ಹಾವೇರಿ18: ಹೊಸ ರೂಪಕ, ಹೊಸ ಸಂಶೋಧನೆಗಳು ವಿದ್ಯಾಥರ್ಿಗಳಿಂದ ಹೊರ ಹೊಮ್ಮಲು ಹೆಚ್ಚಿನ ಅನುದಾನ ಅವಶ್ಯವಿದೆ. ಈ ನಿಟ್ಟಿನಲ್ಲಿ ಈಗ ನೀಡಲಾಗುತ್ತಿರುವ ಹತ್ತು ಸಾವಿರ ರೂ. ಬದಲಿಗೆ ಒಂದು ಲಕ್ಷ ರೂ. ಪ್ರೋತ್ಸಾಹಧನ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಹೇಳಿದರು.
ಜಿಲ್ಲಾ ಪಂಚಾಯತ್, ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಕರ್ಜಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ಹಾವೇರಿ ಇಜಾರಿಲಕಮಾಪೂರ ಟಿ.ಎಂ.ಎ.ಇ.ಎಸ್. ಬಿ.ಇಡಿ ಕಾಲೇಜಿನಲ್ಲಿ ಆಯೋಜಿಸಿದ ಇನ್ಸ್ಪೈರ್ ಅವಾಡರ್್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ್ದರು.
ವಿದ್ಯಾಥರ್ಿಗಳಿಂದ ಹೊಸ ಹೊಸ ಶೋಧಗಳು ಹೊರಬರಲು ಯಾವುದೇ ನಿರ್ಬಂಧವಿರಬಾರದು. ಅವರ ಸಂಶೋಧನೆಗಳು ಸಾಕಾರಗೊಳ್ಳಲು ಉಪಕರಣಗಳ ಖರೀದಿಮಾಡಬೇಕಾಗುತ್ತದೆ. ಪ್ರಸ್ತುತ ದುಬಾರಿ ಕಾಲದಲ್ಲಿ ಹತ್ತು ಸಾವಿರ ಅನುದಾನ ಸಾಕಾಗುವುದಿಲ್ಲ. ಒಂದು ಲಕ್ಷ ರೂ.ವರೆಗೆ ಪ್ರೋತ್ಸಾಹಧನ ನೀಡಲು ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಇನ್ಸ್ಪೈರ್ ಅವಾಡರ್್ ಕಾರ್ಯಕ್ರಮ ಮಹತ್ವದ ಕಾಯರ್ಾಗಾರವಾಗಿದೆ. ಜಿಲ್ಲೆಯ ಪ್ರತಿಭಾನಿತ್ವಿತ ವಿದ್ಯಾಥರ್ಿಗಳಿದ್ದಾರೆ.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದಶರ್ಿಸಿದ ಮಾದರಿಗಳು ನನಗೆ ಆಶ್ಚರ್ಯರಿ ತಂದಿದೆ. ಜಿಲ್ಲೆಯ ಪ್ರತಿಭೆಗಳು ಇಲ್ಲಿಯೇ ನಶಿಸಿ ಹೋಗಬಾರದು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇವರ ಸಂಶೋಧನೆಗಳು ಬೆಳಕು ಚೆಲ್ಲಬೇಕು.
ಯುವ ವಿಜ್ಞಾನಿಗಳಾಗಿ ಬೆಳೆಯುವ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಹಾಗೂ ಇಲಾಖೆ ಇವರಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಶಾಲಾ ಶಿಕ್ಷಕರು ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ನೀಡಿದರೆ ಮುಂದಿನ ದಿನಮಾನಗಳಲ್ಲಿ ಬೆಳವಣಿಗೆ ಹೊಂದಿದ ಶಿಕ್ಷಕರು ಹಾಗೂ ಗುರುಗಳನ್ನು ದೇವರ ಸಮಾನವಾಗಿ ಕಾಣುತ್ತಾರೆ. ಶಿಕ್ಷಕರ ಪೋಟೋಹಾಕಿ ಪೂಜೆ ಮಾಡುತ್ತಾರೆ. ಮಕ್ಕಳ ಪ್ರತಿಭೆ ಬೆಳೆಯಲು ಗುರುಗಳ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ ಅವರು ಮಾತನಾಡಿದರು. ಜಿ.ಪಂ.ಉಪಾಧ್ಯಕ್ಷೆ ದೀಪಾ ಅತ್ತಿಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಯಟ್ ಉಪನಿದರ್ೆಶಕ ಜಿ.ಎಂ.ಬಸವಲಿಂಗಪ್ಪ, ವಾತರ್ಾಧಿಕಾರಿ ಡಾ.ಬಿ.ಆರ್.ರಂಗನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಣ್ಣ, ಬೆಳಗಾವಿ ವಿಭಾಗದ ಇನ್ಸ್ಪೈರ್ ಉಸ್ತುವಾರಿ ಅಧಿಕಾರಿ ಕುಪವಾಡಿ ವಿಜಯನ್ ಹಾಗೂ ಸುಕನ್ಯಾ ಬ್ಯಾನಜರ್ಿ ಉಪಸ್ಥಿತರಿದ್ದರು. ಡಯಟ್ ಉಪನ್ಯಾಸಕ ಅಂಬಿಗೇರ ಸ್ವಾಗತಿಸಿದರು.
ಗಮನಸೆಳೆದ ವಿಜ್ಞಾನ ಮಾದರಿಗಳು: ಜಿಲ್ಲೆಯ ವಿವಿಧ ಶಾಲೆಯ ವಿದ್ಯಾಥರ್ಿಗಳು ತಯಾರಿಸಿ ಪ್ರದರ್ಶಕ್ಕಿರಿಸಿದ 600ಕ್ಕೂ ಅಧಿಕ ವಿಜ್ಞಾನ ಮಾದರಿಗಳು ಎಲ್ಲರ ಗಮನ ಸೆಳೆಯುತ್ತಿವೆ. ವಿಶೇಷವಾಗಿ ವಿದ್ಯಾಥರ್ಿಗಳಿಗೆ ವಿಜ್ಞಾನದ ಜ್ಞಾನ ವಿಸ್ತರಣೆಗೆ ಪ್ರಯೋಗಾಲಯವಾಗಿ ಗಮನ ಸೆಳೆಯುತ್ತಿದೆ