ಕರ್ನಾಟಕ ವೈಭವ ವೈಚಾರಿಕ ಹಬ್ಬ ಸಂಭ್ರಮದ ತೆರೆ: ವಿರಾಸತ ದೊಡ್ಡದಿದೆ ಆದರೇ ವಿಕಾಶತೆ ದೊಡ್ಡದಾಗಬೇಕು- ಬೊಮ್ಮಾಯಿ
ರಾಣೆಬೆನ್ನೂರು 09: ಕನ್ನಡ ಸಂಸ್ಕೃತಿ ಭಾಷೆ, ಸಾಹಿತ್ಯ ಮತ್ತು ಸಂಗೀತ ಸಂಸ್ಕೃತಿಗೆ ಸಾವಿರಾರು ವರ್ಷಗಳ ಬಹುದೊಡ್ಡ ಇತಿಹಾಸವಿದೆ. ಇತಿಹಾಸದ ಪರಿಕಲ್ಪನೆಯಲ್ಲಿ ಮೂಲ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ನಮ್ಮತನವನ್ನು ನಾವು ಅಳವಡಿಸಿಕೊಂಡು ವೈಚಾರಿಕತೆಯ ಮೂಲಕ ಸಾಗಬೇಕಾದ ಇಂದಿನ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು, ರವಿವಾರ ಸಂಜೆ ರಾಜರಾಜೇಶ್ವರಿ ಕಾಲೇಜ್ ಆವರಣದಲ್ಲಿ ಆಯೋಜನೆಗೊಂಡಿರುವ ಕರ್ನಾಟಕ ವೈಭವ -2025 ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಿಂದಲೂ ಇತಿಹಾಸವಿದೆ, ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ ಕನ್ನಡ, ಸಾಹಿತ್ಯ, ಸಂಗೀತ ಪರಂಪರೆ ದೇಶದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಬಹುದೊಡ್ಡ ಕೊಡುಗೆ ನೀಡಿದೆ ಕರ್ನಾಟಕಕ್ಕೆ ಕನ್ನಡಿಗರೇ ಸಾಟಿ, ರಾಜ್ಯದ ರೀತಿಯಲ್ಲಿ ಬೇರೆ ಯಾವ ರಾಜ್ಯವು ಇಲ್ಲ ಎಂದು ಕರ್ನಾಟಕ ಕುರಿತು ವಿಶ್ಲೇಷಿಸಿ ಮಾತನಾಡಿದರು. ಕನ್ನಡ ಭಾಷೆ ಹಿರಿಯ ಪುರಾತನ ಭಾಷೆ ಅದಕ್ಕೆ ಮೂರು ಸಾವಿರ ವರ್ಷಗಳ ಕಾಲ ಜೀವಂತವಿರುವುದು ಆ ಭಾಷೆಯ ಘಟ್ಟಿತನಕೆ ಸಾಕ್ಷಿಯಾಗಿದೆ. ಇತಿಹಾಸ ಬರೆಯುವವರು ಮಾತ್ರ ಭವಿಷ್ಯ ಬರೆಯಲು ಸಾಧ್ಯ, ಮನುಕುಲಕ್ಕೆ ನೀರುಣಿಸಿ, ಬೇರೆ ಬೇರೆ ಪ್ರಾಂತ್ಯಕ್ಕೆ ಸಾಗುವ ಇಲ್ಲಿನ ನದಿಗಳು ಸಾಗಿ ಹಸಿರು ಸಂಪತ್ತಿನ ಒಡೆಯನಿಗೆ ಮತ್ತೆ ನೀರು ಉಣಿಸುವ, ಪರಂಪರೆ ಬೇರೆ ಎಲ್ಲೂ ಇಲ್ಲ ಎಂದು ವಿವರಿಸಿದರು. ವೈಚಾರಿಕತೆ ವೈಜ್ಞಾನಿಕತೆ, ಅಳವಡಿಸಿಕೊಂಡು, ಇತಿಹಾಸದ ಮೂಲ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸಾಗುವುದು ಅಗತ್ಯವಿದೆ. ಇತಿಹಾಸದ ಚಕ್ಕಡಿ, ಸೈಕಲ್, ಇಂದು ನೈಪಥಕ್ಕೆ ಸರಿದಿವೆ. ವೈಚಾರಿಕ ವಿಚಾರದಲ್ಲಿ ಬಹುದೊಡ್ಡ ಸಾಧನೆ ಕನ್ನಡಿಗರು ಮತ್ತು ದೇಶದ್ದಾಗಿದೆ ಆದರೆ ಎಲ್ಲವೂ ಇದ್ದು ಇಲ್ಲದಂತಿರುವ ಒಣ ಸ್ವಭಾವ ಕನ್ನಡಿಗರದು.
