ಬಳ್ಳಾರಿಯಲ್ಲಿ ಹೊಸ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿಯನ್ನಾಗಿ ಮುಂದುವರೆಸಲು ಕರವೇ ಮನವಿ
ಬಳ್ಳಾರಿ 11: ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಒಂದಾಗಿರುವ, ಈಗ ಪ್ರಸ್ತುತ ಪ್ರಧಾನ ಕಛೇರಿ ಇರುವ ಬಳ್ಳಾರಿ ಯನ್ನೇ ಕರ್ನಾಟಕ ರಾಜ್ಯದಲ್ಲಿ ವೀಲೀನಗೊಂಡು ರೂಪುಗೊಳ್ಳುವ ಹೊಸ ಗ್ರಾಮೀಣ ಬ್ಯಾಂಕ್‌ಗೂ ಬಳ್ಳಾರಿಯನ್ನೇ ಪ್ರಧಾನ ಕಚೇರಿಯನ್ನಾಗಿ ಮುಂದುವರೆಸಲು ನಾವು ಈ ಮೂಲಕ ಒತ್ತಾಯಿಸುತ್ತಿದ್ದೇವೆ. ಹಣಕಾಸು ಇಲಾಖೆ, ಕೇಂದ್ರ ಸರ್ಕಾರ ವೀಲೀನ ಪ್ರಕ್ರಿಯೆಯ ಮಾರ್ಗದರ್ಶಿಯ ತತ್ವಗಳ ಮಾನದಂಡಗಳ ಅನುಸಾರ, ಬಳ್ಳಾರಿಯನ್ನು ಪ್ರಧಾನ ಕಛೇರಿಯಾಗಿ ಆಯ್ಕೆ ಮಾಡಲು ಹೆಚ್ಚಿನ ಅವಕಾಶಗಳು ಸಹ ಇರುತ್ತವೆ.
ಕೇಂದ್ರ ಸಯಿರ್ಕಾರಆದೇಶ ಸಂಖ್ಯೆಒಓಈ 7/6/2024-ಖಖಃ ಜಚಿಣಜಜ 04.11.2024 ಮೂಲಕ 'ಒಂದು ರಾಜ್ಯ ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್' ವೀಲೀನ ಪ್ರಕ್ರಿಯೆಗೆ ಸಿದ್ಧತೆ ನಡೆಸಿರುತ್ತದೆ. ಅಂತೆಯೇ ಅವರ ಪಟ್ಟಿಯಲ್ಲಿ ಕರ್ನಾಟಕದಲ್ಲಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತು ್ತಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವೀಲೀನವೂ ಒಳಗೊಂಡಿರುತ್ತದೆ. ತಮಗೆ ತಿಳಿದಿರುವಂತೆ ಈ ಗ್ರಾಮೀಣ ಬ್ಯಾಂಕ್ ಕೇಂದ್ರ ಸರ್ಕಾರ 50ಅ, ಪ್ರೇರಕ ಬ್ಯಾಂಕ್ 35ಅ ಮತ್ತು ರಾಜ್ಯ ಸರ್ಕಾರದ 15ಅ ಬಂಡವಾಳ ಹೊಂದಿರುತ್ತದೆ.
