ಕನ್ನಡ ನಾಡು, ನುಡಿ ರಕ್ಷಣೆಗೆ ಕರವೇ ಬದ್ಧ: ಶ್ರೀಶೈಲ ಮುಳಜಿ

ಕನ್ನಡ ನಾಡು, ನುಡಿ ರಕ್ಷಣೆಗೆ ಕರವೇ ಬದ್ಧ: ಶ್ರೀಶೈಲ ಮುಳಜಿ Kannada is committed to protecting the language: Srishaila Mulaji

ಕನ್ನಡ ನಾಡು, ನುಡಿ ರಕ್ಷಣೆಗೆ ಕರವೇ ಬದ್ಧ: ಶ್ರೀಶೈಲ ಮುಳಜಿ 

ದೇವರಹಿಪ್ಪರಗಿ 26: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ರಕ್ಷಣೆಗೆ ಸದಾ ಸಿದ್ಧ ಎಂದು ಕರವೇ ಜಿಲ್ಲಾ ಅಧ್ಯಕ್ಷ ಶ್ರೀಶೈಲ ಮುಳಜಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರದಂದು ಹಮ್ಮಿಕೊಂಡಿದ್ದ ಕರವೇ(ಪ್ರವೀಣ ಶೆಟ್ಟಿ ಬಣ) ತಾಲೂಕು ಘಟಕದ ಅಧ್ಯಕ್ಷರ ಆಯ್ಕೆ ಹಾಗೂ ಸದಸ್ಯತ್ವ ಅಭಿಯಾನದ ಅಧ್ಯಕ್ಷತೆಯನ್ನು ವಹಿಸಿ,ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಪದಾಧಿಕಾರಿಗಳ ಸರ್ವಾನು ಮತದ ನಿರ್ಧಾರದಂತೆ ರಾಜ್ಯ ಅಧ್ಯಕ್ಷರಾದ ಪ್ರವೀಣಕುಮಾರ ಶೆಟ್ಟಿ ಅವರ ಆದೇಶದ ಮೇರೆಗೆ ಕರವೇ ತಾಲೂಕು ಘಟಕದ ಅಧ್ಯಕ್ಷರಾಗಿ ರಹೀಮಾನ್ ಕನಕಲ್ ಅವರನ್ನು ಆಯ್ಕೆ ಮಾಡಿ ನೇಮಕಾತಿ ಪತ್ರವನ್ನು ನೀಡಲಾಯಿತು. ಇನ್ನು ಮುಂದೆ ಜಿಲ್ಲೆಯಾದ್ಯಂತ ನಾಡು ನುಡಿ ನೆಲ ಜಲ ಭಾಷೆಯ ವಿಷಯಕ್ಕೆ ಧಕ್ಕೆ ಬಂದಾಗ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು. ಕರವೇ ಜನಪರ, ರೈತಪರ, ವಿದ್ಯಾರ್ಥಿಗಳ ಪರ ಹಾಗೂ ಮಹಿಳೆಯರ ಪರ ಕೆಲಸ ಮಾಡಿ ನ್ಯಾಯ ಒದಗಿಸುವ ಕೆಲಸ ಮಾಡಿದೆ. ನ್ಯಾಯಪರ ಕೆಲಸಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದು. ಇನ್ನು ಮುಂದಿನ ದಿನಗಳಲ್ಲಿ ತಾಲೂಕು ಘಟಕದ ಪದಾಧಿಕಾರಿಗಳು, ನಗರ ಘಟಕ ಹಾಗೂ ಎಲ್ಲಾ ಗ್ರಾಮಗಳಲ್ಲೂ ಕರವೇ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು. ಸದಾ ಹೋರಾಟಕ್ಕೆ ಸಿದ್ದರಾಗಿ ಎಂದು ಕರೆ ಕೊಟ್ಟರು.ರಾಜ್ಯ ಉಪಾಧ್ಯಕ್ಷರಾದ ಬಸವರಾಜ ತಾಳಿಕೋಟಿ ಅವರು ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಒಂದು ಜಾತಿ, ಪಕ್ಷಕ್ಕೆ ಸೀಮಿತವಾಗಿರದೆ ಕರ್ನಾಟಕದ ನಾಡು, ನುಡಿ, ಜಲದ ಬಗ್ಗೆ ನಿರಂತರ ಹೋರಾಟ ನಡೆಸುತ್ತಿರುವ ಸಂಘಟನೆಯಾಗಿದೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಕಬೂಲ ಕೊಕಟನೂರ ಅವರು ಮಾತನಾಡಿ, ಕರವೇ ಸಂಘಟನೆಗೆ ಅದರದೇ ಆದ ಹೋರಾಟದ ಇತಿಹಾಸವಿದೆ, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ ಧಕ್ಕೆಯಾದ ಸಂದರ್ಭದಲ್ಲಿ ದಿಟ್ಟ ಧ್ವನಿ ಎತ್ತುವ ಮೂಲಕ ಹೋರಾಟ ನಡೆಸುತ್ತಿರುವ ಸಂಘಟನೆಯಾಗಿದೆ ಎಂದು ಹೇಳಿದರು.ನೂತನ ತಾಲೂಕು ಘಟಕದ ಅಧ್ಯಕ್ಷರಾದ ರಹೀಮಾನ್ ಕನಕಲ್ ಅವರು ಮಾತನಾಡಿ, ಕರವೇ ಸಂಘಟನೆ ನಿತ್ಯ ನೊಂದವರ ಹಾಗೂ ಶೋಷಿತರ ಪರವಾಗಿ ಬರುವಂತ ದಿನಗಳಲ್ಲಿ ನ್ಯಾಯ ಒದಗಿಸುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಇದೇ ಸಂದರ್ಭದಲ್ಲಿ ಕರವೇ ಜಿಲ್ಲಾ ಸಂಚಾಲಕರಾದ ಶ್ರೀಕಾಂತ ರಾಠೋಡ,ಕಾನಿಪ ತಾಲೂಕು ಅಧ್ಯಕ್ಷ ಸಂಗಮೇಶ ಉತ್ನಾಳ, ಬ.ಬಾ.ಪಿ.ಎಲ್‌.ಡಿ ಬ್ಯಾಂಕ ಉಪಾಧ್ಯಕ್ಷರಾದ ಸಾಹೇಬಗೌಡ ಉತ್ನಾಳ, ಕರವೇ ಮುಖಂಡರುಗಳಾದ ನಾಗು ಕಮತಗಿ, ಅಶೋಕ ಗೊಲ್ಲರ,ಹಸನ್ ಬಾಗವಾನ, ಸುನಿಲ್ ಕನಮಡಿ, ಹುಸೇನ ಕೊಕಟನೂರ, ಹಸನ್ ನದಾಫ್, ಸಂತೋಷ ರಾಠೋಡ, ಹಬ್ಬಾಸಾಲಿ ಮಣೂರ, ರಾಜು ಗೊಲ್ಲರ ಸೇರಿದಂತೆ ತಾಲೂಕಿನ ಕನ್ನಡ ಪರ ಸಂಘಟನೆಯ ಹೋರಾಟಗಾರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ನಿರೂಪಿಸಿ, ವಂದಿಸಿದರು.