ಗ್ರಾಮೀಣ ಮಕ್ಕಳಲ್ಲಿನ ಅಗಾಧ ಪ್ರತಿಭೆಯನ್ನು ಗುರುತಿಸಲು ಕಲಿಕೋತ್ಸವ: ಡೋಣೂರ
Kalikotsava to recognize the immense talent among rural children: Donura
ಸಿಂದಗಿ 19: ಗ್ರಾಮೀಣ ಮಕ್ಕಳಲ್ಲಿ ಅಗಾಧವಾದ ಪ್ರತಿಭೆಗಳಿರುತ್ತವೆ ಅದನ್ನು ಹೆಕ್ಕಿ ತೆಗೆಯುವ ವೇದಿಕೆ ಸಿಗದ ಕಾರಣ ಹಿಂದೆ ಬಿದ್ದಿರುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಸರಕಾರ 2002ರಲ್ಲಿ ಪಠ್ಯದ ಜೊತೆಗೆ ಕಲಿಕೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಕ್ಷರ ದಾಸೋಹ ಅಧಿಕಾರಿ ಅರವಿಂದ ಡೋಣೂರ ಹೇಳಿದರು.
ತಾಲೂಕಿನ ಯರಗಲ್ ಬಿ.ಕೆ ಗ್ರಾಮದ ಶ್ರೀ ಸಿದ್ದಶಂಕರಾನಂದ ಸ್ವಾಮಿಜಿ ಪ್ರೌಡಶಾಲೆಯಲ್ಲಿ ಜಿಲ್ಲಾ ಪಂಚಾಯತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂದಗಿ ಇವುಗಳ ಸಹಯೋಗದಲ್ಲಿ ಗಬಸಾವಳಗಿ ಕ್ಲಸ್ಟರ ಮಟ್ಟದ ಕಲಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮಗುವಿನ ಪ್ರಗತಿ ಎಲ್ಲಿ ಅಡಗಿದೆ ಎಂದರೆ ಶಾಲಾ ತರಗತಿ ಕೋಣೆಯಲ್ಲಿ ಅಡಗಿದೆ. ಬರೀ ಅಕ್ಷರ ಜ್ಞಾನ ಪಡೆಯುವುದರಿಂದ ಮಗುವಿನ ಅಭಿವೃದ್ಧಿ ಅಸಾಧ್ಯ ಪ್ರತಿಭೆಗಳಲ್ಲಿ ಬಾಗವಹಿಸುವುದು ಅತ್ಯಗತ್ಯವಾಗಿದೆ ಸೂಪ್ತ ಪ್ರತಿಭೆಗಳನ್ನು ಹೊರ ತೆಗೆಯುವುದೆ ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ ಕಾರಣ ಶಿಕ್ಷಕರು ಶಿಕ್ಷಣದ ಜೊತೆಗೆ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರ ತರುವಲ್ಲಿ ಶಿಕ್ಷಕರ ಜವಾಬ್ದಾರಿ ಎಂದರು. ಅಧ್ಯಕ್ಷತೆ ವಹಿಸಿದ ಸಂಸ್ತೆಯ ಪ್ರ ಕಾರ್ಯದರ್ಶಿ ಭೀಮಣ್ಣ ಹೆರೂರ, ಸಿಆರಿ್ಪ ಎಂ.ಆರ್.ಡೋಣಿ ಮಾತನಾಡಿದರು. ಕ್ಲಸ್ಟರ ಮಟ್ಟದಲ್ಲಿ ನಿವೃತ್ತ ಶಿಕ್ಷಕರಾದ ಮುತ್ತಪ್ಪ ಪಾತ್ರೋಟಿ, ರೇವಣ ಮಗ್ರುಮಖಾನೆ, ಭೀಮಾಶಂಕರ ಪವಾರ, ವ್ಹಿ.ಎಸ್.ಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಸಹ ಕಾರ್ಯದರ್ಶಿ ಎಂ.ಎಂ.ಹಂಗರಗಿ, ಎಲ್.ವ್ಹಿ.ಕುಲಕರ್ಣಿ, ಅಲ್ಲಿಸಾಬ ಬಂಕಲಗಿ, ಪತ್ರಕರ್ತ ಪಂಡಿತ ಯಂಪೂರೆ, ಸಿದ್ದಣ್ಣ ಮಕ್ತೆದಾರ, ಶಾಂತಪ್ಪ ಮರಡಿ, ಭೀಮನಗೌಡ ಬಿರಾದಾರ, ಶಿವು ಪಲ್ಲೇದ, ಗುರು ಕುಲಕರ್ಣಿ, ಶಿಕ್ಷಕ ದರೇಣ್ಣವರ, ಮುಖ್ಯಗುರು ಅರುಣಕುಮಾರ ನಾಯ್ಕೋಡಿ, ಬಿ.ಎಸ್.ಪಾಟೀಲ, ಬಿ.ಎಸ್.ಕೆರಕಿ, ಚೆನ್ನಪ್ಪ ದೊಡಮನಿ, ವಿಟ್ಠಲ ಕೊರವಾರ, ಸದಾಶಿವ ಮ್ಯಾಗೆರಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು. ಅನೀತಾ ಸಂಗಡಿಗರು ಪ್ರಾರ್ಥಿಸಿದರು. ಚೈತ್ರಾ ಬಾಸಗಿ, ಕಿರ್ತಿ ಗುಂಡಳ್ಳಿ ಸ್ವಾಗತ ಗೀತೆ ಹಾಡಿದರು. ಬೋರಮ್ಮ ಗೋಲಗೇರಿ ಸಂಗಡಿಗರು ಭಾವ ಗೀತೆ ಹಾಡಿದರು. ಶಿಕ್ಷಕಿ ಅಶ್ವಿನಿ ಚವ್ಹಾಣ ಸ್ವಾಗತಿಸಿದರು. ಸಿಕ್ಷಕ ಎಂ.ಎಸ್.ಅಂಬಿಗೆರ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 