ಕನಕದಾಸರು ಭಕ್ತಿಯ ಪ್ರತೀಕ: ಶಾಸಕ ವಿಶ್ವಾಸ ವೈದ್ಯ
Kanakadasa is a symbol of devotion: MLA Vishwas Vaidya
ಕನಕದಾಸರು ಭಕ್ತಿಯ ಪ್ರತೀಕ: ಶಾಸಕ ವಿಶ್ವಾಸ ವೈದ್ಯ
ಸವದತ್ತಿ 08: ಕನಕದಾಸರು ಕೇವಲ ಒಬ್ಬ ಕವಿ ಅಥವಾ ಸಂತರು ಮಾತ್ರವಲ್ಲ ಅವರು ಜಾತ್ಯತೀತತೆ ಮತ್ತು ಭಕ್ತಿಯ ಪ್ರತೀಕ ಎಂದು ಶಾಸಕ ವಿಶ್ವಾಸ ವೈದ್ಯ ಅವರು ಹೇಳಿದರು. ಇಲ್ಲಿನ ಗುರುಭವನದಲ್ಲಿ ತಾಲೂಕಾ ಆಡಳಿತ ,ತಾಲೂಕಾ ಪಂಚಾಯತ, ಹಾಗೂ ಪುರಸಭೆ, ಇವರ ಸಂಯುಕ್ತ ಆಶ್ರಯದಲ್ಲಿ ಆಚರಿಸಿದ ಭಕ್ತ ಕನಕದಾಸರ ಜಯಂತಿ ಉತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಾವು ಸರ್ಕಾರದ ಆದೇಶದ ಪ್ರಕಾರ ಭಕ್ತ ಕನಕದಾಸರ 538 ನೇ ಜಯಂತಿಯನ್ನು ಉತ್ಸವದಿಂದ ಆಚರಿಸುತ್ತಿದ್ದೇವೆ ದಾಸ ಶ್ರೇಷ್ಠ ಕನಕದಾಸ ಸಮಾಜದಲ್ಲಿ ಜಾತಿ ಪದ್ದತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ಧ ದ್ವನಿ ಎತ್ತಿ ಸಮಾಜದ ಅಂಕುಡೊಂಕುಗಳನದನ್ನುತಿದ್ದಿದ ಮಹಾನ ದಾರ್ಶನಿಕರು ಎಂದರು. ಕನಕದಾಸರು ಒಂದು ವರ್ಗಕ್ಕೆ ಸೀಮಿತವಾಗಿದೆ, ಅವರು ಕಾವ್ಯ ಹಾಗೂ ಕಿರ್ತಿನೆಗಳ ಮೂಲಕ ಸಮಾಜದಲ್ಲಿ ಬೇರೂರಿದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿ, ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿ,ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿ ವಿಶ್ವಾಮಾನವರಾದರು. ಅವರ ಪ್ರಸಿದ್ಧ ಕೀರ್ತನೆಗಳಲ್ಲಿ ಒಂದಾದ ಕುಲ ಕುವೆಂದು ಹೊಡೆದಾಡಿದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ, ಇದು ಜಾತಿ ತಾರತಮ್ಯದ ವಿರುದ್ಧ ಬಲವಾದ ಸಂದೇಶವನ್ನು ನೀಡಿದರು.
