ಕಾಗವಾಡ ಶಿವಾನಂದ ಮಹಾವಿದ್ಯಾಲಯದ ವಾರ್ಷಿ ಕ ಕ್ರೀಡಾ ದಿನಾಚರಣೆ: ನಿರ್ದಿಷ್ಟ ಗುರಿಯೆಡೆಗೆ ಲಕ್ಷ್ಯ ವಹಿಸಿ ಸತತ ಪ್ರಯತ್ನ ಮಾಡಿ: ಜೋಶಿ
ಕಾಗವಾಡ 13: ನಿರ್ದಿ ಷ್ಟ ಗುರಿಯೆಡೆಗೆ ಲಕ್ಷ್ಯ ವಹಿಸಿ ಸತತ ಪ್ರಯತ್ನ ಮಾಡಿರಿ. ಕಷ್ಟಗಳು ಬರುವದು ಖಚಿತ. ಅವುಗಳನ್ನು ಎದುರಿಸಬೇಕು. ಆ ಪ್ರಯತ್ನದಲ್ಲಿರುವಾಗ ಎಲ್ಲರೂ ಅವಮಾನಿಸುತ್ತಾರೆ. ನಿಮ್ಮ ತಯಾರಿ ನಡೆಯುವಾಗ ಸಾಮಥ್ರ್ಯದ ಬಗ್ಗೆ ಅನುಮಾನಿಸುತ್ತಾರೆಯೆಂದು ಉಗಾರ ಕಾಲೇಜಿನ ಪ್ರಾಚಾರ್ಯ ಮತ್ತು ರಾಣಿ ಚನ್ಮಮ್ಮಾ ವಿಶ್ವವಿದ್ಯಾಲಯ, ಬೆಳಗಾವಿ ಸಿಂಡಿಕೇಟ್ ಸದಸ್ಯ ಡಾ.ಎಸ್.ಎಂ ಜೋಶಿಯವರು ಹೇಳಿದರು.
ಶನಿವಾರರಂದು ಶಿವಾನಂದ ಮಹಾವಿದ್ಯಾಲಯದ ವಾರ್ಷಿ ಕ ಕ್ರೀಡಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ವಿದ್ಯಾಥರ್ಿಗಳಲ್ಲಿ ನಕಾರಾತ್ಮಕ ಮನೋಭಾವನೆ ಬೆಳೆಯುತ್ತಿರುವದು ವಿಷಾದನೀಯ. ನಮ್ಮ ವಿದ್ಯಾಥರ್ಿಗಳ ಹಿಂಜರಿಕೆ ಮನೋಭಾವನೆಯನ್ನು ತೊಲಗಿಸುವ ಪ್ರಯತ್ನವೇ ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ಪ್ರಾಚಾರ್ಯ ಡಾ.ಜಿ.ಜಿ.ಕರಲಟ್ಟಿ ವಹಿಸಿದರು. ಮಹಾಭಾರತದಲ್ಲಿ ಕೃಷ್ಣ ಭಗವಾನರ 'ಪ್ರಯತ್ನಂ ಸರ್ವಸಿದ್ಧಿ ಸಾಧನಂ' ಉವಾಚವನ್ನು ಉದ್ಗರಿಸಿ, ಜೀವನದಲ್ಲಿ ಗೆಲ್ಲುವದು, ಸೋಲುವದು ಮತ್ತು ಹಂಚಿಕೊಳ್ಳುವದು ಮುಖ್ಯ. ಬೇರೆಯವರ ಮನಸ್ಸು ಗೆಲ್ಲುವದು, ಕೆಡುಕನ್ನು ಮರೆಯುವದು ಮತ್ತು ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವದೇ ಮುಖ್ಯವೆಂದು ಹೇಳಿದರು.
ಸಾನಿಧ್ಯ ಯತೀಶ್ವರಾನಂದ ಸ್ವಾಮೀಜಿ ವಹಿಸಿದ್ದರು. ನಮ್ಮ ಸಂಸ್ಥೆಯು ಸಂಸ್ಕಾರವಂತ ವಿದ್ಯಾಥರ್ಿಗಳನ್ನು ಸಮಾಜಕ್ಕೆ ನೀಡುತ್ತಿದೆ. ಇದರಿಂದ ಸಂಸ್ಥೆಯ ಸ್ಥಾಪನೆ ಉದ್ದೇಶ ಈಡೇರಿದಂತಾಗಿದೆ. ಈ ಸಂಸ್ಕ್ರತಿ ಮುಂದುವರೆಯುವುದೆಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾಲೇಜಿನ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿ ವಿಶ್ವವಿದ್ಯಾಲಯದ ಬ್ಲೂಗಳಾದ ಸುಹಾಸಿನಿ ಮಗದುಮ, ಪ್ರೀತಿ ನಾಂದನಿ, ಜಯಶ್ರೀ ಕಾಳೆ, ಮೇಘಾ ಜಾಧವ, ಪ್ರಿಯಾಂಕಾ ನಾಗಾವೆ, ಓಂಕಾರ ಪಾಟೀಲ, ಓಂಕಾರ ಬಾಳೀಕಾಯಿ, ಕಾತರ್ಿಕ ಸಾಳುಂಕೆ ಮುಂತಾದ ವೀರಾಗ್ರಣಿ ಪಡೆದಕ್ರೀಡಾ ಪಟುಗಳನ್ನು ಸತ್ಕರಿಸಲಾಯಿತು. ಇವರ ವಿವರವನ್ನು ಡಾ.ಎಸ್.ಓ.ಹಲಸಗಿ ಪ್ರಚುರಪಡಿಸಿದರು.
ನೂರಾರು ಕ್ರೀಡೆಗಳಲ್ಲಿ ತಮ್ಮ ಪ್ರತಿಭೆ ಪ್ರದಶರ್ಿಸಿದ ಮತ್ತು ವಿವಿಧ ಸಾಂಸ್ಕ್ರತಿಕ ಸಂಘಗಳ ಸ್ಪಧರ್ೆಗಳಲ್ಲಿ ವಿಜೇತರ ಹೆಸರುಗಳನ್ನು ಪ್ರೊ.ಬಿ.ಡಿ.ಧಾಮಣ್ಣವರ, ಡಾ.ಆರ್.ಎಸ್.ಕಲ್ಲೋಳಿಕರ ಮತ್ತು ಪ್ರೊ.ಜೆ.ಕೆ.ಪಾಟೀಲ ಪ್ರಕಟ ಪಡಿಸಿದರು. ಪ್ರೊ.ಎಸ್.ಎಸ್.ಬಾಗನೆ ಸ್ವಾಗತಿಸಿ ಪರಿಚಯಿಸಿದರು. ಕ್ರೀಡಾ ಕಾಯರ್ಾಧ್ಯಕ್ಷ ಡಾ.ಎಸ್.ಎ.ಕಕರ್ಿ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 