ಕನ್ನಡ ಕನ್ನಡಿಗ ಕರ್ನಾಟಕ” ಉಪನ್ಯಾಸ ಕಾರ್ಯಕ್ರಮ ಉದ್ಘಾಟಿನೆ
Kannada Kannadiga Karnataka” lecture program inaugurated
ಧಾರವಾಡ 22: ವಿದ್ಯಾರ್ಥಿಗಳಿಗೆ ನಮ್ಮ ಕನ್ನಡದ ಕವಿಗಳೇ ಆದರ್ಶ.ಡಿ. ಎಸ್‌ಕರ್ಕಿ, ಹುಯಿಲಗೋಳ ನಾರಾಯಣರಾವ, ಸಿದ್ದಯ್ಯ ಪುರಾಣಿಕ, ಕುವೆಂಪು, ಚೆನ್ನವೀರಕಣ ವಿಯಂತಹ ಮಹಾನ್ ಕನ್ನಡದ ಕವಿಗಳು ಸ್ವತಃ ಕನ್ನಡಾಭಿಮಾನದ ಹಾಡು ರಚಿಸಿ, ಹಾಡಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು ಎಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಅವರು ಗದಗ ಜಿಲ್ಲೆಯ ಹುಲಕೋಟಿಯ ಕೆ.ಎಚ್.ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕವಿವ ಸಂಘವು ಆಯೋಜಿಸಿದ್ದ “ಕನ್ನಡ ಕನ್ನಡಿಗ ಕರ್ನಾಟಕ” ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಕ್ಕರಿ ಬಾಳಾಚಾರ್ಯರು ಧಾರವಾಡದಲ್ಲಿ ಜರುಗಿದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಣಕಾಸಿನ ಮುಗ್ಗಟ್ಟಿನಿಂದ ಸ್ಥಗಿತಗೊಳ್ಳುವ ಸಂದರ್ಭ ಬಂದಾಗ ಪ್ರತಿಯೊಬ್ಬರ ಮನೆ ಬಾಗಿಲಿಗೆ ಹೋಗಿ ಕನ್ನಡದ ದಾಸಯ್ಯ ಬಂದಿದ್ದಾನೆಂದು ಜೋಳಿಗೆ ಹಾಕಿ ಹಣ ಸಂಗ್ರಹಿಸಿದರು. ಕವಿವ ಸಂಘವು 136 ವರ್ಷಗಳಿಂದ ಒಡೆದಕನ್ನಡಿಗರ ಮನಸ್ಸುಕಟ್ಟುವ ಕಾರ್ಯ ಮಾಡುತ್ತಿದೆ. ಜಾತಿಧರ್ಮದ ಹೆಸರಿನಲ್ಲಿಕನ್ನಡ ಭಾಷೆ ಆಪತ್ತಿನಲ್ಲಿದ್ದು ಯುವಕರು ಕನ್ನಡಕಟ್ಟಲು ಸಂಘಟನೆ ಮೂಲಕ ಹೋರಾಡಬೇಕು. ಇಂದುಜಾತಿ, ಧರ್ಮಗಳು ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳು ಹುಸಿ ಬರವಸೆಗಳಿಗೆ ಒಳಗಾಗಬಾರದು.ನಿಮ್ಮಲ್ಲೂಒಂದುದೊಡ್ಡ ಶಕ್ತಿ ಇದೆ.ನಿಮ್ಮ ಶಕ್ತಿ ಸಾಮರ್ಥ್ಯವನ್ನು ನವ ಸಮಾಜ ನಿರ್ಮಾಣಕ್ಕೆ ತೊಡಗಿಸಬೇಕು. ಸಮಾಜ ಬದಲಿಸುವ ದೊಡ್ಡ ಶಕ್ತಿ ನಿಮ್ಮಲ್ಲಿದೆ.ನಿಮ್ಮ ಶಕ್ತಿ ಬಗ್ಗೆ ನಿಮಗೆ ನಂಬಿಕೆ ಇರಲೆಂದು ತಿಳಿಸಿದರು.