ವಚನ ಮತ್ತು ದಾಸ ಸಾಹಿತ್ಯ ದೇಶಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ ಅಲ್ಲದೆ ಬದುಕಿನಲ್ಲಿ ಬದುಕುವ ರೀತಿ ಮತ್ತು ನೀತಿ ಇವುಗಳು ತೋರಿಸಿಕೊಟ್ಟಿವೆ ಸಾತ್ವಿಕ ಬದುಕಿನ ಭಾರತೀಯರು ಭಾವೈಕ್ಯತೆಯ ಹರಿಕಾರಾಗಿದ್ದೇವೆ ನಮ್ಮ ಸಾಧನೆ ಎಂದರು. ರಾಜಕೀಯವಾಗಿ ಅನೇಕ ಏರುಪೇರುಗಳು ಆಗಿರುವುದು ನಮ್ಮ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತಲ್ಲಿದೆ. ಪ್ರಸ್ತುತ ಆಡಳಿತ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ ಇದರಿಂದ ವಿಕಾಸತೆ ಸಾಧ್ಯವೇ ಎಂದು ಪರೋಕ್ಷವಾಗಿ ಕಾಂಗ್ರೆಸ್ ಆಡಳಿತದ ಸರ್ಕಾರಕ್ಕೆ ಚಾಟಿ ಏಟು ಬೀಸಿದರು.
ಇನ್ನೋರ್ವ ಅತಿಥಿ ಭಾರತ ಸರ್ಕಾರದ ಬೃಹತ್ ಕೈಗಾರಿಕೆ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಸಂವಿಧಾನದ ಹೆಸರಿನಲ್ಲಿ ಬಹು ಚರ್ಚೆಗಳು ನಡೆಯುತ್ತಲ್ಲಿವೆ ಅಲ್ಲದೆ ಅಪಪ್ರಚಾರಗಳು ಸಹ ನಡೆಯುತ್ತಿರುವುದು ವಿಷಾಧನೀಯ. ಭಾರತದ ಸಂಸ್ಕೃತಿ ಪ್ರತಿಬಿಂಬಿಸುವ ಕವಿಗಳು, ಸಾಹಿತಿಗಳು, ಸಂತರು, ಸಾಧುಗಳು, ಧಾರ್ಶನಿಕರು, ವೀರವನಿತೆಯರು, ಕನ್ನಡಿಗರ ಸಂಪತ್ತು ಇದರ ಅರಿವು ಎಲ್ಲ ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು ಎಂದರು.
ಭಾರತ ಐದನೇ ಸ್ಥಾನದಲ್ಲಿದ್ದು ಭವಿಷ್ಯದಲ್ಲಿ ಮೂರನೇ ಸ್ಥಾನಕ್ಕೆ ಬರುವ ಎಲ್ಲ ಲಕ್ಷಣಗಳು ಕಾಣುತ್ತಿದ್ದೇವೆ. ಈಗಾಗಲೇ ಸಿದ್ಧತೆ ನಡೆದಿದೆ. ಆದರೂ ಇತಿಹಾಸ ಮರೆಯಾದೆ ನೆಮ್ಮದಿಯ ಜೀವನಕ್ಕೆ ಇತಿಹಾಸದಲ್ಲಿ ಸಾಗಿ ಬಂದ ಭಾವೈಕ್ಯತೆಯ ಬದುಕಿಗೆ ಅಂದು ಸಾಕ್ಷಿಯಾಗಿದ್ದ, ಮೂಲ ಸಂಸ್ಕೃತಿ ವೈಚಾರಿಕತೆಯೊಂದಿಗೆ ಉಳಿಸಿ ಬೆಳೆಸಿಕೊಳ್ಳಲು ಮುಂದಾದಾಗ ಮಾತ್ರ ಕರ್ನಾಟಕ ಮತ್ತು ಭಾರತ ಮತ್ತಷ್ಟು ಪ್ರಭುದ್ಧತೆ ಸಾಧಿಸಲು ಸಾಧ್ಯವಾಗುವುದು ಎಂದು ಹೇಳಿದರು. ಹರಿಹರ ವೀರಶೈವ ಲಿಂಗಾಯತ ಜಗದ್ಗುರು ಪೀಠದ ವಚನಾನಂದ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ, ಹಿರಿಯ ಜನಪದ ಕಲಾವಿದೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಯಿತು. ಹಿರಿಯ ಸಂಗೀತ ಕಲಾವಿದೆ, ವಚನ ಗಾಯಕಿ ಶ್ರೀಮತಿ ಸಂಗೀತ ಕಟ್ಟಿ ಅವರಿಗೆ" ಸರ್ವಜ್ಞ ಪ್ರಶಸ್ತಿ" ಪ್ರಧಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರವಾಹ ಸಹ ಸಂಯೋಜಕ ರಘುನಂದನ,ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಪಿ.ಲಿಂಗನಗೌಡರ, ಸದಸ್ಯರಾದ ಬಸವರಾಜ ಪಟ್ಟಣಶೆಟ್ಟಿ, ಸುಜಿತ್ ಜಂಬಿಗಿ, ವೀರಣ್ಣ ಅಂಗಡಿ ಪರಿವರ್ತನ ದ ಕೆ. ಎನ್. ಪಾಟೀಲ್, ಡಾ, ನಾರಾಯಣ ಪವಾರ್ ಮತ್ತಿತರರು ಉಪಸ್ಥಿತರಿದ್ದರು.