ಕೇಂದ್ರ ಸರ್ಕಾರದ ಆದೇಶದನ್ವಯ ಮಾಜಿ ಪ್ರಧಾನಿ ಇಂದಿಉ್ಫ ಗಾಂಧಿಯವರ ಕನಸಿನ ಆರ್ಥಿಕ ಸಂಸ್ಥೆಯಾದ ದಕ್ಷಿಣ ಭಾರತದಲ್ಲಿ ಮೊದಲನೇ ಬ್ಯಾಂಕ್ ಆಗಿ ತುಂಗಭದ್ರಾ ಗ್ರಾಮೀಣ ಬ್ಯಾಂಕ್, ಬಳ್ಳಾರಿಯಲ್ಲಿ ಉಗಮವಾಯಿತು ಮತ್ತು ಬಳ್ಳಾರಿಯನ್ನು ಪ್ರಧಾನ ಕಛೇರಿಯನ್ನಾಗಿ ಘೋಷಿಸಲಾಯಿತು. ಬಳ್ಳಾರಿ ಕೇಂದ್ರ ಸ್ಥಳದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದ ತುಂಗಭದ್ರಾ ಗ್ರಾಮೀಣ ಬ್ಯಾಂಕ್ ಪ್ರಾರಂಭವಾದ ಕೆಲವೇ ವರ್ಷಗಳಲ್ಲಿಯೇ ಮೂರು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಜನತೆಯ ಮನೆಯ ಬ್ಯಾಂಕ್ ಆಗಿ ಬೆಳೆಯಿತು. ವರ್ಷ ವರ್ಷಕ್ಕೂ ಗ್ರಾಮೀಣ ಅಭಿವೃದ್ದಿಯಲ್ಲಿ ದಾಪುಗಾಲು ಹಾಕಿ, ಪ್ರಾರಂಭದಿಂದಲೂ ಲಾಭಗಳಿಸಿದ ಬ್ಯಾಂಕ್ ಎಂದು ಹೆಗ್ಗಳಿಕೆಗೆ ಗಳಿಸಿತು. ಅಂದಿನಿಂದ 2019 ರವರೆಗೆ ಅನೇಕ ವೀಲೀನ ಪ್ರಕ್ರಿಯೆಗಳಾಗಿ ದೇಶದಾದ್ಯಂತ 196 ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ ಇಂದಿಗೆ 43 ಆಗಿರುತ್ತದೆ.
ಮೊದಲನೇಯ ಪುನರ್‌ರಚನೆ ಕಾಲದಲ್ಲಿ, ಅಂದಿನ ತುಂಗಭದ್ರ, ಚಿತ್ರದುರ್ಗ, ಕೋಲಾರ, ಸಹ್ಯಾದ್ರಿ ಗ್ರಾಮೀಣ ಬ್ಯಾಂಕ್‌ಗಳ ವೀಲೀನಗಳಿಂದಾಗಿ ಪ್ರಗತಿ ಗ್ರಾಮೀಣ ಬ್ಯಾಂಕ್ ಆಗಿ ಪುನರ್ ನಾಮಕರಣಗೊಂಡು ತನ್ನ ಕಾರ್ಯ ವ್ಯಾಪ್ತಿಯನ್ನು ಬಳ್ಳಾರಿ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿತು. ಪುನರ್ ರಚನೆಗೊಂಡ ಗ್ರಾಮೀಣ ಬ್ಯಾಂಕ್' ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಪ್ರಧಾನ ಕಛೇರಿ ಬಳ್ಳಾರಿಯಲ್ಲಿ ಮುಂದುವರೆಯಿತು.
ಎರಡನೇಯ ಪುನರ್ ರಚನೆಯನ್ನು ಕೇಂದ್ರ ಸರಕಾರ ಪ್ರಕಟಿಸಿದ್ದು, ಈ ಹಿಂದಿನ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ್ನು ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ವಿಲಿನಗೊಳಿಸುವ ಮೂಲಕ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ರೂಪಗೊಂಡಿತು. ಕೃಷ್ಣಾ ಗ್ರಾಮೀಣ ಬ್ಯಾಂಕ್ ಕಾರ್ಯವ್ಯಾಪ್ತಿಯ ಜಿಲ್ಲೆಗಳಾದ ಕಲಬುರ್ಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಗಳು ವೀಲೀನವಾಗುವುದರ ಮೂಲಕ ಕಲ್ಯಾಣ ಕರ್ನಾಟಕದ ಒಟ್ಟು ಆರು ಜಿಲ್ಲೆಗಳು ಬ್ಯಾಂಕಿನ ಕಾರ್ಯ ವ್ಯಾಪ್ತಿಗೆ ಒಳಗೊಂಡವು. ಕಲ್ಯಾಣ ಕರ್ನಾಟಕದ ಗ್ರಾಮೀಣ ಪ್ರದೇಶಗಳ ಏಳಿಗೆಗಾಗಿ ಕಂಕಣ ಬದ್ದವಾದ ಈ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಛೇರಿಯನ್ನು ಕೇಂದ್ರ ಸರಕಾರ ಮತ್ತೊಮ್ಮೆ ಬಳ್ಳಾರಿಯಲ್ಲಿ ಸ್ಥಾಪಿಸಿತು. ಈ ಮೂಲಕ ಬಳ್ಳಾರಿಯಲ್ಲಿ ಕೇಂದ್ರ ಕಛೇರಿ ತನ್ನ ಗ್ರಾಮೀಣ ಆರ್ಥಿಕ ಬಲಗೊಳ್ಳುವಿಕೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿತು.
