ಕಲ್ಲಿನಾಥೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು
Kallinatheshwara Jatra Mahotsav was celebrated with great pomp
ಕಲ್ಲಿನಾಥೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು
ಕುಕನೂರು 09: ತಾಲೂಕಿನ ಶಿರೂರು ಗ್ರಾಮದ ಕಲ್ಲಿನಾಥೇಶ್ವರ ಜಾತ್ರಾ ಮಹೋತ್ಸವವು ಸೋಮವಾರದಂದು ಸಾಯಂಕಾಲ 5 ಗಂಟೆಗೆ ನೆರೆದ ಸಾವಿರಾರು ಭಕ್ತಾಧಿಗಳ ಜಯಘೋಷದೊಂದಿಗೆ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಬೆದವಟ್ಟಿ ಶ್ರೀಗಳು ವಹಿಸಿಕೊಂಡಿದ್ದರು. ಈ ವೇಳೆ ಶಿರೂರು ಭಕ್ತರಿಂದ ಮಂಗಳೂರಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳಿಗೆ ತುಲಾಭಾರ ಸೇವೆ ನಡೆಯಿತು.ಸಾನಿಧ್ಯ ವಹಿಸಿದ ಕುಕನೂರು ಅನ್ನದಾನೀಶ್ವರ ಮಠದ ಮಹಾದೇವ ಸ್ವಾಮಿಜೀಗಳು ಆಶಿರ್ವಚನ ನೀಡಿದರು. ವೇದಿಕೆಯಲ್ಲಿ ಯಲಬುರ್ಗಾ ಶ್ರೀಧರ ಮುರಡಿಮಠ ಸ್ವಾಮೀಜಿಗಳು, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಚಿನ್ನಪ್ಪ ತಳವಾರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಶಿವಪ್ರಸಾದ, ಸುಭಾಸರೆಡ್ಡಿ ಮಾದಿನೂರು ಉಪಸ್ಥಿತರಿದ್ದರು.ಜಾತ್ರಾ ಮಹೋತ್ಸವದ ಅಂಗವಾಗಿ ಏ.06 ರವಿವಾರದಂದು ಬೆಳಗ್ಗೆ 6ಗಂಟೆಗೆ ಗ್ರಾಮದೇವತೆಗೆ ಉಡಿ ತುಂಬುವ ಕಾರ್ಯಕ್ರಮ ನಂತರ ಬೆಳಗ್ಗೆ 9 ಗಂಟೆಗೆ ಕುಂಭೋತ್ಸವ ಹಾಗೂ ಲಘು ರಥೋತ್ಸವ ಜರುಗಿತು.ಏ.07ರ ಸೋಮವಾರದಂದು ಬೆಳಗ್ಗೆ ಕ್ಷೇತ್ರನಾಥನಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಂತರ 11.30ಕ್ಕೆ ಧರ್ಮಸಭೆ, ಮಧ್ಯಾಹ್ನ ಮಹಾ ಪ್ರಸಾದ ವಿತರಣೆ ನಡೆಯಿತು.ರಥೋತ್ಸವಕ್ಕೆ ಯಡಿಯಾಪೂರ ಭಕ್ತಾಧಿಗಳಿಂದ ತೇರಿನ ಹಗ್ಗ, ಬೆದವಟ್ಟಿ ಭಕ್ತಾಧಿಗಳಿಂದ ನಂದಿಕೋಲು, ಮಂಗಳೂರಿನ ಭಕ್ತಾಧಿಗಳಿಂದ ಜ್ಯಾನಗೋಡ ಸೇವೆ ಹಾಗೂ ತಿಪ್ಪರಸನಾಳ, ಮುತ್ತಾಳ ಭಕ್ತಾಧಿಗಳಿಂದ ಹೂವಿನ ಮಾಲೆ, ಶಿರೂರು ಗ್ರಾಮದ ಭಕ್ತಾಧಿಗಳಿಂದ ರುದ್ರಾಕ್ಷಿ ಮಾಲೆ, ಉತ್ಸವ ಮೂರ್ತಿ, ತೇರಿನ ಕಳಸ, ಕೋನಾಪೂರ ಭಕ್ತಾಧಿಗಳಿಂದ ಗಗ್ಗರಿ ಕೋಲು ಸಕಲ ವಾದ್ಯ ಮೇಳಗಳೊಂದಿಗೆ ಶಿರೂರು ಸರಕಾರಿ ನೌಕರರೊಂದಿಗೆ ಮೆರವಣಿಗೆ ಜರುಗಿತು.
ನಂತರ ಸಾಯಂಕಾಲ 5 ಗಂಟೆಗೆ ಜರುಗಿದ ರಥೋತ್ಸವದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾಧಿಗಳು ರಥೋತ್ಸವಕ್ಕೆ ಉತ್ತತ್ತಿ ಬಾಳೆಹಣ್ಣು ಸಮರ್ಿಸಿ ಭಕ್ತಿ ಮೆರೆದರು. ನಂತರ ಇದೇ ದಿನ ರಾತ್ರಿ 10.30ಕ್ಕೆ ಗ್ರಾಮದವರಿಂದ ಹೆಣ್ಣಿಗೆ ಶೀಲ ಸಿಂಗಾರ, ಗಂಡಿಗೆ ಬುದ್ದಿ ಬಂಗಾರ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಲ್ಲಿನಾಥೇಶ್ವರ ಟ್ರಸ್ಟ್ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ವೀರುಪಾಕ್ಷಪ್ಪಗೌಡ್ರ ಹಿರೇಗೌಡ್ರ, ಈಶಪ್ಪ ಶಿರೂರು, ಶಿವಬಸಯ್ಯ ಮುತ್ತಿನಪೆಂಡಿಮಠ, ಸುಮಂತ ಹಿರೇಮಠ, ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಜ್ಯೋತಿ, ವಿರೇಂದ್ರರೆಡ್ಡಿ ಮಾದಿನೂರ, ಬಸವನಗೌಡ ಹಾಳಕೇರಿ, ಈರ್ಪ ಕಡಗತ್ತಿ, ವಿರೇಶ ಹುಬ್ಬಳ್ಳಿ, ರಾಜೇಂದ್ರಗೌಡ ಪೋಲಿಸ್ ಪಾಟೀಲ್, ಸುರೇಶಗೌಡ ಹಾಳಕೇರಿ, ಮಹಾದೇವಪ್ಪ ಮೇಟಿ, ವಿರೇಶ ಬನ್ನಿಕೊಪ್ಪ, ಮರ್ಧಾನ್ ಸಾಬ ಪಿಂಜಾರ್, ಶರಿಫ್ ಸಾಬ ಅಂಗಡಿ, ಶರಣಪ್ಪ ಮಡಿವಾಳರ ಸೇರಿದಂತೆ ಹಿರಿಯರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 