ರಾಣೆಬೆನ್ನೂರಲ್ಲಿ ಕರ್ನಾಟಕ ವೈಭವ ವೈಚಾರಿಕ ಹಬ್ಬ -2025 ಕನ್ನಡ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ

Karnataka Vibhava Vicharika Festival-2025 at Ranebennur Kannada culture has a history of thousands

ರಾಣೆಬೆನ್ನೂರಲ್ಲಿ ಕರ್ನಾಟಕ ವೈಭವ ವೈಚಾರಿಕ ಹಬ್ಬ -2025 ಕನ್ನಡ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ

ರಾಣೆಬೆನ್ನೂರು  07:  ಕನ್ನಡ ನೆಲ, ಜಲ, ಭಾಷೆ, ಶಿಲ್ಪಕಲೆ ಮತ್ತು ಸಂಸ್ಕೃತಿ  ಪರಂಪರೆಗೆ ಐದು ಸಾವಿರ ವರ್ಷಗಳ ಬಹುದೊಡ್ಡ ಇತಿಹಾಸವಿದೆ. ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಶಿವಮೂರ್ತಿ ಹೇಳಿದರು.   ಅವರು ಇಲ್ಲಿನ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ, ಪರಿವರ್ತನಾ ಕರ್ನಾಟಕ ವೈಭವ ವೈಚಾರಿಕ - ಹಬ್ಬ 2025 ಅಂಗವಾಗಿ ಆಯೋಜಿಸಲಾಗಿದ್ದ, ಪ್ರೀದರ್ಶಿನಿ ಉದ್ಘಾಟಿಸಿ ಮಾತನಾಡಿದರು.     

    ಕರ್ನಾಟಕ ಸಾಧು, ಸಂತ, ಶರಣರ ನಾಡು, ಕಲೆಗಳ ಬೀಡು, ಇಲ್ಲಿನ ಶಿಲ್ಪಕಲೆ ವಿಶ್ವಕ್ಕೆ ಮಾದರಿಯಾಗಿ ಕಂಗೊಳಿಸುತ್ತದೆ ಎಂದರು. ಗ್ರಾಮ ಭಾರತೀಯ ಸಂಸ್ಕೃತಿ ನೆಲ ಮೂಲದ ನಮ್ಮ ಕಲೆ ಮತ್ತು ಕಲಾವಿದರು ಉಳಿಯಬೇಕು ಬೆಳೆಯಬೇಕು. ಇತಿಹಾಸದ ಕಲ್ಪನೆ ಸಾಕಾರಗೊಳ್ಳಬೇಕು. ಆಧುನಿಕ ಸ್ಪರ್ಶವಿದ್ದರೂ ಅಂದಿನ ನಮ್ಮ ಪೂರ್ವಜರ ವಾಸ್ತವಿಕ ಸ್ಥಿತಿಯ ನೆಲಗಟ್ಟಿನಲ್ಲಿ ನಮ್ಮ ನಿರ್ಮಾಣವಾಗಬೇಕಾದಅಗತ್ಯವಿದೆ ಎಂದರು.ವೈಚಾರಿಕ ಹಬ್ಬಗಳ ಮೂಲಕ ಭವಿಷ್ಯದ ಯುವ ಸಮುದಾಯಕ್ಕೆ ಮಾರ್ಗದರ್ಶನವಾಗುವ ಜ್ಞಾನ, ವಿಜ್ಞಾನ, ಮತ್ತು ತಂತ್ರಜ್ಞಾನ ಸ್ಪರ್ಷದ ಜೊತೆಗೆ, ನೈಜ ಮತ್ತು ನೈಸರ್ಗಿಕ ನೆಲ ಮೂಲ ಸಂಸ್ಕೃತಿಯನ್ನು ಅಳವಡಿಸಿಕೊಂಡು ಭಾರತದ ಭವಿಷ್ಯಕ್ಕೆ ಮುಂದಾಗಬೇಕಾದ ಅಗತ್ಯವಿದೆ ಎಂದು ಯುವ ಸಮುದಾಯಕ್ಕೆ ಕರೆ ನೀಡಿದರು. ದಿವ್ಯ ಸಾನಿಧ್ಯ ವಹಿಸಿದ್ದ ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಶ್ರೀ ಬಾಲ ಯೋಗಿ ಜಗದೀಶ್ವರ ಮಹಾಸ್ವಾಮಿಗಳವರು ಮಾತನಾಡಿ. ಆಧುನಿಕತೆ ಭರಾಟೆಯಿಂದ ಇಂದು ನೆಲಮೂಲ ಸಂಸ್ಕೃತಿಯ ಕಲೆ ಮತ್ತು ಕಲಾಪರಂಪರೆ ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಪ್ರೀದರ್ಶಿನಿ ಪ್ರದರ್ಶನಗಳು ಇತಿಹಾಸದ ನೆನಪುಗಳು ಕಣ್ಣಿಗೆ ಕಟ್ಟುವಂತಿವೆ ಎಂದರು.     ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ನಮ್ಮ ರಾಜ ಮಹಾರಾಜರು ಅಂದೇ ವೈಚಾರಿಕತೆಯೊಂದಿಗೆ, ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಕೃಷಿ ಮತ್ತು ಕೃಷಿ ಪರಿಕರಿಗಳು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕಾದ ಅಗತ್ಯವಿದೆ ಎಂದರು.   