ಮೂರನೇಯ ವೀಲೀನ ಪ್ರಕ್ರಿಯೆಯಲ್ಲಿ, ಈ ಹಿಂದಿನ ಪ್ರಗತಿ ಕೃಷ್ಣಗ್ರಾಮೀಣ ಬ್ಯಾಂಕ್ (ಕೆನರಾ ಬ್ಯಾಂಕ್ ಪ್ರಾಯೋಜಕತ್ವದ) ಹಾಗು ಹಳೆಯ ಮೈಸೂರು ಭಾಗದ ಕಾವೇರಿ ಗ್ರಾಮೀಣ ಬ್ಯಾಂಕ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕತ್ವದ) ವೀಲೀನಗೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ರೂಪುಗೊಂಡಿತು. ಮತ್ತು ಈ ವೀಲೀನ ನಂತರವೂ ಬಳ್ಳಾರಿಯನ್ನೇ ಪ್ರಧಾನ ಕಛೇರಿಯಾಗಿ ಮುಂದುವರಿಸಲಾಯಿತು. ಕಲ್ಯಾಣ ಕರ್ನಾಟಕ ಮತ್ತು ಹಳೆಯ ಮೈಸೂರು ಭಾಗದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಭಾಗಗಳನ್ನು ಹೊಂದಿ ಕರ್ನಾಟಕದಲ್ಲಿ ಬೃಹತ್ ಗ್ರಾಮೀಣ ಬ್ಯಾಂಕ್ ಆಗಿ ರೂಪುಗೊಂಡು, ದೇಶದ ಕೆಲವೇ ಕೆಲವು ಬೃಹತ್‌ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಒಂದೆನಿಸಿತು.
ಮೇಲಿನ ಎಲ್ಲ ವೀಲೀನ ಪ್ರಕ್ರಿಯೆಗಳಲ್ಲಿಯೂ ಕಲ್ಯಾಣಕರ್ನಾಟಕದ ಜಿಲ್ಲೆಗಳಲ್ಲಿ ಒಂದಾಗಿರುವ ಬಳ್ಳಾರಿಯೇ ಪ್ರಧಾನಕಛೇರಿಯಾಗಿ ಮುಂದುವರೆದಿರುತ್ತದೆ.2019 ರಿಂದಕರ್ನಾಟಕರಾಜ್ಯದ್ಯಂತಎಲ್ಲಗ್ರಾಮೀಣ ಬ್ಯಾಂಕ್ ಗಳು ವೀಲೀನಗೊಂಡುಎರಡು ಮಾತ್ರಗ್ರಾಮೀಣ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿದ್ದು ಅವುಗಳೆಂದರೆ, ಕರ್ನಾಟಕಗ್ರಾಮೀಣ ಬ್ಯಾಂಕ್ ಮತ್ತುಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್.
ಕಲ್ಯಾಣಕರ್ನಾಟಕದ ಜಿಲ್ಲೆಗಳಾಗಿರುವ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಮತ್ತು ವಿಜಯನಗರ ಜಿಲ್ಲೆಗಳಲ್ಲಿನ ಹಳ್ಳಿಗಳಲ್ಲಿನ ತೀರ ಬಡವರ, ಆರ್ಥಿಕ ಹಿಂದುಳಿದವರ, ಬಡರೈತರ, ರೈತಕಾರ್ಮಿಕರ, ಬಡ ಮತ್ತು ಸಣ್ಣ ಕುಶಲಕರ್ಮಿಗಳ ಆರ್ಥಿಕ ಬಲಗೊಳ್ಳುವಿಕೆಯಲ್ಲಿ ಬ್ಯಾಂಕ್ ಕಳೆದ ನಾಲ್ಕು ದಶಕಗಳಿಂದ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿ ಮುನ್ನಡೆದಿರುತ್ತದೆ. ಅಲ್ಲದೇ ಈ ಭಾಗದಜನರಿಗೆ ಸುಲಭವಾಗಿಎಟಕುವಆರ್ಥಿಕ ಸಂಸ್ಥೆಯಾಗಿದೆ.