ತಾಲೂಕಿನ ಎಲ್ಲ ಗ್ರಾಮಗಳ ಸಮಾಜದವರನ್ನು ಕೂಡಿಸುವುದು ಕಷ್ಟವಾಗುತ್ತದೆ ಆದ್ದರಿಂದ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಕನಕದಾಸರ ಜಯಂತಿಯ ಉತ್ಸವವನ್ನು ಆಚರಿಸುತ್ತಿದ್ದೇವೆ ಅದೇ ರೀತಿಯಾಗಿ ಸವದತ್ತಿಯಲ್ಲಿ ಕೂಡ ಕನಕದಾಸರ ಭವ್ಯವಾದ ಮೆರವಣಿಗೆ ಮತ್ತು ಹಾಲು ಕೆಡಬಹುದು ಆದರೆ ಹಾಲುಮತದ ಸಮಾಜ ಎಂದಿಗೂ ಕೆಡುವುದಿಲ್ಲ ಸಮಾಜದ ಜನರು ಚುನಾವಣೆಯಲ್ಲಿ ನನಗೆ ಹೆಚ್ಚಿನ ಅಂತರಗಳ ಮತಗಳನ್ನು ನೀಡಿ ಆಯ್ಕೆ ಮಾಡಿದ್ದಾರೆ ಆದ್ದರಿಂದ ಈ ಹಾಲುಮತ ಸಮಾಜವನ್ನು ನಾನು ಎಂದಿಗೂ ಮರೆಯುವುದಿಲ್ಲ. ಸಂಗೊಳ್ಳಿ ರಾಯಣ್ಣನ ಸರ್ಕಲ್ ಹತ್ತಿರ ಸುಮಾರು 20 ಲಕ್ಷಗಳ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗುವುದು ಮತ್ತು ಶಾಂತಿನಗರದ ಹತ್ತಿರ ಎರಡು ಎಕರೆ ಜಾಗೆಯನ್ನು ಮಾನ್ಯ ಮುಖ್ಯಮಂತ್ರಿಗಳಿಂದ ಮಂಜುರಾತಿ ಮಾಡಿಸಿ ನಂತರ ಅಲ್ಲಿ 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕನಕ ಭವನವನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಸ್ಥಳೀಯ ಬೆಳ್ಳುಬ್ಬಿ ಕಾಲೇಜಿನ ಉಪನ್ಯಾಸಕರಾದ ಅರುಂಧತಿ ಬದಾಮಿ ಅವರು ಭಕ್ತ ಕನಕದಾಸರ ಕುರಿತು ಉಪನ್ಯಾಸ ನೀಡಿದರು.
ಈ ವೇಳೆ ಸಮಾಜದ ಜನರು ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಸಮಾಜದ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಪಾಸಾದ ವಿದ್ಯಾರ್ಥಿಗಳಿಗೆ ತಾಲೂಕಾ ಆಡಳಿತ ವತಿಯಿಂದ ಶಾಸಕ ವಿಶ್ವಾಸ್ ವೈದ್ಯ ಅವರು ಸನ್ಮಾನಿಸಿ ಗೌರವಿಸಿದರು. ರವೀಂದ್ರ ಯಲಿಗಾರ,ಮತ್ತು ಹಾಲುಮತ ಸಮಾಜದ ಮುಖಂಡರು ಜಿ. ಜಿ. ಕಣವಿ, ಪಕೀರ್ಪ ಹದ್ದನ್ನವರ, ಕಲ್ಲಪ್ಪ ಪೂಜೆರ, ಸಿದ್ದಪ್ಪ ಗೊರವಣಕೊಳ್ಳ ಎಫ್ ವೈ ಗಾಜಿ ನೀಲಪ್ಪ ಅಣ್ಣಿಗೇರಿ,ಸೋಮು ಮಲ್ಲೂರ (ಮೌರ್ಯ) ಈ ಸಂದರ್ಭದಲ್ಲಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಚೆನ್ನವ್ವ ಹುಚ್ಚನ್ನವರ, ಕೌಶಲ್ಯ ಮೊಟೇಕರ, ಸಿ ಪಿ ಐ ಧರ್ಮಾಕರ ಧರ್ಮಟ್ಟಿ,ಗ್ರೇಡ್ 2 ತಹಶೀಲ್ದಾರ ಎಮ್. ಎನ್. ಮಠದ,ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎ. ಖಾಜಿ ತಾಪಂ ಇಓ ಆನಂದ ಬಡಕುಂದ್ರಿ,ಮೈತ್ರಾದೇವಿ ವಸ್ತ್ರ, ಎಮ್. ಎಮ್. ಕದಂ, ಬಸವರಾಜ ಅಯ್ಯನಗೌಡರ, ಶ್ರೀಪಾದ್ ಸಬನಿಸ, ಅಶೋಕ ಮುರಗೋಡ, ಡಾ.ಅನಿಲ ಮರಲಿಂಗನವರ, ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಹಾಲುಮತ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 