     ಹಬ್ಬಗಳು, ಜಾತ್ರೆ ಉತ್ಸವಗಳು, ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಇದರಿಂದ ಭವ್ಯ ಭಾರತದ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರ ತಿಳಿಯಲು, ಉಳಿಸಲು, ಬೆಳೆಸಲು ಜನಾಂಗದಿಂದ ಜನಾಂಗಕ್ಕೆ  ಪರಿಚಯಿಸಲು ಇಂತಹ ಪ್ರದರ್ಶನಗಳು ಮಾರ್ಗದರ್ಶಕಗಳಾಗಿವೆ ಎಂದರು.     ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಡಾ. ಕೆ. ಸಿ. ನಾಗರಜ್ಜಿ, ಕ.ಸಾ.ಪ. ಅಧ್ಯಕ್ಷ, ಪ್ರಭಾಕರ್ ಶಿಗ್ಲಿ, ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ,ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್‌. ಸಂತೋಷ್, ಕರ್ನಾಟಕ ವೈಭವ ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ. ಎಸ್‌. ವಿ. ಹಲಸೆ, ಅಖಿಲ ಭಾರತ ಸಂಯೋಜಕ ರಘುನಂದನ. ಪರಿವರ್ತನ ಅಧ್ಯಕ್ಷ ಡಾ, ಎಸ್‌. ಜಿ.ವೈದ್ಯ, ಸಂಯೋಜಕರಾದ ಡಾ.ನಾರಾಯಣ ಪವಾರ, ಕೆ.ಎನ್‌.ಪಾಟೀಲ್,  ಸಹ ಸಂಯೋಜಕರಾದ ಶ್ರೀಮತಿ ಸುಮಾ ಉಪ್ಪಿನ, ಪ್ರವೀಣ್ ಕೋಪರ್ಡೆ, ಖಜಾಂಚಿ ಪ್ರೀತೇಶ್ ಜೈನ್, ಕಾರ್ಯದರ್ಶಿ ಬಸವರಾಜ ಪಾಟೀಲ್, ಮತ್ತಿತರರು ಉಪಸ್ಥಿತರಿದ್ದರು. ವೈಜ್ಞಾನಿಕ ವೈಚಾರಿಕ ವಿವಿಧ ವಸ್ತುಗಳ ಪ್ರದರ್ಶನದಲ್ಲಿ ಗ್ರಾಮೀಣ ಗುಡಿ ಕೈಗಾರಿಕೆಗಳು,ನಮ್ಮ ನಾಡಿನ ಸಾಧು, ಸಂತರು, ವಚನಕಾರರು, ಶರಣರು ಸಂತ  ಪರಂಪರೆ ಹರಿಕಾರರು, ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ತಜ್ಞರು,ಜ್ಞಾನ, ವಿಜ್ಞಾನ, ಮತ್ತು ತಂತ್ರಜ್ಞಾನ  ಕುರಿತಂತೆ ಸಮಗ್ರ ಮಾಹಿತಿಯುಳ್ಳ ಪ್ರದರ್ಶನಗಳು ಏರಿ​‍್ಡಸಲಾಗಿದ್ದು, ಭವಿಷ್ಯದ ಯುವ ಜನಾಂಗಕ್ಕೆ ಇವುಗಳು ಉಪಯುಕ್ತವಾಗಿದ್ದು ಅತ್ಯಂತ ಮಾದರಿಯಾಗಿವೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.