರವರು ಸ್ಥಾಪಿಸಿರುವ ತಮ್ಮ ತಂದೆ ದಿವಂಗತ ಶ್ರೀ ಹನುಮಂತಪ್ಪ ಶಿರುಗುಪ್ಪಿ ಇವರ ಸ್ಮರಣಾರ್ಥ ವಾಗಿ ಸ್ಥಾಪಿತ ಡಿ ವಿ ಗುಂಡಪ್ಪ ಪ್ರಶಸ್ತಿ ಗೆ ಗಂಗಾವತಿಯ ಪ್ರಜಾ ಪರ್ವ ಪತ್ರಿಕೆ ಸಂಪಾದಕ ಎಂ.ಜೆ .ಶ್ರೀನಿವಾಸ್ ಮತ್ತು ಹೆಚ್ ಎಸ್ ಹರೀಶ್ ರವರ ತಾಯಿ ದಿವಂಗತ ಶ್ರೀಮತಿ ನೀಲಮ್ಮ ಹನುಮಂತಪ್ಪ ಶಿರಗುಪ್ಪಿ ಅವರ ಸ್ಮರಣಾರ್ಥ ವಾಗಿ ಸ್ಥಾಪಿತ ಪಾಟೀಲ್ ಪುಟ್ಟಪ್ಪ ಪ್ರಶಸ್ತಿಯನ್ನು ಕುಕನೂರ್ ನ ಕನ್ನಡ ಪ್ರಭ ಪತ್ರಿಕೆಯ ಪತ್ರಕರ್ತ ಅಮರೇಶ್ ಕಂದಗಲ್ ಮಠ ರವರಿಗೆ ಪ್ರಸಕ್ತ ಸಾಲಿಗಾಗಿ ಆಯ್ಕೆ ಮಾಡಲಾಗಿದೆ, ಕೊಪ್ಪಳದ ಹಿರಿಯ ಪತ್ರಕರ್ತ ಜಿಎಸ್ ಗೋನಾಳ್ ರವರು ತಮ್ಮ ಅಜ್ಜನವರ ಹೆಸರಿನಲ್ಲಿ ಸ್ಥಾಪಿಸಿದ ದಿವಂಗತ ಶ್ರೀ ದೊಡ್ಡ ಪಂಪಣ್ಣ ಗೂಳಪ್ಪ ರೆಡ್ಡಿ ಗೋನಾಳ ಇವರ ಸ್ಮರಣಾರ್ಥ ವಾಗಿ ಸ್ಥಾಪಿತ ಶ್ರೀ ವಿಷ್ಣು ತೀರ್ಥ ಸದ್ಭಾವನ ಪ್ರಶಸ್ತಿ ಯನ್ನು ಕುಷ್ಟಗಿ ತಾಲೂಕು ಹನುಮಸಾಗರ ಹೋಬಳಿಯ ಸಂಯುಕ್ತ ಕರ್ನಾಟಕ ವರದಿಗಾರ ಶ್ರೀನಿವಾಸ್ ಜಾಗೀರ್ದಾರ್ , ಹಾಗೂ ಸುವರ್ಣ ಪರ್ವ ಪತ್ರಿಕೆ ಸಂಪಾದಕ ವೈ ನಾಗರಾಜ್ ರವರು ಸ್ಥಾಪಿತ ಅವರ ಸಹೋದರ ದಿವಂಗತ ಶ್ರೀ ವೀರೇಶ್ ವಿರೂಪಾಕ್ಷಪ್ಪ ಹೇಮಗುಡ್ಡ ಸ್ಮರಣಾರ್ಥ ವಾಗಿ ಸ್ಥಾಪಿತ ಕಿಷ್ಕಿಂಧ ಪ್ರಶಸ್ತಿ ಯನ್ನು ಕೊಪ್ಪಳ ಜಿಲ್ಲೆಯ ವಿನಯವಾಣಿ ಪತ್ರಿಕೆ ಸಂಪಾದಕ ಬಸವರಾಜ್ ಗುಡ್ಲಾನೂರ್ ರವರಿಗೆ ಹಾಗೂ ಇಲ್ಲಿಯ ಹಿರಿಯ ಪತ್ರಕರ್ತ ರಾಜು ಬಿ ಆರ್ ರವರು ಸ್ಥಾಪಿತ ಅವರ ತಂದೆ ತಾಯಿ ದಿವಂಗತ ಶ್ರೀಮತಿ ಆಂಜನೇಮ್ಮ ಮತ್ತು ಶ್ರೀ ರಾಮಚಂದ್ರ್ಪ. ಬಿ .ರವರ ಸ್ಮರಣಾರ್ಥ ವಾಗಿ ಕೊಡ ಮಾಡುವ ವೃಕ್ಷವೀರ ಪ್ರಶಸ್ತಿಯನ್ನು ಕೊಪ್ಪಳದ ಕ್ರಾಂತಿ ಪತ್ರಿಕೆ ವರದಿಗಾರ ಧರ್ಮಣ್ಣ ರವರಿಗೆ ನೀಡಲು ಆಯ್ಕೆ ಮಾಡಲಾಗಿದೆ .ಸೋಮವಾರದಂದು ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ಯವರು ಇವೆಲ್ಲ ಪ್ರಶಸ್ತಿಗಳನ್ನು ಘೋಷಣೆ ಮಾಡಿ ಪ್ರಕಟಿಸಿದರು ಇದೇ ದಿ, 9 ರ ಶನಿವಾರ ಬೆಳಿಗ್ಗೆ ಇಲ್ಲಿನ ಜಿಲ್ಲಾ ಸರ್ಕಾರಿ ನೌಕರರ ಸಂಘದ ಭವನ ದಲ್ಲಿ ಜರಗುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗುವುದು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ ನಾಗರಾಜ್ ತಿಳಿಸಿದ್ದಾರೆ, ಸದರಿ ಪ್ರಶಸ್ತಿ ಯಾದಿಯನ್ನು ಪ್ರಕಟಗೊಳಿಸುವ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸಾಧಿಕ್ ಅಲಿ, ರಾಷ್ಟ್ರೀಯ ಕಾರ್ಯಕಾರಣಿ ಮಂಡಳಿ ಸದಸ್ಯರಾದ ಜಿ.ಎಸ್. ಗೋನಾಳ, ಪತ್ರಿಕಾ ಭವನ ಕಟ್ಟಡ ಸಮಿತಿ ಅಧ್ಯಕ್ಷರಾದ ಎನ್. ಎಂ. ದೊಡ್ಡಮನಿ, ಸಂಘದ ಜಿಲ್ಲಾ ಉಪಾಧ್ಯಕ್ಷ ರುದ್ರ ಗೌಡ ಪಾಟೀಲ್ ಮತ್ತು ಜಿಲ್ಲಾ ಕಾರ್ಯದರ್ಶಿ, ವೀರಣ್ಣ ಕಳ್ಳಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 