ಅತಿಥಿಗಳಾದ ಡಾ.ಅರ್ಜುನ್ ಗೊಳಸಂಗಿ ಮಾತನಾಡಿ, ನೆರೆಯ ತಮಿಳ ಹಾಗೂ ತೆಲುಗರಿ ಗಿರುವಷ್ಟು ಭಾಷಾಭಿಮಾನ ನಮ್ಮಲ್ಲಿಲ್ಲ. ಕನ್ನಡಒಂದು ಭಾಷೆ ಮಾತ್ರವಲ್ಲಅದು ನಾಡು, ನಮ್ಮಜೀವನ ವಿಧಾನ, ಭಾಷೆ ಬಗ್ಗೆ ಅನ್ಯತಾದ್ವೇಷ ಬೇಡ. ಕನ್ನಡದಲ್ಲಿ ಮಾತಾಡಿ, ಬರೆದು ವ್ಯವಹರಿಸಿ ಕನ್ನಡ ಭಾಷಾಭಿಮಾನ ಹೊಂದಬೇಕೇ ವಿನಹ ಭಾಷೆ ಬಗ್ಗೆ ದುರಭಿಮಾನಿಗಳಾಗಬಾರದು ಎಂದು ಹೇಳಿದರು.
ಪ್ರಾಚಾರ್ಯರಾದ ಡಾ.ಎಸ್. ಎಂ. ಕುರಿಉಪನ್ಯಾಸ ನೀಡಿ, ಕವಿವ ಸಂಘಕ್ಕೆ 136 ವರ್ಷಗಳ ಇತಿಹಾಸವಿದೆ. ನಾಡೋಜ ಡಾ.ಪಾಟೀಲ ಪುಟ್ಟಪ್ಪನವರು ಅಧ್ಯಕ್ಷರಾಗಿ 53 ವರ್ಷ ಸುದೀರ್ಘವಾಗಿ ಸಂಘ ಮುನ್ನಡೆಸಿದರು. ಕನ್ನಡ ನಾಡಿನಷ್ಟು ಸಮೃದ್ಧ ಶ್ರೀಮಂತ ಬೇರೆ ರಾಜ್ಯವಿಲ್ಲ ದಖನ್ ಪ್ರಸ್ಥ ಭೂಮಿಯ ಆಯಕಟ್ಟಿನ ಸ್ಥಳದಲ್ಲಿರುವ ಈ ರಾಜ್ಯಜನರ ವಾಸಕ್ಕೆ ಕಲೆ ಸಂಸ್ಕೃತಿಯ ವಿಕಾಸಕ್ಕೆ ಅನುಕೂಲಕರ ಸ್ಥಳವಾಗಿದೆ.ಕನ್ನಡದ ಅನೇಕ ಶಾಸನಗಳು ಕನ್ನಡ ನಾಡಿನ ಜನರ ಗುಣ ಸ್ವಭಾವ ಸಮೃದ್ಧತೆ ಉದಾರತೆಯ ಬಗ್ಗೆ ಮುಕ್ತ ಕಂಠದಿಂದ ಹೊಗಳಿವೆ.ಕನ್ನಡಿಗರಾದ ನಾವು ಕನ್ನಡಕಟ್ಟುವ ಕಾರ್ಯದಲ್ಲಿ ಶಕ್ತಿಯುತವಾಗಿ ಸತ್ವಶಾಲಿಗಳಾಗಿ ಮಾಡೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯಡಾ ಸುಧಾಕೌಜಗೇರಿ ಮಾತನಾಡಿದರು. ಡಾ ಮಹಾನಂದ ಹಿರೇಮಠ ಸ್ವಾಗತಿಸಿದರು. ಕವಿವ ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಸಿ ನಿರೂಪಿಸಿದರು, ಡಾ ಮಂಜುನಾಥ್ ತ್ಯಾಲಗಡಿ ವಂದಿಸಿದರು. ಡಾ. ರಮೇಶ ಹುಲಕುಂದಕಾರ‌್ಯಕ್ರಮ ಸಂಯೋಜಿಸಿದ್ದರು.
ಡಾ. ಲಕ್ಷ್ಮಣ ಮುಳುಗುಂದ, ಡಾ.ಅಣ್ಣಪ್ಪ ಹಂಡೆ, ಡಾ.ಉಲ್ಲಾಸ ಶೆಟ್ಟಿಇತರ ಬೋಧಕ, ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳಿದ್ದರೂ .ಕೊತಬಾಳದ ಶಂಕ್ರಣ್ಣ ಸಂಕಣ್ಣವರ್ ತಂಡದಿಂದ ನಾಡು ನುಡಿ ಜಾಗೃತ ಹಾಡುಗಳು ಪ್ರಸ್ತುತವಾದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 