ರಾಜ್ಯದ ಜನಪರ ಯೋಜನೆಗಳ ಮಾಹಿತಿ ಪಡೆದುಕೊಳ್ಳಲು ಜನರಿಗೆ ಕರಿಯಣ್ಣನವರ ಕರೆ
ಹಾವೇರಿ04 : ರಾಜ್ಯ ಸಕರ್ಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಮಾಹಿತಿ ಕುರಿತಂತೆ ಕೇಂದ್ರ ಬಸ್ ನಿಲ್ದಾಣದಲ್ಲಿ ಮೂರು ದಿನಗಳ ಪ್ರದರ್ಶನ ಆಯೋಜಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಮನವಿ ಮಾಡಿಕೊಂಡಿದ್ದಾರೆ.
ಸೋಮವಾರ ಕೇಂದ್ರ ಬಸ್ ನಿಲ್ದಾಣದಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯ ಸಕರ್ಾರದ ಯೋಜನೆಗಳ ಕುರಿತು ಆಯೋಜಿಸಿರುವ ಮೂರುದಿನಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಅನುಕೂಲಕ್ಕಾಗಿ ಮೈತ್ರಿ ಸಕರ್ಾರ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಗಳ ಮಾಹಿತಿ ಜನರಿಗೆ ತಿಳಿಸುವ ನಿಟ್ಟಿನಲ್ಲಿ ರಾಜ್ಯದ ನಾಲ್ಕು ವಿಭಾಗಗಳ ಆಯ್ದ 12 ಜಿಲ್ಲೆಗಳಲ್ಲಿ ವಸ್ತು ಪ್ರದರ್ಶನ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಗಮನ ಸೆಳೆದ ಮಾಹಿತಿ: ಕನರ್ಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಜಾರಿಗೆ ತಂದಿರುವ ಬಡವರ ಬಂಧು, ಅಮೃತ ಯೋಜನೆ, ಹಸಿರು ಕನರ್ಾಟಕ, ಜನತಾ ದರ್ಶನ, ಋಣಮುಕ್ತ ಪರಿಹಾರ ಕಾಯ್ದೆ, ಬೆಳೆ ಸಮೀಕ್ಷೆ, ಶಾಲಾ-ಕಾಲೇಜುಗಳಿಗೆ ಮೂಲ ಸೌಕರ್ಯ, ದಿಶಾ, ಬಡ್ಡಿ ರಹಿತ ಸಾಲ ನೀಡುವ ಕಾಯಕ ಯೋಜನೆ, ಅವಕಾಶ ವಂಚಿತರ ಅಭ್ಯುಧಯಕ್ಕೆ ಮಹಾಹೆಜ್ಜೆ, ಕೈಗಾರಿಕಾ ಕ್ಲಸ್ಟರ್ ಯೋಜನೆ, ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ, ನಿರುದ್ಯೋಗಿ ನಿವಾರಣೆಗೆ ನಿಶ್ಚಯ ಯೋಜನೆ, ಆಧುನಿಕ ಕೃಷಿ ಯೋಜನೆ, ಆಯುಷ್ಮಾನ್ ಭಾರತ ಕನರ್ಾಟಕ, ರೈತ ಬಂಧು ಸೇರಿದಂತೆ ವಿವಿಧ ಯೋಜನೆಗಳ ಆಕರ್ಷಕ ಫಲಕಗಳ ಮಾಹಿತಿ ಹಾಗೂ ವಸ್ತುಪ್ರದರ್ಶನ ಇಂದಿನಿಂದ ಮೂರು ದಿನಗಳವರೆಗೆ ಆಯೋಜಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳುವಂತೆ ವಾತರ್ಾಧಿಕಾರಿ ಬಿ.ಆರ್.ರಂಗನಾಥ್ ಅವರು ತಿಳಿಸಿದ್ದಾರೆ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 